ಹುಬ್ಬಳ್ಳಿ prajakiran.com : ಮಹಾಮಾರಿ ಕರೋನಾ ವೈರಸ್ ಸೋಂಕು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರ ನಂತರ ಇದೀಗ ನರ್ಸ್ ಗಳನ್ನು ವ್ಯಾಪಿಸಿದೆ.
ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿರುವ ಮೂವರು ಶುಶ್ರೂಷಕಿಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಆರಂಭದಲ್ಲಿ ಒಬ್ಬರಿಗೆ ಹರಡಿತ್ತು. ಅವರ ಸಂಪರ್ಕದಿಂದ ಮತ್ತಿಬ್ಬರಿಗೆ ತಗುಲಿದೆ. ಇದರಿಂದಾಗಿ ಇದೀಗ ಮೂವರು ನರ್ಸಗಳಿಗೆ ಕರೋನಾ ಕಾಣಿಸಿಕೊಂಡಂತಾಗಿದೆ.
ಈ ವಿಷಯ ಗೊತ್ತಾಗುತ್ತಿದ್ದಂತೆ ಕೋವಿಡ್ ಕೇರ್ ಸೆಂಟರ್ ಸಿಬ್ಬಂದಿ ಮತ್ತಷ್ಟು ಆತಂಕಕ್ಕೆ ಸಿಲುಕಿ, ಕಣ್ಣೀರು ಸುರಿಸಿದ್ದಾರೆ.
ಸೋಂಕಿತ ನರ್ಸ್ ಒಬ್ಬರಿಗೆ ಒಂಬತ್ತು ತಿಂಗಳ ಮಗುವಿದೆ. ಹೀಗಾಗಿ ತಮ್ಮ ಜೀವವನ್ನು ಒತ್ತೆಯಿಟ್ಟು ಇನ್ನೊಬ್ಬರ ಪ್ರಾಣವನ್ನು ಉಳಿಸಲು ಶ್ರಮಿಸುತ್ತಿರುವ ಕರೋನಾ ಸೇನಾನಿಗಳಿಗೆ ಕರೋನಾ ಕಾಟ ಕೊಡುತ್ತಿರುವುದರಿಂದ ಸಿಬ್ಬಂದಿ ಬೇಸತ್ತಿದ್ದಾರೆ.
ಈ ಹಿಂದೆ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಧಾರವಾಡದ ಕೆಂಪಗೇರಿ ವೈದ್ಯರೊಬ್ಬರಿಗೆ ಹಾಗೂ ಅವರ ಇಬ್ಬರು ಮಕ್ಕಳಿಗೆ ಕರೋನಾ ವಕ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.