ಜಿಲ್ಲೆ

ನಿವೃತ್ತರಾದ ಪ್ರಧಾನ ಗುರುಮಾತೆಗೆ ಆತ್ಮೀಯ‌ ಸನ್ಮಾನ

ಧಾರವಾಡ prajakiran.com ; ಸುಮಾರು 30 ವರ್ಷಗಳ‌ ಕಾಲ ಶಿಕ್ಷಕಿಯಾಗಿ ಸಮಾಜದಲ್ಲಿ ಹಲವಾರು ವ್ಯಕ್ತಿಗಳನ್ನು ಉನ್ನತ ಹುದ್ದೆಗೆ ಏರಲು ಹಗಲಿರುಳು ಶ್ರಮಿಸಿದ ಪ್ರಧಾನ ಗುರುಮಾತೆಗೆ ಆತ್ಮೀಯ ಸನ್ಮಾನ ‌ಮಾಡಿ ಗೌರವಿಸಲಾಯಿತು.

ಧಾರವಾಡದ ಮಾಳಾಪೂರದಲ್ಲಿರುವ ರಾಜನಗರ ನಿವಾಸಿಯಾಗಿರುವ ಜಿ.ಎನ್. ಅಕ್ಕಿ ಟೀಚರ್ ಅವರೇ ಹೀಗೆ ಸನ್ಮಾನಿತರಾದವರು.

ಪ್ರಾಥಮಿಕ ಶಾಲೆಗೆ ಮೊದಲು ಶಿಕ್ಷಕರಾಗಿ ಇವರು ಆಯ್ಕೆಯಾಗಿದ್ದು, ಧಾರವಾಡ ತಾಲೂಕಿನ ಯಾದವಾಡ ಗ್ರಾಮಕ್ಕೆ ಸರಿಸುಮಾರು 24 ವರ್ಷ ಶಿಕ್ಷಕಿಯಾಗಿ ಊರಿನ ಅದೇಷ್ಟೊ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿಸಲು ಪರಿಚಯಿಸಿದವರು ಇವರು.

ನಂತರ ಯಾದವಾಡ ಊರಿನಿಂದ 2016 ರಲ್ಲಿ ಉಪ್ಪಿನಬೆಟಗೇರಿ ಊರಿಗೆ ವರ್ಗವಾಗಿ 2020 ರವರೆಗೆ ಕೆಲಸ ಮಾಡಿ, ಅಲ್ಲಿಂದ ಮಾದನಭಾವಿ ಊರಿಗೆ ಪ್ರಧಾನ ಗುರುಮಾತೆಯಾಗಿ ವರ್ಗವಣೆಗೊಂಡು ಅಲ್ಲಿಯೂ ಉತ್ತಮ ಹೆಸರನ್ನು ಮಾಡಿ ಶಾಲೆಗೆ ಕೀರ್ತಿ ತರುವಂತಹ ಕೆಲಸವನ್ನು ಮಾಡಿದ್ದಾರೆ.

ಇಂತಹ ಪ್ರಧಾನ ಗುರುಮಾತೆ ಮಾರ್ಚ್ 31 ಕ್ಕೆ ನಿವೃತ್ತರಾಗಿದ್ದಕ್ಕೆ ಊರಿನ ಎಸ್.ಡಿ.ಎಂ.ಸಿ ಸದಸ್ಯರು ಅಧ್ಯಕ್ಷರು ಹಾಗೂ ಶಾಲೆಯ ಸಿಬ್ಬಂದಿ ಹಾಗೂ ಶಿಷ್ಯವರ್ಗ ಪ್ರೀತಿಯ ಸನ್ಮಾನ ಮಾಡಿ ಗುರುವಂದನೆ ಸಲ್ಲಿಸಿದ್ದಾರೆ.

ಇವರ ನಿವೃತ್ತಿ ಜೀವನ ನೆಮ್ಮದಿಯಿಂದ ಸಾಗಲಿ ಎನ್ನುವುದು ನಮ್ಮ ಪ್ರಜಾಕಿರಣ.ಕಾಮ್ ಆಶಯ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *