ರಾಜ್ಯ

ಕಿಲ್ಲರ್ ಕರೋನಾಕ್ಕೆ ಹಾಸನದಲ್ಲಿ ಭಾನುವಾರ ಇಬ್ಬರು ಸಾವು

ಹಾಸನ prajakiran.com : ಜಿಲ್ಲೆಯಲ್ಲಿ ಭಾನುವಾರ ಸಹ ಕೋವಿಡ್ 19 ಗೆ ಇಬ್ಬರು ಮೃತಪಟ್ಟಿದ್ದಾರೆ. ಆ ಮೂಲಕ ಹಾಸನ ಜಿಲ್ಲೆಯಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಹಾಸನ ನಗರದ 57 ವರುಷದ ಪುರುಷ ಹಾಗೂ ಆಲೂರು ತಾಲ್ಲೂಕಿನ 45 ವರ್ಷದ ಮಹಿಳೆ ಸೋಂಕಿನಿಂದ ಕೊವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಾಸನ‌ ನಗರದ 57 ವರ್ಷದ ಸೋಂಕಿತ ವ್ಯಕ್ತಿ ಜು 5ರಂದು ನಗರದ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಜು 10 ರಂದು ಐ.ಸಿ.ಯು ನಲ್ಲಿ ಇರಿಸಿ ವೆಂಟಿಲೇಟರ್ ಸೌಲಭ್ಯ […]

hubli kims
ರಾಜ್ಯ

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಮೂವರು ನರ್ಸ್ ಗಳಿಗೆ ಕರೋನಾ …!

ಹುಬ್ಬಳ್ಳಿ prajakiran.com :  ಮಹಾಮಾರಿ ಕರೋನಾ ವೈರಸ್ ಸೋಂಕು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರ ನಂತರ ಇದೀಗ ನರ್ಸ್ ಗಳನ್ನು ವ್ಯಾಪಿಸಿದೆ. ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿರುವ ಮೂವರು ಶುಶ್ರೂಷಕಿಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಆರಂಭದಲ್ಲಿ ಒಬ್ಬರಿಗೆ ಹರಡಿತ್ತು. ಅವರ ಸಂಪರ್ಕದಿಂದ ಮತ್ತಿಬ್ಬರಿಗೆ ತಗುಲಿದೆ. ಇದರಿಂದಾಗಿ ಇದೀಗ ಮೂವರು ನರ್ಸಗಳಿಗೆ ಕರೋನಾ ಕಾಣಿಸಿಕೊಂಡಂತಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಕೋವಿಡ್ ಕೇರ್ ಸೆಂಟರ್ ಸಿಬ್ಬಂದಿ ಮತ್ತಷ್ಟು ಆತಂಕಕ್ಕೆ ಸಿಲುಕಿ, ಕಣ್ಣೀರು ಸುರಿಸಿದ್ದಾರೆ.   ಸೋಂಕಿತ […]

ರಾಜ್ಯ

ರಾಜ್ಯದಲ್ಲಿ ಗುರುವಾರ ಕರೋನಾ ಮಹಾಸ್ಪೋಟ : 19 ಸಾವು,1502 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 19 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 1502 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ   18016 ಕ್ಕೆ ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 271  ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 8334   ಜನ ಗುಣಮುಖರಾಗಿದ್ದು, 9406    ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  161 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ […]

ರಾಜ್ಯ

ಗಣಿನಾಡು ಬಳ್ಳಾರಿಯಲ್ಲಿ ಕಿಲ್ಲರ್ ಕರೋನಾ ಅಟ್ಟಹಾಸಕ್ಕೆ ಈವರೆಗೆ 32 ಬಲಿ ….!

ಬಳ್ಳಾರಿ prajakiran.com : ಗಣಿನಾಡು ಬಳ್ಳಾರಿಯಲ್ಲಿ ಕಿಲ್ಲರ್ ಕರೋನಾಕ್ಕೆ ಈವರೆಗೆ 32 ಜನ ಸಾವನ್ನಪ್ಪಿದ್ದು, ಸೋಂಕು ಸಾವಿರದ ಗಡಿ ಸಮೀಪಿಸಿರುವುದರಿಂದ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಕಳೆದ ಹದಿನೈದು ದಿನಗಳಿಂದ ಸಾವಿನ ಸಂಖ್ಯೆ ಹಾಗೂ ಸೋಂಕಿನ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಈಗಾಗಲೇ 919 ಜನರಿಗೆ ಸೋಂಕು ವಕ್ಕರಿಸಿರುವುದು ಜನತೆಯನ್ನು ಕಂಗಾಲಾಗುವಂತೆ ಮಾಡಿದೆ. ತೋರಣಗಲ್ ನಲ್ಲಿರುವ ಜಿಂದಾಲ್ ಉಕ್ಕಿನ ಕಾರ್ಖಾನೆಯ ಸಿಬ್ಬಂದಿಯಿಂದಲೇ ಈವರೆಗೆ 400 ಕರೋನಾ ಪ್ರಕರಣ  ಪತ್ತೆಯಾಗಿದ್ದು, ದಿನದಿಂದ ದಿನಕ್ಕೆ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. […]

hubli kims
ರಾಜ್ಯ

ಧಾರವಾಡದಲ್ಲಿ ಮತ್ತಿಬ್ಬರು ಪೊಲೀಸ್, ಸರಕಾರಿ ಸಿಬ್ಬಂದಿ, ಅಧಿಕಾರಿಗಳಿಗೆ ಕರೊನಾ ಕಂಟಕ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ಮತ್ತಿಬ್ಬರು ಪೊಲೀಸ್, ಹಾಗೂ ಜಿಲ್ಲಾ ಪಂಚಾಯತ್ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೂ ಕರೋನಾ ಕಂಟಕ ಎದುರಾಗಿದೆ. ಧಾರವಾಡ ಜಿಲ್ಲಾ ಪಂಚಾಯತ್  ಕಂಪ್ಯೂಟರ್ ಆಪರೇಟರ್ ಆಗಿದ್ದ ಮಹಿಳಾ ಸಿಬ್ಬಂದಿಗೂ ಮಂಗಳವಾರ ಕರೋನಾ ವೈರಸ್ ಆವರಿಸಿರುವುದು ಇತರ ಸಿಬ್ಬಂದಿಗೂ ಕಳವಳ ಮೂಡಿಸಿದೆ. ಅದೇ ರೀತಿ ಧಾರವಾಡದ ಮಹಿಳಾ ಮತ್ತು ಮಕ್ಕಳಅಭಿವೃದ್ದಿ ಇಲಾಖೆ ಸಿಡಿಪಿಒ ಒಬ್ಬರಿಗೆ ಗುರುವಾರ ಸೋಂಕು ಹರಡಿರುವುದು ಇಡೀ ಇಲಾಖೆಯ ಸಿಬ್ಬಂದಿಯನ್ನೇ ಬೆಚ್ಚಿಬೀಳಿಸಿದೆ. ಅದರಲ್ಲೂ ಕರೋನಾ ಸೇನಾನಿಗಳಾದ […]