ರಾಜ್ಯ

ಧಾರವಾಡ ಜಿಲ್ಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ಶೇ.100

ಧಾರವಾಡ prajakiran. com ಆ.9:ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು. ಧಾರವಾಡ ಜಿಲ್ಲೆಯಲ್ಲಿ ಫಲಿತಾಂಶ ಶೇ.100 ರಷ್ಟು ಸಾಧನೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಸ್.ಎಸ್.ಎಲ್.ಸಿ ಪರೀಕ್ಷೆಗೆ 15864 ಬಾಲಕರು ಹಾಗೂ 13500 ಬಾಲಕಿಯರು ಸೇರಿ ಒಟ್ಟು 29364 ವಿದ್ಯಾರ್ಥಿಗಳು ಹಾಜರಾಗಿದ್ದರು.

ಅದರಲ್ಲಿ ರೆಗ್ಯುಲರ್ ಫ್ರೆಶ್- 26539, ರೆಗ್ಯುಲರ್ ರಿಪೀಟರ್ -1904, ಪ್ರೈವೇಟ್ ಫ್ರೆಶ್- 702, ಪ್ರ್ರೈವೇಟ್ ರಿಪೀಟರ್- 210 ಹಾಗೂ ಎನ್‍ಎಸ್‍ಆರ್- 09 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಈ ಬಾರಿ ಜಿಲ್ಲೆಯ ಒಟ್ಟು 413 ಶಾಲೆಗಳಿಂದ ಮಕ್ಕಳು ಪರೀಕ್ಷೆಗೆ ನೋಂದಾಯಿತರಾಗಿದ್ದರು. 119 ಸರಕಾರಿ ಶಾಲೆಗಳಿಂದ 7631 ವಿದ್ಯಾರ್ಥಿಗಳು, 141 ಖಾಸಗಿ ಅನುದಾನಿತ ಶಾಲೆಗಳಿಂದ 10860 ವಿದ್ಯಾರ್ಥಿಗಳು ಹಾಗೂ 153 ಖಾಸಗಿ ಅನುದಾನರಹಿತ ಶಾಲೆಗಳಿಂದ 8048 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿರುತ್ತಾರೆ.

ಜಿಲ್ಲೆಯ 413 ಶಾಲೆಗಳಲ್ಲಿ 386 ಶಾಲೆಗಳು ‘ಎ’ ಗ್ರೇಡ್, 25 ಶಾಲೆಗಳು ‘ಬಿ’ ಗ್ರೇಡ್ ಹಾಗೂ 2 ಶಾಲೆಗಳು ‘ಸಿ’ ಗ್ರೇಡ್ ಫಲಿತಾಂಶವನ್ನು ಸಾಧಿಸಿವೆ.

ಪರೀಕ್ಷೆಗೆ ಹಾಜರಾದ ಒಟ್ಟು 26539 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 4463 ‘ಎ+’ , 9787 ‘ಬಿ’ ಹಾಗೂ 2311 ‘ಸಿ’ ಗ್ರೇಡ್‍ನಲ್ಲಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಪ್ರೆಸೆಂಟೇಶನ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ನಾಗಲಕ್ಷ್ಮಿ ಅಗಡಿ 625 ಕ್ಕೆ 625 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *