ಬೆಳಗಾವಿ prajakiran.com : ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ಗೋಡೆ ಕುಸಿದು ಬಿದ್ದು ಅಜ್ಜಿ ಹಾಗೂ ಮೊಮ್ಮಗ ಮೃತಪಟ್ಟ ಘಟನೆ ಇಲ್ಲಿನ ಖಾನಾಪೂರ ತಾಲೂಕಿನ ಇಟಗಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ದೊಡ್ಡವ್ವ ಪಟ್ಟೇದ(60) ಹಾಗೂ ಮೊಮ್ಮಗ ಅಭಿಷೇಕ(3) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದಂಪತಿಗಳಾದ ಸುರೇಶ ಪಟ್ಟೇದ ಹಾಗೂ ಮಂಗಳಾ ಪಟ್ಟೇದ ಗಾಯಗೊಂಡಿದ್ದಾರೆ.
ಮನೆಯಲ್ಲಿ ಇದ್ದಾಗ ಗೋಡೆ ಕುಸಿದು, ಅಜ್ಜಿ ಹಾಗೂ ಮೊಮ್ಮಗ ಅಸುನೀಗಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.