ನಾಗ್ಪುರ prajakiran.com : ಜನಪ್ರಿಯ ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್(79) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ ಮಹಾರಾಷ್ಟ್ರದ ನಾಗ್ಪುರದ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ.
ರಾಮ್ ಲಕ್ಷ್ಮಣ್ ಅವರು ‘ಹಮ್ ಆಪ್ಕೆ ಹೈ ಕೌನ್’ ಚಿತ್ರ ಸೇರಿದಂತೆ ಹಿಂದಿ, ಮರಾಠಿ ಮತ್ತು ಭೋಜ್ಪುರಿ ಬಾಷೆಯ 150ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು.
ಒಂದಾನೊಂದು ಕಾಲದಲ್ಲಿ ಅವರ ಹಾಡುಗಳು ಸುಪರ್ ಡುಪರ್ ಹಿಟ್ ಆಗಿ,ಸಂಗೀತಾಸಕ್ತರ ಮನಸೊರೆಗೊಂಡಿದ್ದವು