ಅಂತಾರಾಷ್ಟ್ರೀಯ

ಬ್ರಿಟನ್ ಪ್ರಧಾನಿಯಾಗಿ ಕನ್ನಡಿಗ ರಿಷಿ ಸುನಕ್ ಆಯ್ಕೆ

ಇಂಗ್ಲೆಂಡ್ ಪ್ರಜಾಕಿರಣ.ಕಾಮ್ :

ಕನ್ಸರ್ವೇಟಿವ್ ಪಕ್ಷದ ನಾಯಕರಾಗಿರುವ ಭಾರತೀಯ ಮೂಲದ ಕನ್ನಡಿಗ
ರಿಷಿ ಸುನಕ್ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬ್ರಿಟನ್ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಅ.28ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ‌.

ರಿಷಿ ಸುನಕ್ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯನಾಗಿದ್ದಾರೆ.

ಬ್ರಿಟನ್ ಪ್ರಧಾನಿಯಾದ ಮೊದಲ ಭಾರತೀಯನಾಗಿದ್ದು, ಅದರಲ್ಲೂ
ವಿಶೇಷವಾಗಿ ಅವರು ಕನ್ನಡ ನೆಲದ ನಂಟು ಹೊಂದಿದ್ದಾರೆ‌.

ಅವರ ಆಯ್ಕೆ ನಮಗೆ ಅತೀವ ಸಂತಸ ತಂದಿದೆ. ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಟ್ವಿಟರ್ ಮೂಲಕ ಹೃದಯಪೂರ್ವಕ ಅಭಿನಂದನೆಗಳು  ಕೋರಿದ್ದಾರೆ.

ರಿಷಿ ಸುನಕ್ ಆರ್ಥಿಕ ಸಂಕಷ್ಟ ಕಾಲದಲ್ಲಿ ಬ್ರಿಟನ್ ದೇಶದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಅವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಅದರಲ್ಲೂ ಸೂರ್ಯ ಮುಳುಗದ ಸಾಮ್ರಾಜ್ಯದ ಅಧಿಪತಿಯಾಗಿರುವುದಕ್ಕೆ ದೇಶದೆಲ್ಲೆಡೆ ಅಭಿನಂದನೆಗಳ ಸುರಿಮಳೆ ಹರಿಯುತ್ತಿದ್ದು, ಈಗ ಜಗತ್ತು ಆಳುವ ಸರದಿ ಭಾರತೀಯರದ್ದು ಎಂದು ಕೊಂಡಾಡುತ್ತಿದ್ದಾರೆ‌.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *