ಶಾಸಕ ಅರವಿಂದ ಬೆಲ್ಲದ ಚಿಕ್ಕಪ್ಪ ಶಿವಣ್ಣ ಬೆಲ್ಲದ ಇನ್ನಿಲ್ಲ
ಧಾರವಾಡ prajakiran. com : ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಚಿಕ್ಕಪ್ಪ ಹಾಗೂ ಉದ್ಯಮಿಗಳಾಗಿದ್ದ ಶಿವಣ್ಣ ಬೆಲ್ಲದ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಧಾರವಾಡದ ಎಸ್ಪಿ ಕಚೇರಿ ಬಳಿ ಶಿವಣ್ಣ ಬೆಲ್ಲದ ಚಲಾವಣೆ ಮಾಡುತ್ತಿದ್ದ ಕಾರು ಡಿವೈಡರ್ ಗೆ ಗುದ್ದಿ ಈ ಅಪಘಾತ ಸಂಭವಿಸಿತ್ತು.
ಗಾಯಗೊಂಡ ಅವರನ್ನು ಧಾರವಾಡದ ಯುನಿಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಗಂಭೀರವಾಗಿ ಗಾಯಗೊಂಡ ಶಿವಣ್ಣ ಕೋಮಾಸ್ಥಿತಿಗೆ ತಲುಪಿದರು. ಚಿಕಿತ್ಸೆ ಫಲಕಾರಿಯಾಗದೆ ಅವರು ತಡರಾತ್ರಿ ಸಾವನ್ನಪ್ಪಿದ್ದಾರೆ.
ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ ಅವರ ಸಹೋದರರಾಗಿದ್ದ ಶಿವಣ್ಣ ಬೆಲ್ಲದ ಅವರಿಗೆ (82) ವಯಸ್ಸಾಗಿದ್ದು ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.