ರಾಜ್ಯ

ಧಾರವಾಡಲ್ಲಿನ ೬೦ ದಿನಗಳ ರೈತರ ಸರದಿ ಸತ್ಯಾಗ್ರಹ ಅಂತ್ಯ

ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್.ನೀರಲಕೇರಿ  ನೇತೃತ್ವದ ಹೋರಾಟಕ್ಕೆ ಮೆಚ್ಚುಗೆ

ಧಾರವಾಡ prajakiran.com : ದೇಶದಲ್ಲಿನ ರೈತರ ಮತ್ತು ಜನಸಾಮಾನ್ಯರ ಸಂಕಷ್ಟಗಳಿಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದು ಸಂಯುಕ್ತ ಕಿಸಾನ ಮೋರ್ಚಾ ನಾಯಕ ರಾಕೇಶಸಿಂಗ್   ಟಿಕಾಯತ್ ಆರೋಪಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಹಿತರಕ್ಷಣಾ ಪರಿವಾರದವತಿಯಿಂದ ಕೇಂದ್ರ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಮತ್ತು ದೆಹಲಿಯಲ್ಲಿನ ರೈತ ಹೋರಾಟ ಬೆಂಬಲಿಸಿ ಹಮ್ಮಿಕೊಂಡಿದ್ದ ಸರದಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ರೈತರು, ಕೂಲಿಕಾರ್ಮಿಕರು, ಬಡವರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ, ಜನರ ಸಮಸ್ಯೆಗಳನ್ನು ಸರಕಾರ ಕೇಳುತ್ತಿಲ್ಲ. ಮತ್ತೊಂದೆಡೆ ಸರಕಅರಿ ಸ್ವಾಮ್ಯದ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ದೀರ್ಘ ಕಾಲದಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸರಕಾರ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಸರಕಾರದ ಇಂಥ ಕುತಂತ್ರಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಅವರು ಮನವಿ ಮಾಡಿದರು.

ಕಳೆದ ೬೦ ದಿನಗಳಿಂದ ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್.ನೀರಲಕೇರಿ ಅವರ ನೇತೃತ್ವದಲ್ಲಿ ರೈತರು ಸರದಿ ಸತ್ಯಾಗ್ರಹ ನಡೆಸುವ ಮೂಲಕ ಇಡೀ ದೇಶದ ಗಮನಸೆಳೆಯಲಾಗಿದೆ ಎಂದು ಶ್ಲಾಘಿಸಿದರು.

ಇನ್ನೋರ್ವ ನಾಯಕ ಯುದವೀರಸಿಂಗ್ ಮಾತನಾಡಿ,ರೈತರು, ಕಾರ್ಮಿಕರಿಂದ ದೇಶದ ಪ್ರಗತಿ ಸಾಧ್ಯ.ಆದರೆ, ಇದನ್ನು ಸರಕಾರ ಮರೆತು ಜನವಿರೋಧಿ ಆಡಳಿತ ನಡೆಸುತ್ತಿದೆ. ಚೌಧರಿ ಚರಣಸಿಂಗ್, ಮಹೀಂದ್ರಸಿAಗ್ ಟಿಕಾಯತ್, ಪ್ರೊ.ಎಂ.ಡಿ.ನAಜುAಡಸ್ವಾಮಿ, ಬಾಬಾಗೌಡ ಪಾಟೀಲ, ಎನ್.ಡಿ.ಸುಂದರೇಶ ಮುಂತಾದವರಿAದ ರೈತ ಹೋರಾಟ ನಡಯತ್ತ ಬಂದಿದ್ದು, ರೈತರು ಒಗ್ಗಟ್ಟಾದರೆ ಸರಕಾರ ಮಣಿಸುವುದು ಸುಲಭವಲ್ಲ ಎಂದು ಎಚ್ಚರಿಸಿದರು.

ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ಸರಕಾರ ರೈತರ ತಾಳ್ಮೆ ಪರೀಕ್ಷಿಸುವ ಹುಂಬತನ ಮಾಡಬಾರದು. ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯದಿದ್ದರೆ, ದೇಶದ ಎಲ್ಲ ಭಾಗಗಳ ರೈತರು ದೆಹಲಿ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ಸಭೆಯಲ್ಲಿ ರೈತ ಮುಖಂಡರಾದ ಚುಕ್ಕಿ ನಂಜುÄAಡಸ್ವಾಮಿ, ಕೆ.ಟಿ.ಗಂಗಾಧರ, ಚುಕ್ಕಿ ನಂಜುAಡಸ್ವಾಮಿ, ಕುರುಬೂರ ಶಾಂತಕುಮಾರ, ಮಂಜೇಗೌಡ, ಡಾ.ಜಿ.ಎನ್.ಗಣೇಶದೇವಿ, ಮಾಜಿ ಶಾಸಕರಾದ ಬಿ.ಆರ್.ಪಾಟೀಲ. ಶ್ರೀಶೈಲಪ್ಪ ಬಿದರೂರ, ಶ್ರೀಶೈಲಗೌಡ ಕಮತರ, ಗುರುರಾಜ ಹುಣಸಿಮರದ, ಶಿವಾನಂದ ಹೊಳೆಹಡಗಲಿ, ಮಲ್ಲನಗೌಡ ಪಾಟೀಲ, ಮಂಜುನಾಥ ಮುಗ್ಗನವರ, ಭೀಮಪ್ಪ ಕಾಸಾಯಿ ಸೇರಿದಂತೆ ವಿವಿಧ ಜಿಲ್ಲೆಗಳ ರೈತ ಮುಖಂಡರು ಉಪಸ್ಥಿತರಿದ್ದರು.

ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್.ನೀರಲಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಣ್ಣ ಕಂಬಾರ ನಿರೂಪಿಸಿದರು.

 

 

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *