ಅಂತಾರಾಷ್ಟ್ರೀಯ

ಭಯೋತ್ಪಾದಕನ ನಂಟು ಭಟ್ಕಳದಲ್ಲಿ ಎನ್ .ಐ.ಎ ಯಿಂದ ಮೂವರು ವಶಕ್ಕೆ…..!?

ಕಾರವಾರ prajakiran.com : ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ .ಐ. ಎ ಅಧಿಕಾರಿಗಳ ತಂಡ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ದಾಳಿ ನಡೆಸಿದೆ.

ಭಟ್ಕಳದ ಉಮರ್‌ ಸ್ಟ್ರೀಟ್ ,ತೆಂಗಿನ ಗುಂಡಿ ಹಾಗೂ ಸಾಗರ ರಸ್ತೆಯಲ್ಲಿರುವ ಮನೆಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದೆ.

ಭಟ್ಕಳದ ಅಮೀನ್ ಜುವೇಬ್, ಜವಾದ್ ಎಂಬ ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.

ಈ ಹಿಂದೆ ದುಬೈ ನಲ್ಲಿ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕ ನೋಬ್ಬನ ತಮ್ಮನನ್ನೂ ಎನ್ .ಐ.ಎ ವಶಕ್ಕೆ ಪಡೆದಿದೆ.

ಸ್ಥಳದಲ್ಲಿ ಕೆ.ಎಸ್.ಆರ್.ಪಿ ತುಕಡಿ ನಿಯೋಜಿಸಲಾಗಿದೆ.

ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜು ಮೊಕ್ಕಾಂ ಹೂಡಿದ್ದಾರೆ.

ಬಂಧಿತರು ಐಸಿಸ್ ನಂಟಿರುವ ಆರೋಪದ ಕುರಿತು ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *