ರಾಜ್ಯ

ವಿದೇಶಿ ಸಂಸ್ಕೃತಿ ವ್ಯಾಲೆಂಟೈನ್ಸ್ ಡೇ ಆಚರಣೆಗೆ ಶ್ರೀ ರಾಮ ಸೇನೆ ವಿರೋಧ

ಧಾರವಾಡ Prajakiran.com : ವಿಕೃತ ಮನಸ್ಸಿನ ವಿದೇಶಿ ಸಂಸ್ಕೃತಿ ವ್ಯಾಲೆಂಟೈನ್ಸ್ ಡೇ ಆಚರಣೆಗೆ ಶ್ರೀ ರಾಮ ಸೇನೆ ಧಾರವಾಡ ವತಿಯಿಂದ ನಗರದ ದುರ್ಗಾ ದೇವಿ ದೇವಸ್ಥಾನದಲ್ಲಿ ಹಿರಿಯರ ಪಾದ ಪೂಜೆ ಮೂಲಕ ಪ್ರೀತಿ ದಿನಕ್ಕೆ ವಿರೋಧ ವ್ಯಕ್ತಪಡಿಸಲಾಯಿತು.

ಧಾರವಾಡ ದುರ್ಗಾ ದೇವಿ ದೇವಸ್ಥಾನದಲ್ಲಿ ಹಿರಿಯರ ಪಾದ ಪೂಜೆ ಸಲ್ಲಿಸಿ ನಮನ ಸಲ್ಲಿಸಿ ಹೂಮಳೆ ಮೂಲಕ ಹಿರಿಯರ ಆಶೀರ್ವಾದವನ್ನು ಶ್ರೀ ರಾಮ ಸೇನೆ ಕಾರ್ಯಕರ್ತರು ಪಡೆದರು.

 

ನಂತರ ನಗರದ ಕೆಸಿ ಪಾರ್ಕ್, ಸಾಧನಕೇರಿ ಪಾರ್ಕ್ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಲೆಂಟೈನ್ಸ್ ಡೇ ಕರಪತ್ರ ಹಂಚಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.

 

ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಮುಖಂಡರಾದ ಮಂಜು ಕಾಟಕರ್, ಮಹಾಲಿಂಗ ಅಗಳಿ, ಅಣ್ಣಪ್ಪ ದೇವಟಗಿ, ರಾಜು ಗಾಡಗೋಳಿ, ವಿಜಯ ದೇವರಮನಿ, ಬುದ್ಧು ಪಾಟೀಲ್, ಮೈಲಾರ ಗುಡ್ಡಪ್ಪನವರ, ರಾಮದಾಸ್ ದವಳಿ , ವಿಶ್ವಾಸ ಸೇರಿದಂತೆ ಶ್ರೀ ರಾಮ ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *