ಅಂತಾರಾಷ್ಟ್ರೀಯ

ಬೆಂಗಳೂರು ಗಲಭೆ ; ಎಸ್ ಡಿ ಪಿ ಐ ಹುನ್ನಾರ….!?

ಬೆಂಗಳೂರು prajakiran.com : ತಮ್ಮ ಹವಾ ಮೆಂಟೆನ್ ಮಾಡಲು, ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಹಾಗೂ ಸಮುದಾಯದ ಪರ ಮುಂದಾಳತ್ವ ವಹಿಸಿ ಹಾಗೂ ಅವರ ಗಮನ ಸೆಳೆಯಲು ಎಸ್ ಡಿ ಪಿ ಐ ಕೋಮು ಗಲಭೆ ಸೃಷ್ಟಿಸಲು ಹುನ್ನಾರ ನಡೆದಿರುವುದು ಬೆಳಕಿಗೆ ಬಂದಿದೆ.

ಪುಲಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಶಾಸಕ ಸ್ಥಾನದಿಂದ ಕೆಳಗಿಸಲು ಅವರ ವಿರೋಧಿಗಳ ಜೊತೆಗೆ ಚರ್ಚೆ ನಡೆಸಿದ್ದರು.

ಅದಕ್ಕಾಗಿಯೇ ಅವರ ಅಳಿಯ ನವೀನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದನ್ನು ಮುಂದಿಟ್ಟುಕೊಂಡು ಗಲಾಟೆ ಸ್ಕೈಚ್ ರೂಪಿಸಿದ್ದರು.

ಬೆಂಗಳೂರು ನಗರದ 7 ವಾರ್ಡ್ ಗೆಲ್ಲಲು ಎಸ್ ಡಿಪಿಐ ಪ್ಲಾನ್ ಮಾಡಿತ್ತು. ಇದಕ್ಕೆ ಸಾಕ್ಷ್ಯ ಎಂಬಂತೆ ಕೇವಲ ಮೂರು ಮನೆ ಧ್ವಂಸ ಮಾಡಲಾಗಿದೆ.

ಶಾಸಕ ಅಖಂಡಶ್ರೀನಿವಾಸ ಮೂರ್ತಿ, ಆಪ್ತ ಮುನೇಗೌಡ,ಸಂಬಂಧಿ ನವೀನ್ ಅವರ ಮನೆಯೇ ಧ್ವಂಸ ಮಾಡಿ, ಬೆಂಕಿ ಹಂಚಿ ಸುಟ್ಟು ಹಾಕಿದ್ದಾರೆ.

ಇದಲ್ಲದೆ, ಅವರಿಗೆ ಈ ಹಿಂದಿನ ಸಿಎಎ, ಎನ್ ಆರ್ ಸಿ, ರಾಮಮಂದಿರ ಪರ ಸುಪ್ರೀಂಕೋರ್ಟ್ ತೀರ್ಪು ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ದುಷ್ಕೃತ್ಯಕ್ಕೆ ಸಂಚು ರೂಪಿಸಿರುವುದು ಕೂಡ ಅಡಗಿದೆ.

ಇದರಿಂದ ಬಿಬಿಎಂಪಿ ಸದಸ್ಯ ಹಾಗೂ ಮಾಜಿ ಮೇಯರ್ ಗೂ ರಾಜಕೀಯ ಲಾಭ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಘಟನೆ ಇದೀಗ ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ಬಿಜೆಪಿ ವಿರುದ್ದ ಮುಗಿಬಿದಿದ್ದೆ.

ಸಿದ್ದರಾಮಯ್ಯ ನವರೇ, ಎಸ್ಡಿಪಿಐ ಮತ್ತು ಕೆಯಫ್ಡಿಯ ಪುಂಡರ ವಿರುದ್ಧ ಇದ್ದ ಕ್ರಿಮಿನಲ್ ಕೇಸುಗಳನ್ನು ನೀವು 2015ರಲ್ಲಿ ವಾಪಸ್ಸು ಪಡೆಯುವಾಗ ಇದ್ದ ಸಂಭ್ರಮದ ಜೊತೆಗೆ, ಇವತ್ತಿನ ಪುಂಡ ಮುಸಲ್ಮಾನರು ಮಾಡಿದ ದುಷ್ಕೃತ್ಯ ಖಂಡಿಸುವ ಧೈರ್ಯವನ್ನು ತೋರಿಸಿ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.

ಅದೇ ರೀತಿ ಬಿಜೆಪಿ ರಾಜ್ಯಾಧ್ಯಕ್ಷ ನವೀನಕುಮಾರ್ ಕಟೀಲ್ ಕೂಡ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರೇ…. ನೀವು ಮನುಷ್ಯರ ಪರ ಮಾತಾಡುತ್ತಿರುವಿರಿ? ದೆಹಲಿ ಗಲಭೆ, ಮಂಗಳೂರು ಗಲಭೆ, ಪಾದರಾಯನಪುರದ ಗಲಭೆ, ಪುಲಿಕೇಶಿನಗರದ ಗಲಭೆಯಲ್ಲಿ ದೀಪ ಹಚ್ಚಿದರಾ? ಬೆಂಕಿ ಹಚ್ಚಿದರಾ? ನೀವು ಅವರ ಬೆಂಬಲಕ್ಕೆ ನಿಂತವರಲ್ಲವೇ?  ಎಂದು ಕುಟುಕಿದ್ದಾರೆ.

ಕಾಂಗ್ರೆಸ್ಸಿನ ಪರಿಸ್ಥಿತಿ “ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ” ಎಂಬಂತಾಗಿದೆ. ಗಲಭೆ ಮಾಡಿದ ಮತಾಂಧರ ಪರ ಮಾತಾಡಿದರೆ ಹಿಂದುಳಿದ ವರ್ಗದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.

ತಮ್ಮ ಶಾಸಕರ ಪರ ಮಾತಾಡಿದರೆ ಮುಸ್ಲಿಂರ ಓಟ್ ಬ್ಯಾಂಕ್ ಕಳೆದುಕೊಳ್ಳಬೇಕಾಗುತ್ತದೆ. ಕೊನೆಗೆ, ಪೊಲೀಸರ ಮೇಲೆ ಗೂಬೆ ಕೂರಿಸಿ ಬಾಯಿ ಮುಚ್ಚಿಕೊಂಡಿದ್ದಾರೆ. @siddaramaiah ಎಂದು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಇನ್ನೂ ಶಿಕ್ಷಣ ಸಚಿವ ಸುರೇಶಕುಮಾರ್ ಇದು Vote Bank ರಾಜಕಾರಣ, ಭಸ್ಮಾಸುರ ಸೃಷ್ಟಿಯಾಗಲು ರಹದಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಂತಿಯಿಂದ ಬದುಕೋಣ ಎಂಬುದು ನಮ್ಮ ಆಶಯ. ಅಶಾಂತಿಯೇ ಕೆಲವರ ರಾಜಮಾರ್ಗ ಎಂದಾದರೆ, ಆ ಮಾರ್ಗವನ್ನೇ ಬದಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಪೊಲೀಸ್ ವ್ಯವಸ್ಥೆ ಸದೃಡವಾಗಿದೆ.

ಗಲಭೆ ನಡೆದ ಜಾಗದಲ್ಲಿ ಅಲ್ಲಿನ ಸ್ಥಳೀಯರು SDPI ಕಾರ್ಯವಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ದಿಶೆಯಲ್ಲೂ ಸರ್ಕಾರ ತನಿಖೆ ಮಾಡಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *