ಸವದತ್ತಿ prajakiran.com : ಇಂದು ಮಧ್ಯಾಹ್ನ ತಾಲೂಕಿನಾದ್ಯಂತ ಸುರಿದ ಗುಡುಗು ಸಹಿತ ಸಿಡಿಲು ಭಾರಿ ಮಳೆಗೆ ನವಿಲುತೀರ್ಥ ಡ್ಯಾಮ್ ಹತ್ತಿರ ಸಿಡಿಲು ಬಡಿದು ಕುರಿಗಾರರ 45 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ಇದರಿಂದಾಗಿ ಕುರಿಗಾರರ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು ದಿಕ್ಕೆ ತೋಚದಂತಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ಮಾಹಿತಿ ಅರಿತು ಘಟನಾ
ಸ್ಥಳಕ್ಕೆ ಭೇಟಿ ನೀಡಿದ ಸವದತ್ತಿ
ಶಾಸಕ ಹಾಗೂ ವಿಧಾನಸಭೆಯ ಉಪಸಭಾದ್ಯಕ್ಷ ಆನಂದ ಮಾಮನಿ ಹಾಗೂ ತಾಲೂಕು ದಂಡಾಧಿಕಾರಿಗಳು ಕುರಿಗಾರರಿಗೆ ಸಾಂತ್ವನ ಹೇಳಿದರು.
ಅಲ್ಲದೆ ವಸ್ತು ಸ್ಥಿತಿಯನ್ನು ಪರಿಶೀಲಿಸಿದರು. ನಂತರ ಕುರಿಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ತಾಲೂಕು ದಂಡಾಧಿಕಾರಿಗಳಿಗೆ ಶಾಸಕ ಆನಂದ ಮಾಮನಿ ಸೂಚಿಸಿದರು.