ವಿಶ್ವನಾಥ್ ಸಂಸ್ಕೃತಿ ಎಷ್ಟಿದೆ ಎಂದು ಗೊತ್ತಿದೆ
ಬೆಂಗಳೂರು Prajakiran.com : ನಾನು ಪ್ಯೂರ್ ಬಿಜೆಪಿ, ರೇಣುಕಾಚಾರ್ಯ ಮಿಕ್ಸ್ ಬಿಜೆಪಿ ಎಂಬ ಹೆಚ್ ವಿಶ್ವನಾಥ್ ಹೇಳಿಕೆಗೆ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ವಿಶ್ವನಾಥ್ ಅವರ ಆಡಿಯೋ, ವೀಡಿಯೋ ನನ್ನ ಬಳಿ ಇದೆ. ಅವರ ನಾಲಿಗೆ ಸಂಸ್ಕೃತಿ ಎಷ್ಟಿದೆ ಎಂದು ಗೊತ್ತಿದೆ.
ಅವರ ಆಡಿಯೋ ವೀಡಿಯೋ ಕೇಳಿದರೆ ಎಷ್ಟು ಅಸಂಬದ್ಧ ಎಂದು ಗೊತ್ತಾಗುತ್ತದೆ. ಅವರ ಬಗ್ಗೆ ಮಾತಾಡಿರದೆ ನನ್ನ ನಾಲಿಗೆಯೇ ಹೊಲಸಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದರು.
ವಿಶ್ವನಾಥ್ ನಿನ್ನೆ ಮುಖ್ಯಮಂತ್ರಿ ಗಳ ವಿರುದ್ದವಾಗಿ ಮಾತಾಡಿರು, ಅದಕ್ಕೆ ಹಗುರವಾಗಿ ಮಾತಾಡಬೇಡಿ ಎಂದು ನಾವು ಹೇಳಿದ್ದೆವು ಎಂದರು.
ವಿಜಯೇಂದ್ರ ಮೇಲೆ ಕಿಕ್ ಬ್ಯಾಕ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಟೆಂಡರ್ ಪಾರದರ್ಶಕವಾಗಿದೆ.
ಎಲ್ಲಾ ವಿವರವೂ ವೆಬ್ ಸೈಟ್ ನಲ್ಲಿ ಸಿಗುತ್ತದೆ. ಅವರು ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.