ರಾಜ್ಯ

ಹಿರಿಯ ಕವಿ ಡಾ.‌ ವಿ.ಸಿ. ಐರಸಂಗ ಇನ್ನು ನೆನಪು ಮಾತ್ರ

ಧಾರವಾಡ prajakiran.com : ಹಿರಿಯ ಕವಿ ಡಾ‌ ವಿ ‌ಸಿ ಐರಸಂಗಅವರು ಶುಕ್ರವಾರ ಬೆಳಗಿನ ಜಾವ ತಮ್ಮ 91  ‌ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಅವರು ಕಳೆದ ಹಲವು ದಿನಗಳಿಂದಅನಾರೋಗ್ಯದಿಂದ ಬಳಲುತ್ತಿದ್ದರು. ರಕ್ತ ಹೀನತೆಯಿಂದ ಅವರು ಬಳಲುತ್ತಿದ್ದರು. ಹೀಗಾಗಿ ಅವರನ್ನು ಧಾರವಾಡದ ಜರ್ಮನ್ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದರು. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಡಾ. ವಿ ಸಿ ಐರಸಂಗ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಗೌರವ ಡಾಕ್ಟರೇಟ್ […]

ಜಿಲ್ಲೆ

ಧಾರವಾಡದ ನಿವೃತ್ತ ಶಿಕ್ಷಕ ಬಾಬುಲಾಲ್ ಎಚ್ ಪಾಗೆ ಇನ್ನಿಲ್ಲ

ಧಾರವಾಡ prajakiran.com : ಇಲ್ಲಿಯ ಗಾಂಧಿ ನಗರದ ಮದಿನಾ ಕಾಲೋನಿ ನಿವಾಸಿ ಹಾಗೂ ಅಂಜುಮನ್ ಸಂಸ್ಥೆಯ ನಿವೃತ್ತ ಶಿಕ್ಷಕರಾದ ಬಾಬುಲಾಲ್ ಎಚ್ ಪಾಗೆ (71) ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ ಗುರುವಾರ ಸಂಜೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಹುಬ್ಬಳ್ಳಿ ವಿವೇಕಾನಂದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದರು. ಅವರು ಇಬ್ಬರು ಪುತ್ರಿಯರು ಹಾಗೂ ಬಿಲ್ಡರ್ ಸಮೀರ್ ಪಾಗೆ ಸೇರಿ ಇಬ್ಬರು ಪುತ್ರರು, ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಇವರ ಅಂತಿಮ ಯಾತ್ರೆ […]

ಅಂತಾರಾಷ್ಟ್ರೀಯ

ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅನಾರೋಗ್ಯದಿಂದ ನಿಧನ

ನವದೆಹಲಿ prajakiran.com : ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ (74) #RamVilasPaswan ಅವರು ಅನಾರೋಗ್ಯದಿಂದ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಕೆಲವು ವಾರಗಳ ಹಿಂದೆಯಷ್ಟೇ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ತಂದೆ ನಿಧನವಾಗಿರುವ ಕುರಿತು ಪುತ್ರ ಚಿರಾಗ್ ಪಾಸ್ವಾನ್ ಟ್ವೀಟ್ ಮೂಲಕ ಖಚಿತ ಪಡಿಸಿದ್ದಾರೆ. ರಾಮವಿಲಾಸ್ ಪಾಸ್ವಾನ್ ಅವರು ಲೋಕಜನಶಕ್ತಿ ಪಕ್ಷದ ಸಂಸ್ಥಾಪಕರಾಗಿ ರಾಷ್ಟ್ರರಾಜಕಾರಣದಲ್ಲಿ ಮಿಂಚಿದ್ದ  ಅವರು ಐದು ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿದ್ದರು. ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ನಿಧನರಾದ ಸುದ್ದಿ […]

ರಾಜ್ಯ

ಹಿರಿಯ ಸಾಹಿತಿ, ವಿಮರ್ಶಕ ಡಾ. ಜಿ. ಎಸ್. ಆಮೂರ ಇನ್ನಿಲ್ಲ  

ಬೆಂಗಳೂರು prajakiran.com : ನಾಡಿನ ಹಿರಿಯ ಸಾಹಿತಿ, ವಿಮರ್ಶಕರಾಗಿದ್ದ ಡಾ. ಜಿ.ಎಸ್. ಆಮೂರ (95) ಅವರು ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ವಿಧಿವಶರಾದರು. ಅವರು ಕಳೆದ ಹದಿನೈದು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ. ಡಾ. ಗುರುರಾಜ ಶ್ಯಾಮಾಚಾರ ಆಮೂರರು (ಜಿ.ಎಸ್. ಆಮೂರರು) ಹಲವು ದಶಕಗಳಿಂದ ಧಾರವಾಡದಲ್ಲಿ ನೆಲೆಸಿರುವ ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿಗಳಾಗಿದ್ದಾರೆ.   ಇವರ “ಭುವನದ ಭಾಗ್ಯ”  ಕೃತಿಗೆ ೧೯೯೬ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. […]

ರಾಜ್ಯ

ಬೆಳಗಾವಿಯ ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಇನ್ನಿಲ್ಲ

ಬೆಳಗಾವಿ Prajakiran.com : ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮದೆ ಆದ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದ್ದ ಪ್ರಭಾವಿ ಕಾಂಗ್ರೆಸ್ ಮುಖಂಡ ಅದರಲ್ಲೂ ಸವದತ್ತಿ ಜನತೆಯ ನೆಚ್ಚಿನ ಕಣ್ಮಣಿ ಆಗಿದ್ದ ಆನಂದ ಚೋಪ್ರಾ ಅವರು ನಿಧನರಾಗಿದ್ದಾರೆ . ಶನಿವಾರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ಅವರು ನಿಧನರಾದರೆಂದು ಪ್ರಾಥಮಿಕ ವರದಿಗಳು ತಿಳಿಸಿವೆ.ಅವರು ವೃದ್ಧ ತಾಯಿ, ಪತ್ನಿ ,ಪುತ್ರಿ, ಪುತ್ರನನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರು ಸವದತ್ತಿ ಕ್ಷೇತ್ರದಿಂದ ಒಂದು ಬಾರಿ ಪಕ್ಷೇತರರಾಗಿ, ಮತ್ತೊಂದು […]

ರಾಜ್ಯ

ಕೋವಿಡಗೆ ಹುಬ್ಬಳ್ಳಿ-ಧಾರವಾಡ ನಿವೃತ್ತ ಎಸಿಪಿ ಬಲಿ….!

ಹುಬ್ಬಳ್ಳಿ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕೋವಿಡ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಳವಾಗುತ್ತ ಸಾಗಿದೆ. ಹುಬ್ಬಳ್ಳಿ-ಧಾರವಾಡ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಎಂ.ವಿ ನಾಗನೂರುಅವರು ಕೋವಿಡ್ ಸೋಂಕಿನಿಂದ ಚಿಕಿತ್ಸೆ ಫಲಿಸದೆ ಅವರು ನಿನ್ನೇ ರಾತ್ರಿ ಸಾವನ್ನಪ್ಪಿದ್ದಾರೆ. ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳಲು ಅವರಿಗೆ ಕಿಮ್ಸ್ ನಲ್ಲಿ  ಪಾಸ್ಲಾ ಚಿಕಿತ್ಸೆ ಕೋಡಲು ತಯಾರಿ  ನಡೆದಿತ್ತು. ಒಬ್ಬ ಪ್ಲಾಸ್ಮಾ ದಾನಿ ಮುಂದೆ ಬಂದರೂ ಅವರ ಹಿಮೋಗ್ಲೋಬಿನ್ […]