ಜಿಲ್ಲೆ

ಸೆಲ್ಫಿ ಕ್ರೇಜ್ : ಕಾಲು ಜಾರಿ ಕಾಲುವೆ ಪಾಲಾದ ಮೂವರು ಯುವಕರು

ಹುಬ್ಬಳ್ಳಿ Prajakiran.com: ಪೋಟೋ ಶೂಟ್ ಗೆ ಹೋಗಿದ್ದ ನಾಲ್ವರು ಯುವಕರು ಹಾಗೂ ಓರ್ವ ಯುವತಿ ಕಾಲುವೆಯಲ್ಲಿ ಬಿದ್ದ ದುರ್ಘಟನೆ ಶುಕ್ರವಾರ ನಡೆದಿದೆ.

ಸ್ನೇಹಿತರ ಜೊತೆ ಫೋಟೋ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಕಾಲುವೆ ಪಾಲಾದ ಘಟನೆ ಹುಬ್ಬಳ್ಳಿ ತಾಲೂಕಿ‌ನ ಕಿರೇಸೂರು ಬ್ರಿಡ್ಜ್ ಬಳಿ ನಡೆದಿದೆ.

ಕಾಲುವೆ ಪಾಲಾದವರಲ್ಲಿ ಜೋಶಿ ಜಂಗಮ (21), ಸನ್ನಿ ಜಾಕ್ಸನ್ (21), ಗಜಾನನ (21) ಮೃತಪಟ್ಟ ದುರ್ದೈವಿಗಳು.

ನತಾಶಾ ಭಂಡಾರಿ (19), ಸಲ್ಮಾನ್ (20) ಗಾಯಾಳುಗಳುಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ, ಯುವಕರ ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ.

ಸರಿಯಾದ ಸಮಯಕ್ಕೆ ತ್ವರಿತವಾಗಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಓರ್ವ ಯುವಕ, ಯುವತಿ ರಕ್ಷಣೆ ಮಾಡಿದ್ದಾರೆ.

ಸ್ಥಳೀಯರು ಸಹ ಪೊಲೀಸರಿಗೆ ಸಾಥ್ ನೀಡಿದ್ದಾರೆ.

ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *