ರಾಜ್ಯ

ರಮೇಶ ಜಾರಕಿಹೊಳಿಗೆ ಸೂಕ್ತ ಸ್ಥಾನಮಾನ ಎಂದ ಬಿ.ಸಿ.ಪಾಟೀಲ್

ಉಡುಪಿ prajakiran.com : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಪಿತೂರಿ ಮಾಡಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ.

ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆಯಿಲ್ಲ. ಶೀಘ್ರದಲ್ಲಿ ಸತ್ಯ ಹೊರಬರುತ್ತದೆ.

ನಂತರ ಅವರಿಗೆ ಸೂಕ್ತ ಸ್ಥಾನಮಾನವನ್ನು ಪಕ್ಷದ ವರಿಷ್ಠರು ಕೊಡುತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಿಎಂ ಅಭ್ಯರ್ಥಿ ಗೊಂದಲ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ನಿರ್ನಾಮವಾಗಿದೆ.

ಕೂಸು ಹುಟ್ಟೋಕು ಮುಂಚೆ ಕುಲಾವಿ ಹೊಲಿಸಿದರು ಎಂದ ಹಾಗಾಯಿತು. ಕಾಂಗ್ರೆಸ್ ನವರ ಕನಸು ನನಸಾಗದು. ಮತ್ತೆ ಬಿಜೆಪಿ ಬರುತ್ತದೆ. ನಾವೇ ಸರ್ಕಾರ ನಡೆಸುತ್ತೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಪರಮೇಶ್ವರ್ ಅವರು ಸಿಎಂ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಪರಮೇಶ್ವರ್ ಕೂಡಾ ಅಭ್ಯರ್ಥಿಯೇ. ಆದರೆ ಆಡಳಿತಕ್ಕೆ ಬಂದ ನಂತರ ಯೋಚನೆ ಮಾಡಬೇಕು ಎಂದರು.

ಇನ್ನೂ ಸಚಿವ ಯೋಗೇಶ್ವರ್ ದಿಢೀರ್ ದೆಹಲಿ ಭೇಟಿಯ ಬಗ್ಗೆ ಮಾತನಾಡಿ, ಯೋಗೇಶ್ವರ್ ಟೂರ್ ಬಗ್ಗೆ ನನಗೆ ಗೊತ್ತಿಲ್ಲ. ಅವರು ಮಂತ್ರಿ. ಅವರ ಖಾತೆಯ ಬಗ್ಗೆ ಚರ್ಚೆ ಮಾಡಲು ಹೋಗಿರಬಹುದು ಎಂದು ಬಿ.ಸಿ.ಪಾಟೀಲ್ ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *