ಅಪರಾಧ

ಧಾರವಾಡದ 2ನೇ ಅಧಿಕ ಜಿಲ್ಲಾ ನ್ಯಾಯಾಲಯದಿಂದ ಅತ್ಯಾಚಾರ ಆರೋಪಿಗೆ ಹತ್ತು ವರ್ಷ ಶಿಕ್ಷೆ

ಧಾರವಾಡ prajakiran.com : ಅತ್ಯಾಚಾರ
ಆರೋಪಿಗೆ ಧಾರವಾಡದ 2ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಹತ್ತು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

ಆರೋಪಿ ಸೈಯ್ಯದ ಸಾಜೀದ ಹುಸೇನ ತಂದೆ‌ ಸೈಯ್ಯದ ಸಮಿವುದ್ದಿನ ಸುಲೇದಾರ ಎಂಬಾತ ಆರೋಪ ಎಸಗಿದ ಬಗ್ಗೆ ರುಜುವಾತ ಆಗಿದ್ದರಿಂದ ಧಾರವಾಡದ 2ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಸಿ. ಸದಾನಂದಸ್ವಾಮಿ ಅವರು ಈ ಆದೇಶ ಹೊರಡಿಸಿದರು.

ಕಲಂ: 366 IPC ಪ್ರಕಾರ
7 ವರ್ಷ ಕಠಿಣ ಶಿಕ್ಷೆ. ಮತ್ತು 10.000/- ರೂ ದಂಡ.

ಕಲಂ: 376 IPC ಪ್ರಕಾರ 10 ವರ್ಷ ಕಠಿಣ ಶಿಕ್ಷೆ ಮತ್ತು 20.000/- ರೂ ದಂಡ.

ಕಲಂ: 6 POCSO Act ಪ್ರಕಾರ 10 ವರ್ಷ ಕಠಿಣ ಶಿಕ್ಷೆ ಮತ್ತು 20.000/- ರೂ ದಂಡ.

ಕಲಂ: 343 IPC ಪ್ರಕಾರ 1 ವರ್ಷ ಸಾದಾ‌ ಶಿಕ್ಷೆ ಮತ್ತು 2.500/- ರೂ ದಂಡ.

ಕಲಂ: 506 IPC ಪ್ರಕಾರ 1 ವರ್ಷ ಸಾದಾ ಶಿಕ್ಷೆ ಮತ್ತು 2.500/- ರೂ ದಂಡ ವಿಧಿಸಿ ಆದೇಶ ಹೊರಡಿಸಿದ್ದು, ಎಲ್ಲಾ ಶಿಕ್ಷೆಯನ್ನು ಏಕ ಕಾಲಕ್ಕೆ ಜಾರಿಗೊಳಿಸಿ ಮತ್ತು ಒಟ್ಟು ದಂಡದ ಮೊತ್ತ 55.000/- ರೂ ಗಳಲ್ಲಿ 50.000/- ರೂ ಗಳನ್ನು ನೊಂದ ಬಾಲಕಿಗೆ ಮತ್ತು ಉಳಿದ 5.000/- ರೂ ಗಳನ್ನು ಸರಕಾರಕ್ಕೆ ಕಟ್ಟಬೇಕು ಎಂದು ಆದೇಶಿಸಿದ್ದಾರೆ.

ಸದರ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಗಿರಿಜಾ ತಮ್ಮಿನಾಳ ಅವರು ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ್ದರು.

ಸದರ ಪ್ರಕರಣದಲ್ಲಿ ಧಾರವಾಡ ಉಪನಗರ ಪೊಲೀಸ ಠಾಣೆ ಪಿ.ಐ
ಮೋತಿಲಾಲ ಪವಾರ
ಆರೋಪಿತನ ವಿರುದ್ದ‌ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ‌ ಸಲ್ಲಿಸಿದ್ದರು.

 

ಪ್ರಕರಣದ ಸಂಕ್ಷಿಪ್ತ ವಿವರ:
ಧಾರವಾಡ ಉಪನಗರ ಪೊಲೀಸ‌ ಠಾಣೆ ವ್ಯಾಪ್ತಿಯ ಪಿ.ಯು ಕಾಲೇಜಿನ ವಿದ್ಯಾರ್ಥಿನಿಯನ್ನು ಆರೋಪಿ ಸೈಯ್ಯದ ಸಾಜೀದಹುಸೇನ ತಂದೆ ಸೈಯ್ಯದ ಸಮಿವುದ್ದಿನ ಸುಲೇದಾರ ಇತನು ದಿನಾಂಕ: 21/08/2018 ರಾತ್ರಿ 7.30 ಗಂಟೆ ಸುಮಾರಿಗೆ ಕೊಲೆ‌ ಮಾಡುವುದಾಗಿ ಬೆದರಿಕೆ‌ ಹಾಕಿ ಅಪಹರಿಸಿಕೊಂಡು ಹೋಗಿದ್ದ.

ಧಾರವಾಡದ ಲಾಡ್ಜದಲ್ಲಿ ಅಕ್ರಮ‌ ಬಂಧನದಲ್ಲಿಟ್ಟು ಅವಳ‌ ಮೇಲೆ ಬಲಾತ್ಕಾರ ಮಾಡಿ ನಂತರ ದಿನಾಂಕ: 22/08/2018 ರಂದು ತನ್ನೊಂದಿಗೆ‌ ಬರದಿದ್ದರೆ ನೊಂದ‌ ಬಾಲಕಿಗೆ ಮತ್ತು ಅವಳ‌ ತಂದೆ ತಾಯಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಧಾರವಾಡದಿಂದ ಬೆಂಗಳೂರಿಗೆ ಅಪಹರಿಸಿಕೊಂಡು ಹೋಗಿದ್ದ.

ಬೆಂಗಳೂರಿನ‌‌ಲ್ಲಿ ಆರೋಪಿ ವಾಸ ಇರುವ ಬಾಡಿಗೆ ಮನೆಯಲ್ಲಿ ದಿನಾಂಕ: 23/08/2018 ರಿಂದ ದಿನಾಂಕ: 27/08/2018 ರ ವರೆಗೆ ಅಕ್ರಮ ಬಂಧನದಲ್ಲಿರಿಸಿ ಜೀವದ ಬೆದರಿಕೆ ಹಾಕಿ ನಿರಂತರವಾಗಿ ಬಲಾತ‌್ಕರ ಮಾಡಿದ‌ ಅಪರಾಧ ಎಸಗಿದ್ದ ಕುರಿತು ಸಾಕ್ಷ್ಯ ಸಂಗ್ರಹಿಸಿ ನ್ಯಾಯಾಲಯದ ಮುಂದೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *