ರಾಜ್ಯ

ಧಾರವಾಡದ ಉಪನಗರ ಠಾಣೆ ಎದುರು ಮಧ್ಯರಾತ್ರಿ ದಿಢೀರ್ ಪ್ರತಿಭಟನೆ

*ಧಾರವಾಡದ ಉಪನಗರ ಪೊಲೀಸ್ ಠಾಣೆ ಎದುರು ಮಧ್ಯರಾತ್ರಿ ಆಟೋ ಚಾಲಕರ ದಿಢೀರ್ ಪ್ರತಿಭಟನೆ*

*ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳಿಗೆ ಸ್ಟೇಶನ್ ಬೇಲ್ ನೀಡಿದ ಪೊಲೀಸರ ಕ್ರಮಕ್ಕೆ ವ್ಯಾಪಕ ಖಂಡನೆ*

*ಆಟೋ ಚಾಲಕರ ಹೋರಾಟಕ್ಕೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಸಾಥ್*

*ಪೊಲೀಸರ ಮನವೊಲಿಕೆ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂದಕ್ಕೆ*

*ಮಾ.27ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಗೆ ನಿರ್ಧಾರ*

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ರೌಡಿಶೀಟರ್ ಗಳಾದ ನವೀನ್ ಶಲವಡಿ ಹಾಗೂ ಸತೀಶ ವಿರುದ್ಧ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಮುಕ್ತಂಸಾಬ ಸಲಿಕೆಗೆ ಹದಿನೇಳು ಹೊಲಿಗೆ ಬಿದ್ದರೂ ಯಾವುದೇ ಕಠಿಣ ಸೆಕ್ಷನ್ ಹಾಕದೆ ಸ್ಟೇಶನ್ ಬೇಲ್ ನೀಡಿ
ರಾತ್ರಿ ಮನೆಗೆ ಬಿಟ್ಟು ಕಳುಹಿಸಲು ಮುಂದಾದ ಉಪನಗರ ಪೊಲೀಸರ ಕ್ರಮ ಖಂಡಿಸಿ ನೂರಾರು ಆಟೋಚಾಲಕರು ಠಾಣೆ ಎದುರು ಜಮಾಯಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಇವರ ಹೋರಾಟಕ್ಕೆ ಜನಜಾಗೃತಿ ಸಂಘ ಅಧ್ಯಕ್ಷರಾದ ಬಸವರಾಜ ಕೊರವರ ಸಾಥ್ ನೀಡಿದರು.
ಅರ್ಧ ಗಂಟೆಗೂ ಅಧಿಕ ಪ್ರತಿಭಟನೆ ನಂತರ ಉಪನಗರ ಠಾಣೆ ಪಿ ಎಸ್ ಐ ಉಮೇಶ ಗೌಡ ಪಾಟೀಲ ಹಾಗೂ ಪೊಲೀಸರ ಮನವಿ ಮೇರೆಗೆ ಪ್ರತಿಭಟನೆ ಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದು ಮಾ. 27ರಂದು ಜಿಲ್ಲಾಧಿಕಾರಿ ಕಚೇರಿಯ ಎದುರು ಬೃಹತ್ ಪ್ರಮಾಣದಲ್ಲಿ ನಡೆಸಲಾಗುತ್ತದೆ ಎಂದು ಬಸವರಾಜ ಕೊರವರ ಎಚ್ಚರಿಸಿದರು.
ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾದರೆ ಅಮಾಯಕರು ಸಾಯಬೇಕೆ. ಮುಕ್ತಂಸಾಬಗೆ ಹೆಚ್ಚುಕಡಿಮೆ ಹದಿನೇಳು ಹೊಲಿಗೆ ಬಿದ್ದಿವೆ. ಅವನಿಗೆ ಏನಾದರೂ ಪ್ರಾಣಾಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಅಲ್ಲದೆ, ನಾನು ಖಾಕಿ ತೊಟ್ಟು ಹೊರಬಂದವ. ಅದರ ಬಗ್ಗೆ ನನಗೆ ಬಹಳ ಗೌರವವಿದೆ. ದಯವಿಟ್ಟು ಅದನ್ನು ಹಾಳು ಮಾಡಬೇಡಿ ಎಂದು ಕೈ ಮುಗಿದರು.
ಈಗ ಅವರಿಗೆ ನೀವು ಸ್ಟೇಶನ್ ಬೇಲ್ ನೀಡಿ ಹೊರಗಡೆ ಕಳುಹಿಸಿದರೆ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗುತ್ತದೆ. ಇದು ಖಾಕಿಗೆ ಆಗುವ ಅಗೌರವವಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರ ಮನವೊಲಿಕೆ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದು ಮಾರ್ಚ್ 27ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜನಜಾಗೃತಿ ಸಂಘ ಹಾಗೂ ಆಟೋಚಾಲಕರ ಸಂಘದಿಂದ ಆಟೋ ಚಾಲಕ ಮುಕ್ತಂಸಾಬ ಸಲಿಕೆ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ
ಬೃಹತ್ ಪ್ರತಿಭಟನೆ
ನಡೆಸಲಾಗುತ್ತದೆ.
ಸಾರ್ವಜನಿಕರ ಎದುರು ಖಾಕಿ ನಗೆಪಾಟಿಲಿಗೆ ಈಡಾಗದಂತೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತದೆ ಎಂದು ಜನಜಾಗೃತಿ ಸಂಘ ಅಧ್ಯಕ್ಷ ಬಸವರಾಜ ಕೊರವರ ತಿಳಿಸಿದರು.
ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ರೌಡಿಶೀಟರ್ ನವೀನ್ ಹಾಗೂ ಸತೀಶ್ ವಿರುದ್ಧ ಕಠಿಣ ಸೆಕ್ಷನ್ ಹಾಕದೆ ಗಂಭೀರವಾಗಿ ಗಾಯಗೊಂಡು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾದ ಮುಕ್ತಂಸಾಬ ಸಲಿಕೆ ಹೇಳಿಕೆ ಪಡೆಯದ ಪೊಲೀಸರ ಎಕ ಪಕ್ಷೀಯ ನಡೆಯನ್ನು ಆಟೋಚಾಲಕರು ತೀವ್ರವಾಗಿ ಖಂಡಿಸಿದರು.
ಉಪನಗರ ಪೊಲೀಸ್ ಠಾಣೆ ಪಿ ಎಸ್ ಐ ಉಮೇಶ ಪಾಟೀಲ ಹಾಗೂ ಪೊಲೀಸರ ಮನವೊಲಿಕೆ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಯಿತು.
ಈ ಪ್ರತಿಭಟನೆ ಯಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ‌ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸದಸ್ಯರಾದ ಆನಂದ ಪಾಟೀಲ, ಸುರೇಶ ಕೋರಿ, ಪ್ರಕಾಶ ರಾಠೋಡ, ಲಾಲಸಾಬ,
ಆಟೋ ಚಾಲಕರ ಸಂಘದ ಮುಖಂಡರಾದ ಮಲ್ಲೇಶ ಅಂಬಿಗೇರ, ನವೀನ್ ಸುಬೇದಾರ, ಖಾಜಾ ಚೌದರಿ, ಜಾಫರ್ ರಾಟಿಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *