ರಾಜ್ಯ

ಧಾರವಾಡದ ಘನತ್ಯಾಜ್ಯ ವಸ್ತು ಸಂಗ್ರಹ ಜಾಗ ಸ್ಥಳಾಂತರಿಸಲು ಆಗ್ರಹಿಸಿ ರಸ್ತೆತಡೆ : ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಸೇರಿದಂತೆ ಅನೇಕರ ಬಂಧನ, ಬಿಡುಗಡೆ

ಧಾರವಾಡದ ವಿದ್ಯಾಗಿರಿ, ಲಕ್ಷ್ಮಿ ನಗರದ ಜನರಿಗೆ ದಿನನಿತ್ಯ ಹೊಗೆ ಕಿರಿಕಿರಿ

ಘನತ್ಯಾಜ್ಯ ವಸ್ತು ಸಂಗ್ರಹ ಜಾಗ ಸ್ಥಳಾಂತರಿಸಲು ಆಗ್ರಹಿಸಿ ರಸ್ತೆತಡೆ

ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಸೇರಿದಂತೆ ಅನೇಕ ಮುಖಂಡರ ಬಂಧನ,ಬಿಡುಗಡೆ

ಧಾರವಾಡ ಪ್ರಜಾಕಿರಣ.ಕಾಮ್
ಎ.ಪಿ.ಕಮ್ಯುನಿಕೇಶನ್ ಆಫ್ ಕರ್ನಾಟಕ ಧಾರವಾಡ ಸಂಘಟನೆಯ ಲಕ್ಷ್ಮೀ ನಗರ, ವಿದ್ಯಾಗಿರಿ ನಿವಾಸಿಗಳು ಕಾಂಗ್ರೆಸ್ ನಾಯಕ ದೀಪಕ ಚಿಂಚೋರೆ ಅವರ ನೇತೃತ್ವದಲ್ಲಿ “ಘನತ್ಯಾಜ್ಯ ವಸ್ತು ಸಂಗ್ರಹದ ಜಾಗವನ್ನು ಸ್ಥಳಾಂತರಿಸಬೇಕು ಎಂದು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾದರು.
ಇದರಿಂದಾಗಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಆಗ ಎಸಿಪಿ ವಿಜಯಕುಮಾರ್ ತಳವಾರ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.


ಆದರೆ, ಇದಕ್ಕೆ ಜಗ್ಗದ ಕಾರಣ ದೀಪಕ‌ ಚಿಂಚೋರೆ ಸೇರಿ 40ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧಿಸಿ ಆನಂತರ ಬಿಡುಗಡೆಗೊಳಿಸಿದರು.

ಉಳಿಸಿ ಉಳಿಸಿ ಪ್ರಾಣಾ ಉಳಿಸಿ, ಜೆ.ಎಸ್.ಎಸ್ ಕ್ಯಾಂಟೀನ್ ತ್ಯಾಜ್ಯ ನೀರು ರಸ್ತೆಗೆ ಬರುವುದನ್ನು ನಿಲ್ಲಿಸಿ, ಶಾಸಕ ಅರವಿಂದ ಬೆಲ್ಲದ ಹಾಗೂ ಹು-ಧಾ ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಜನರು ಘೋಷಣೆ ಕೂಗುವುದರ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಬಿಲಕೀಸ್ ಬಾನು ಮುಲ್ಲಾ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸ್ವಾತಿ ಮಳಗಿ ಹಾಗೂ ವಿವಿಧ ಬಡಾವಣೆಗಳಾದ ವಿವೇಕಾನಂದನಗರ, ದಾನೇಶ್ವರಿ ನಗರ, ಜನ್ನತನಗರ, ಚಪ್ಪರಬಂಧ ಕಾಲನಿ ಹಾಗೂ ಚುರುಮರಿ ಭಟ್ಟಿ ಸ್ಥಳೀಯ ನಾಗರಿಕರೆಲ್ಲರೂ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *