ರಾಜ್ಯ

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ  8772 ಅಸಿಂಧು ಮತಗಳು

ಧಾರವಾಡ : ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ತಿರಸ್ಕೃತ ಮತಗಳ ಸಂಖ್ಯೆ   8772.

ಹೌದು ಇದು ಅಚ್ಚರಿಯಾದರೂ ಸತ್ಯ. ಪದವೀಧರರ ಹಾಗೂ ಅದರಲ್ಲೂ ಪ್ರಜ್ಞಾವಂತರ ಕ್ಷೇತ್ರ ವಿದ್ಯಾನಗರಿ ಧಾರವಾಡ ಜಿಲ್ಲೆ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ ಇಷ್ಟೊಂದು ಮತಗಳು ತಿರಸ್ಕೃತಗೊಂಡಿರುವುದು  ಸ್ವತಃ ಜಿಲ್ಲೆಯ ಚುನಾವಣಾ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.

ಇದಕ್ಕೆ ಕಾರಣ ಹುಡುಕಿದಾಗ ಪದವೀಧರರಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಸಂಖ್ಯೆಯನ್ನು ನಮೂದಿಸಿದ್ದಾರೆ. ಮೊದಲ, ದ್ವಿತೀಯ ಹಾಗೂ ತೃತೀಯ ಪ್ರಾಶಸ್ತ್ರ್ಯ ನಮೂದಿಸುವ ಬದಲಿಗೆ ಅವರ ಕ್ರಮ ಸಂಖ್ಯೆ ನಮೂದಿಸಿದ್ದಾರೆ.

ಇದು 9 ಸಾವಿರ ಸಮೀಪದ ಮತಗಳು ಅಸಿಂಧುಗೊಳ್ಳಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಪಕ್ಷೇತರಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸವರಾಜ ಗುರಿಕಾರಅವರು ಪಡೆದ ಮತಗಳಿಗಿಂತ ಅಸಿಂಧು ಮತಗಳೇ ಹೆಚ್ಚಾಗಿರುವುದು ಆಘಾತಕಾರಿ ಅಂಶವಾಗಿದ್ದು, ಇದು ಪ್ರಜ್ಞಾವಂತರಿಗೆ ಅದರಲ್ಲೂ ಅಭ್ಯರ್ಥಿಗಳಿಗೆ ಭಾರಿ ಕಳವಳ ಮೂಡಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *