ರಾಜ್ಯ

ಧಾರವಾಡದ ಹಲವು ಹಳ್ಳಿ, ಬಡಾವಣೆಗೆ ಕರೋನಾ ಕಂಟಕ : 121ಕ್ಕೆ ಏರಿಕೆ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಮತ್ತೆ 10  ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಸೋಂಕಿತರು ಧಾರವಾಡದ ವಿವಿಧ ಬಡಾವಣೆಯ ಜನರಿದ್ದರೆ, ಎರಡು ಹಳ್ಳಿಗೂ ವ್ಯಾಪಿಸಿದೆ. DWD 112 –  ಪಿ-  6840   (20 ವರ್ಷ , ಪುರುಷ )    ಇವರು ಹುಬ್ಬಳ್ಳಿ ಅರವಿಂದ ನಗರ  ನಿವಾಸಿ, ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ( ILI)ಬಳಲುತ್ತಿದ್ದರು. DWD – 113  ಪಿ- 6841   ( 39 […]

ಅಂತಾರಾಷ್ಟ್ರೀಯ

ದುಬೈಯಿಂದ ಗರ್ಭಿಣಿ ಪತ್ನಿಯನ್ನು ಊರಿಗೆ ಕಳುಹಿಸಿದ ಪತಿ ಹೃದಯಾಘಾತದಿಂದ ಸಾವು

ತಿರುವನಂತಪುರ (ಕೇರಳ) prajakiran.com : ದುಬೈಯಿಂದ ತನ್ನ ಗರ್ಭಿಣಿ ಪತ್ನಿಯನ್ನು ಊರಿಗೆ ಕಳುಹಿಸಲು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದ  ನಿಧಿನ್ ಚಂದ್ರನ್ ಎಂಬ ಯುವಕ ಮತ್ತೆಂದೂ ಬಾರದ ಊರಿಗೆ ಪ್ರಯಾಣಿಸಿದ್ದಾನೆ. ಭಾರತದಲ್ಲಿ ಕರೋನಾ ವ್ಯಾಪಿಸಲು ತೊಡಗಿದಾಗ ಹೊರದೇಶಗಳಿಂದ ದೇಶಕ್ಕೆ ಬರುವ ವಿಮಾನ ಸಂಚಾರ ನಿಷೇಧಗೊಂಡ ಸಂದರ್ಭದಲ್ಲಿ ದುಬೈಯಲ್ಲಿದ್ದ ಏಳು ತಿಂಗಳ ಗರ್ಭಿಣಿ ಮಡದಿ ಆದಿರಾಳಿಗೆ ಊರಿಗೆ ಹೋಗಲು ವ್ಯವಸ್ಥೆ ಮಾಡಬೇಕೆದು ಆಕೆಯ ಮೂಲಕವೇ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು ಇದೇ ಕೇರಳದ ಪೆರಾಂಬ್ರ ಎಂಬ ಹಳ್ಳಿಯ 28 ವರ್ಷದ  ಯುವಕ ನಿಧಿನ್ […]

ಅಪರಾಧ

ಗಂಡ-ಹೆಂಡತಿ ಜಗಳ ಸಾವಿನಲ್ಲಿ ಅಂತ್ಯ

ಬೈಲಹೊಂಗಲ prajakiran.com : ಗಂಡ-ಹೆಂಡತಿ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಪಟ್ಟಣದ ಚನ್ನಮ್ಮ 1ನೇ ಕ್ರಾಸ್ ನಲ್ಲಿ ಮಂಗಳವಾರ ನಡೆದಿದೆ. ಪತಿ ಗುರುನಾಥ ನಾರಾಯಣ ತಾವರೆ (45), ಈತನ ಪತ್ನಿ ಮೀನಾಕ್ಷಿ ನಾರಾಯಣ ತಾವರೆ( 32) ಆತ್ಮಹತ್ಯೆಗೆ ಶರಣಾದ ದುರ್ದೈವಿ ದಂಪತಿಗಳು. ಘಟನೆ ಹಿನ್ನೆಲೆ: ಶಿಕ್ಷಕ ಗುರುನಾಥ ತಾವರೆ ಮೂಲತಃ ಖಾನಾಪೂರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದವರು. ಅಮಟೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ  ವಿಷಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಬೆಳಗಾವಿಯ ಮೀನಾಕ್ಷಿ ಜೊತೆ ಕಳೆದ 13 ವರ್ಷಗಳ ಹಿಂದೆ […]

ರಾಜ್ಯ

ಮುಂಗಾರು ಆರಂಭಕ್ಕೆ ಮುನ್ನವೇ ಧಾರವಾಡ ಜಿಲ್ಲೆಯ ರೈತರಿಗೆ ಕಳಪೆ ಬೀಜದ ಕಾಟ

ಧಾರವಾಡ prajakiran.com :  ಮುಂಗಾರು ಆರಂಭಕ್ಕೆ ಮುನ್ನವೇ ಧಾರವಾಡ ಜಿಲ್ಲೆಯ ರೈತರಿಗೆ ಕಳಪೆ ಬೀಜದ ಕಾಟ ಶುರುವಾಗಿದೆ. ನಿನ್ನೆ ಮೊನ್ನೆಯವರೆಗೂ ಬಿತ್ತನೆ ಬೀಜಕ್ಕಾಗಿ ಹರಸಾಹಸ ಮಾಡತಾ ಇದ್ದ ರೈತರು ರೈತರು ಅದೇನ್ ಪಾಪಾ ಮಾಡಿದ್ದಾರೋ ಗೊತ್ತಿಲ್ಲ. ಇದೀಗ ಹೇಗೋ ಪರದಾಡಿ ತೆಗೆದುಕೊಂಡು ಹೋಗಿ ಬಿತ್ತನೆ ಮಾಡಿರೋ ಕೆಲವೊಂದು ಬೀಜಗಳು ನೆಲ ಬಿಟ್ಟು ಮೇಲೇಳುತ್ತಲೇ ಇಲ್ಲ. ಕಳಪೆ ಬೀಜದಿಂದ ಧಾರವಾಡ ರೈತರು ಕಂಗಾಲಾಗಿ ಹೋಗಿದ್ದಾರೆ. ಜಮೀನಿನಲ್ಲಿ ಬಿತ್ತಿದ ಬೀಜ ಎಲ್ಹೋದು ಅಂತಾ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.   ಇಂತಹ ಘಟನೆ […]

ರಾಜ್ಯ

ಶಾಲಾ-ಕಾಲೇಜ್ ಆರಂಭ ಇನ್ನೂ ನಿರ್ಧಾರವಾಗಿಲ್ಲ ಎಂದ ಶಿಕ್ಷಣ ಸಚಿವರು

ಧಾರವಾಡ prajakiran.com : ರಾಜ್ಯದಲ್ಲಿ ಶಾಲಾ,  ಕಾಲೇಜುಗಳನ್ನು  ಯಾವಾಗ  ಪ್ರಾರಂಭ  ಮಾಡಬೇಕು  ಎಂಬುದರ  ಬಗ್ಗೆ  ಕೇಂದ್ರ  ಸರ್ಕಾರದ ನಿರ್ದೇಶನಕ್ಕಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ  ಹಾಗೂ ಸಕಾಲ ಸಚಿವ ಎಸ್. ಸುರೇಶಕುಮಾರ ಹೇಳಿದರು. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂನ್ ೧೦ ರಿಂದ ೧೨ ರ ಮಧ್ಯೆ ರಾಜ್ಯದ ಎಲ್ಲ ೪೭ ಸಾವಿರ ಸರ್ಕಾರಿ ಶಾಲೆಗಳು ಖಾಸಗಿ ಮತ್ತು ಅನುದಾನಿತ ಶಾಲೆಗಳು ಪೋಷಕರ ಮತ್ತು ಎಸ್‌ಡಿಎಂಸಿಗಳ ಸಭೆ ನಡೆಸಿ ಶಾಲಾ ಪುನರಾರಂಭದ ಕುರಿತು ಸಲಹೆಗಳನ್ನು ಪಡೆಯಲು […]

ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ಜೂನ್ ೮ ರವರೆಗೆ ನಿಷೇಧಾಜ್ಞೆ ಮುಂದುವರಿಕೆ

ಧಾರವಾಡ prajakiran.com : ಕರೊನಾ ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ  ಜೂನ್ ೧ ರಿಂದ ಜೂನ್ ೮ ರವರೆಗೆ ಜಿಲ್ಲೆಯಾದ್ಯಂತ ಸಿಆರ್‌ಪಿಸಿ ೧೯೭೩ ರ ಕಲಂ ೧೪೪ ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ ಹಾಗೂ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಲಾಗಿರುತ್ತದೆ. ಅಲ್ಲದೆ, ೫ ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಕರ್ಫ್ಯೂ ಅವಧಿಯಲ್ಲಿ […]