ರಾಜ್ಯ

ಧಾರವಾಡದಲ್ಲಿ ಟಾಟಾ ಮೋಟಾರ್ಸ್ ಗ್ರೂಪ್ ಉದ್ಯೋಗಿಗಳಿಗೆ ಮಹಾ ವ್ಯಾಕ್ಸಿನೇಷನ್ ಡ್ರೈವ್

ಧಾರವಾಡ prajakiran.com : ಟಾಟಾ ಮೋಟಾರ್ಸ್ ಗ್ರೂಪ್ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಎಚ್ ಸಿ ಜಿ ಎನ್ ಎಮ್ ಆರ್ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ಧಾರವಾಡ ನಗರದ ಕೆಲಗೇರಿಯಲ್ಲಿರುವ ಗುಡ್ಡದಮಠ ಕಲ್ಯಾಣ ಮಂಟಪದಲ್ಲಿ ಭಾನುವಾರ ಕೋವಿಡ್ 19 ಮೆಗಾ ವ್ಯಾಕ್ಸಿನೇಷನ್ ಡ್ರೈವ್ ಗೆ ಚಾಲನೆ ನೀಡಲಾಯಿತು.

ಕೊರೋನ ವೈರಸ್ ನಿಯಂತ್ರಣಕ್ಕಾಗಿ ಈ ಲಸಿಕಾ ಮೆಗಾ ಡ್ರೈವ್ ಆಯೋಜನೆ ಮಾಡಲಾಗಿದು ಇದರ ಸದುಪಯೋಗವನ್ನು ಟಾಟಾ ಮೋಟಾರ್ಸ್ ಗ್ರೂಪ್ ಉದ್ಯೋಗಿಗಳು ಹಾಗೂ ಕುಟುಂಬ ಸದಸ್ಯರು ಪಡೆಯಬೇಕು ಹಾಗೂ ಈಗಾಗಲೇ ಎಲ್ಲ ಉದ್ಯೋಗಿಗಳು ಹಾಗೂ ಕುಟುಂಬ ಸದಸ್ಯರ ಸುರಕ್ಷತಾ ನಿಟ್ಟಿನಲ್ಲಿ ಈ ಮಹಾ ವ್ಯಾಕ್ಸಿನೇಷನ್ ಡ್ರೈವ್ ಹಮ್ಮಿಕೊಳ್ಳಲಾಗಿದೆ ಎಂದು ಟಾಟಾ ಮೋಟಾರ್ಸ್ ಗ್ರೂಪ್ ತಿಳಿಸಿದೆ.

ಈ ಸಂದರ್ಭದಲ್ಲಿ ಎಚ್ ಸಿ ಜಿ ಎನ್ ಎಂ ಆರ್ ಆಸ್ಪತ್ರೆ ಮುಖ್ಯಸ್ಥ ಡಾ‌.ಜೈಕೀಶನ, ಅನಂತ ಶಾನಭೋಗ, ಸೋಮನಾಥ್ ರಾಯಕೋಡಿ, ಸಂಗಮೇಶ್ವರ ವಾರಿ, ಟಾಟಾ ಮೋಟಾರ್ಸ್ ಕ್ಯಾಪ್ಟನ್ ಪ್ರದೀಪ್ ಪಾಟೀಲ್, ಡಾ. ಮಹ್ಮದ್ ಶರೀಫ್, ಡಾ‌. ರಘುನಾಥ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *