ರಾಜ್ಯ

ಧಾರವಾಡ ಕೆ ಐ ಎ ಡಿ ಬಿಯಲ್ಲಿ ಮತ್ತೆ 40 ಕೋಟಿ ಅಕ್ರಮ

ಧಾರವಾಡ ಪ್ರಜಾಕಿರಣ.ಕಾಮ್ : ಕೆ ಐ ಎ ಡಿ ಬಿಯ ಬಹುಕೋಟಿ ಹಗರಣ ಬಗೆದಷ್ಟು ಆಳ ಎಂಬಂತಾಗಿದೆ.

ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವ್ಹಿ.ಡಿ. ಸಜ್ಜನ ಇವರು 9-7-2021 ರಿಂದ 30-4-2022 ರವರೆಗೆ ಒಟ್ಟು ಒಂಬತ್ತು ತಿಂಗಳ ಅವಧಿಯಲ್ಲಿ ಒಟ್ಟು 506 ಕಡತಗಳಿಗೆ ಭೂ ಪರಿಹಾರ ಹಂಚಿಕೆ ಮಾಡಿದ್ದಾರೆ.

ಅದರ ಒಟ್ಟು ಮೊತ್ತ 138 ಕೋಟಿಗೂ ಅಧಿಕ ಆರ್ ಟಿ ಜಿ ಎಸ್ ಮಾಡಿದ್ದಾರೆ. ಅದರಲ್ಲಿ 20 ಕೋಟಿ ಅಕ್ರಮ ಎಸಗಿರುವುದು ಈಗಾಗಲೇ ಸಿಐಡಿ ತನಿಖೆ ಪ್ರಗತಿ ಹಂತದಲ್ಲಿದೆ.

ಇವತ್ತು ನಮಗೆ ಮತ್ತೆ 40 ಕೋಟಿಗೂ ಅಧಿಕ ದಾಖಲೆಗಳು ದೊರೆತಿವೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಆರೋಪಿಸಿದರು.

ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಈವರೆಗೆ 506 ಕಡತಗಳ ಪೈಕಿ ಕೇವಲ 170 ಕಡತಗಳನ್ನು  ಮಾತ್ರ ತನಿಖೆಗೆ ನೀಡಿ ಉಳಿದ ಕಡತಗಳನ್ನು ಕೆ ಐ ಎ ಡಿಬಿ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ
ಉನ್ನತ ಮಟ್ಟದ ತನಿಖೆಗೆ ಹಾಜರುಪಡಿಸದೇ ಜಾಣಕುರುಡುತನ ತೋರಿಸಿರುವುದು ಏಕೆ ಎಂಬುದು ನಮ್ಮ ಪ್ರಶ್ನೆ ಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವ್ಹಿ.ಡಿ. ಸಜ್ಜನ ನಿವೃತ್ತಿ ಹೊಂದುವ ದಿನಾಂಕದಂದೆ ರೂ. 36,73,34,868/ ಮೊತ್ತದ ಕೆಲಗೇರಿ, ಮುಮ್ಮಿಗಟ್ಟಿ, ಕೋಟೂರ, ಬೇಲೂರ, ಉಣಕಲ್ಲ, ಗೋಕುಲ ಹಾಗೂ ಮುಳವಾಡ ಗ್ರಾಮದ ಜಮೀನುಗಳ ಕಡತಗಳಿಗೆ ಸಹಿ ಮಾಡಿದ್ದು  ದಾಖಲೆಗಳಿಂದ ಸ್ಪಷ್ಟವಾಗಿ ಕಂಡುಬಂದಿದೆ.

ಕಳೆದ 8 ರಿಂದ 10 ವರ್ಷದ ಹಿಂದೆಯೇ ಪರಿಹಾರ ಪಡೆದಿದ್ದರೂ  2021-2022 ರಲ್ಲಿ ಮತ್ತೆ ನಮ್ಮ ರೈತರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ, ಪರಿಹಾರ ಪಡೆದುಕೊಂಡ ಬಗ್ಗೆ ನಮಗೆ ಮಾಹಿತಿಯೇ ಇಲ್ಲವೆಂದು ಕೆಲವು ರೈತರು ಅಳಲು ತೋಡಿಕೊಂಡರು. 

ಈ‌ ಬಗ್ಗೆ ದಾಖಲೆ ಪರಿಶೀಲಿಸುವ ವೇಳೆ ಐ.ಡಿ.ಬಿ.ಐ. ಬ್ಯಾಂಕಿನಲ್ಲಿಯೇ ಇನ್ನೂ 14 ಖೊಟ್ಟಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ರೂ. 28,79,63,453,-   ಹಣವನ್ನು ಆರ್ ಟಿ ಜಿ ಎಸ್ ಮಾಡಿರುವುದು ಕಂಡು ಬಂದಿದೆ.

*ಅವುಗಳ ವಿವರ ಇಂತಿದೆ*
೧ ಮಾಳಯ್ಯ ಗಂಗಯ್ಯ ಸಂಬಾಳಮಠ ಉಣಕಲ್ಲ ಹೆಸರಿನಲ್ಲಿ
ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 3,72,60,952 /

೨ ಮಹದೇವ ಬಸಪ್ಪ ಚಲವಾದಿ ಮುಳವಾಡ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 60,80,000/-

೩ ಬಸವರಾಜ ರುದ್ರಪ್ಪ ಹೆಬಸೂರ , ಉಣಕಲ್ಲ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 1,14,13265/-

೪ ವಿನಾಯಕ ಶಂಕರರಾವ ನಾಯಕ ಉಣಕಲ್ಲ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 13,53,227/-

೫ ರಾಜೇಶ್ವರಿ ಬಸಲಿಂಗಪ್ಪ ಯರಗಟ್ಟಿ ಉಣಕಲ್ಲ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 18,88,224/-

೬ ಶಾಂತಾಬಾಯಿ ಖಾನಾಪುರ ಮುಮ್ಮಿಗಟ್ಟಿ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 57,61,734 /-

೭ ಶಾಂತಿಲಾಲ ಧನರಾಜ ಜೈನ ಗೋಕುಲ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 4,10,26,907/-

೮ ಶಾಂತಿಲಾಲ ಧನರಾಜ ಜೈನ ಗೋಕುಲ, ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 2,96,34,624/-

೯ ಸೂರಜ ಬಾಬು ಗೌಡ ಇಟಿಗಟ್ಟಿ
ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 2,84,62,500/-

೧೦ ನಾಗಪ್ಪ ಯಲ್ಲಪ್ಪ ಬೆಳ್ಳೇರಿ ಗೋಕುಲ
ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 2,58,05,000/-

೧೧ ಕೃಷ್ಣಪ್ಪ ಯಲ್ಲಪ್ಪ ಬೆಳ್ಳೆರಿ ಗೋಕುಲ
ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 2,91,85,000/-

೧೨ ಗುರುಶಾಂತ ವೀರಪ್ಪ ವಳಸಂಗಿ ಉಣಕಲ್ಲ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ 2,08,87,020/-

೧೩ ಶಿವರಾಜ ದ್ಯಾಮಣ್ಣ ದಾಂಡೇಲಿ ಗೋಕುಲ 2,88,60,000/ ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ /-

೧೪ ಫಕ್ಕೀರಪ್ಪ ಯಲ್ಲಪ್ಪ ಬಿಜಾಪುರ ಗೋಕುಲ 2,,03,45,000
ಐ.ಡಿ.ಬಿ.ಐ. ಬ್ಯಾಂಕ್ ಹುಬ್ಬಳ್ಳಿ /-

ಒಟ್ಟು 28,79,63,453/-
ಐ.ಡಿ.ಬಿ.ಐ. ಬ್ಯಾಂಕ್‌ನಲ್ಲಿ ಆದ ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ಆಗಲೇಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಬಸವರಾಜ ಕೊರವರ ತಿಳಿಸಿದರು.

ಇದರಲ್ಲಿರುವ ರೈತ ನಾಗಪ್ಪ ಯಲ್ಲಪ್ಪಾ ಬೆಳ್ಳೇರಿ, ಕೃಷ್ಣಪ್ಪ ಯಲ್ಲಪ್ಪ ಬೆಳ್ಳೇರಿ ಸಾಕಿನ ಹುಬ್ಬಳ್ಳಿ ಗೋಕುಲದ ರೈತ ಸಹೋದರರು 15-04-2010
ರಲ್ಲಿ ಮೊದಲ ಬಾರಿ ಪರಿಹಾರ ಪಡೆದಿದ್ದಾರೆ.

  ನಾಗಪ್ಪ ಯಲ್ಲಪ್ಪ ಬೆಳ್ಳೇರಿ ಎಂಬ ರೈತ 04-09-2019ರಲ್ಲಿಯೇ ಮರಣ ಹೊಂದಿದ್ದಾರೆ.

ಆದರೆ ಇವರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ 25-04-2022ರಲ್ಲಿ ಮತ್ತೆ ಹಣ ಪಡೆದಿದ್ದಾರೆ.

 ಕೃಷ್ಣಪ್ಪ ಯಲ್ಲಪ್ಪ ಬೆಳ್ಳೇರಿ ಹೆಸರಿನಲ್ಲಿ ಕೂಡ ಎರಡನೇ ಬಾರಿಗೆ ಪರಿಹಾರ ನೀಡಲಾಗಿದೆ. ಈ ಬಗ್ಗೆ ಅವರಿಗೆ ಈವರೆಗೆ ಮಾಹಿತಿ ಇರಲಿಲ್ಲ. ನಾವು ದಾಖಲೆ ಪರಿಶೀಲನೆ ನಡೆಸಿದಾಗ ಇದು ಬಯಲಿಗೆ ಬಂದಿದೆ ಎಂದು  ದಾಖಲೆ ತೋರಿಸಿದರು.

ಇದಲ್ಲದೆ, ದಿನಾಂಕ: 30-04-2022 ರಂದು ಒಂದೇ ದಿನ ಇನ್ನೂ ಕೆಲವೊಂದು ಬ್ಯಾಂಕುಗಳಾದ ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಹಾಗೂ ಮುಳವಾಡದ ಕೆಲವೊಂದು ಬ್ಯಾಂಕುಗಳಾದ ಮಹಾಲಕ್ಷ್ನಿ ಕೋ.ಆಪರೇಟಿವ್ ಸೊಸೈಟಿ ವಿಜಯಪುರ ಹಾಗೂ ಇತರೆ ಬ್ಯಾಂಕುಗಳಲ್ಲಿ ಸರಿಸುಮಾರು ರೂ. 11 ಕೋಟಿಗೂ ಅಧಿಕ ಹಗರಣ ನಡೆದಿದೆ.

 ಕರ್ನಾಟಕ ರಾಜ್ಯ ಪತ್ರದಲ್ಲಿ ಕೆಎಲ್‌ಆರ್ ಸರಕಾರ, ಕರ್ನಾಟಕ ಸರಕಾರ ಅಂತಾ ಅಧಿಸೂಚನೆಯಲ್ಲಿ ಒಳಗೊಂಡಿರುವಂತಹ ಉದ್ಯಾನ ವನ, ರಸ್ತೆ, ಸರಕಾರದ ಜಮೀನುಗಳಿಗೆ ಕೂಡ  ಖೊಟ್ಟಿ ದಾಖಲೆ ಸೃಷ್ಟಿಸಿ ಪರಿಹಾರ ಪಾವತಿಸಿದ್ದು ದಾಖಲೆಗಳಿಂದ ಕಂಡುಬಂದಿವೆ ಎಂದು ದೂರಿದರು.

ಇದರಲ್ಲಿ ತಹಶೀಲ್ದಾರ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಮತ್ತು ಹಿರಿಯ ಅಧಿಕಾರಿಗಳು ಕೂಡ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಇದು ಉನ್ನತ ಮಟ್ಟದಲ್ಲಿ ತನಿಖೆಯಾದಲ್ಲಿ ಮಾತ್ರ ಬಹಿರಂಗವಾಗಲಿದೆ ಎಂದು ಒತ್ತಾಯಿಸಿದರು.

ಈ ಹಗರಣದಲ್ಲಿ ಕೇಂದ್ರ ಕಚೇರಿಯ ವಿಶೇಷ ಜಿಲ್ಲಾಧಿಕಾರಿಗಳನ್ನು ಮತ್ತು ಲೆಕ್ಕಪರಿಶೋಧಕರನ್ನು ಉನ್ನತ ತನಿಖೆಗೆ ಒಳಪಡಿಸಲೇಬೇಕು.

ಈ ಬಹುಕೋಟಿ ಹಗರಣದಿಂದ ಸರಕಾರಕ್ಕೆ ನೂರಾರು ಕೋಟಿ ನಷ್ಟವನ್ನುಂಟು ಮಾಡಿ ಇದೇ ದುಡ್ಡಿನಿಂದ  ಹಲವು ಏಜೆಂಟರು ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಪಾಸ್ತಿಗಳನ್ನು ಮಾಡಿದ್ದು, ತನಿಖೆಗೆ ಮುನ್ನವೇ ಹೆದರಿ,ಈಗಾಗಲೇ ಬೇರೆಯವರ ಹೆಸರಿಗೆ ವರ್ಗಾಯಿಸಿದ್ದು ಕೂಡ ನಮಗೆ ದಾಖಲೆಗಳು ಲಭ್ಯವಾಗಿವೆ ಎಂದರು.

ಕಳೆದ ಒಂದುವರೆ ವರ್ಷದಿಂದ ನಾವು ನಿರಂತರವಾಗಿ ತೀವ್ರ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರಕಾರ ಈವರೆಗೆ ಸಕರಾತ್ಮಕವಾಗಿ ಸ್ಪಂದಿಸಿಲ್ಲ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಿಮಿನಲ್ ಮೊಖದ್ದಮೆ ದಾಖಲಿಸಿ ಅವರಿಂದ ಸಂಸ್ಥೆಗೆ ಆದ ಎಲ್ಲಾ ಹಣವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು‌

ಒಂದು ವೇಳೆ ನಮಗೆ ನ್ಯಾಯ ದೊರಕದೇ ಇದ್ದ ಪಕ್ಷದಲ್ಲಿ ನಾವೇ ಅನಿವಾರ್ಯವಾಗಿ  ಕಾನೂನು ಹೋರಾಟ ಮಾಡಬೇಕಾಗುತ್ತದೆ‌ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಎಚ್ಚರಿಸಿದರು.

ಈ‌ ಪತ್ರಿಕಾಗೋಷ್ಠಿಯಲ್ಲಿ  ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಹಾಗೂ ಗೋಕುಲ್ ಗ್ರಾಮದ ನೋಂದರೈತರಾದ ಕೃಷ್ಣಪ್ಪ ಯಲ್ಲಪ್ಪ ಬೆಳ್ಳೇರಿ, ಮೃತ ರೈತ ನಾಗಪ್ಪ ಬೆಳ್ಳೇರಿ ಮಗ ಸಂಜೀವ ನಾಗಪ್ಪ ಬೆಳ್ಳೇರಿ, ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *