ಸಿನಿಮಾ

ಭರವಸೆ ಕಳೆದುಕೊಳ್ಳಬೇಡಿ, ನಾವು ನಿಮ್ಮೊಂದಿದ್ದೇವೆ : ಸೋನು ಸೂದ್

ಮುಂಬೈ prajakiran.com : ದೇಶದಲ್ಲಿ ಕೊರೋನಾ ಸೋಂಕಿನಿಂದ ಜನರು ಪಡುತ್ತಿರುವ ಸಂಕಷ್ಟಕ್ಕೆ ಸ್ಪಂದಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ‘ಸೋನು ಸೋದ್ ಫೌಂಡೇಶನ್’ ಹಗಲಿರುಳು ಕೆಲಸ ಮಾಡುತ್ತಿದೆ.

ದೇಶದ ಯಾವುದೇ ಮೂಲೆಯಿಂದ ಬೆಡ್, ಆಕ್ಸಿಜನ್, ಔಷಧ ಬೇಕೆಂದು ಸಹಾಯಕೋರಿ ಸಂದೇಶ ಬಂದರೂ, ತಕ್ಷಣ ಪ್ರತಿಕ್ರಿಯಿಸಿ ಸಹಾಯ ಮಾಡುತ್ತಿದ್ದಾರೆ.

ಇದೀಗ ಬೆಂಗಳೂರಿನಲ್ಲಿ ಉಂಟಾದ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸೋನು ಸೂದ್ ಮುಂದಾಗಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ.

ಭರವಸೆ ಕಳೆದುಕೊಳ್ಳಬೇಡಿ ಬೆಂಗಳೂರು, ಬ್ರೀತ್ ಅಗೇನ್. ನಾವು ನಿಮ್ಮೊಂದಿದ್ದೇವೆ. ತುರ್ತು ಸನ್ನಿವೇಶಗಳಲ್ಲಿ ಮನೆ ಬಾಗಲಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸುತ್ತೇನೆ ಎಂದು ಸೋನು ಸೂದ್ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *