ಅಪರಾಧ

ಮದುವೆಯಾಗುವುದಾಗಿ ನಂಬಿಸಿ ಮೋಸವೆಸಗಿದ್ದ ವಂಚಕ ಪೊಲೀಸ ಬಂಧನ





ಬೆಳಗಾವಿ prajakiran.com : ಯುವತಿಯೊಂದಿಗೆ 3 ವರ್ಷಗಳಿಂದ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ ವಂಚಕ ಪೊಲೀಸನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಪೊಲೀಸ್ ನನ್ನು ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದ ಇರ್ಮಾನ ಖಾನ್ ಘೋರಿ (29) ಎಂದು ಗುರುತಿಸಲಾಗಿದೆ.

ಇತ ಅದೇ ತಾಲೂಕಿನ ಗ್ರಾಮವೊಂದರ ಯುವತಿಗೆ ವಂಚನೆ, ನಿಂದನೆ ಮತ್ತು ಇತರ ಮೋಸ ಮಾಡಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಮಹಿಳಾ ಪೊಲೀಸ್  ಠಾಣೆಯ ಪೋಲಿಸರು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಶ್ರೀದೇವಿ ಪಾಟೀಲ  ಅವರು ಆರೋಪಿ ಇರ್ಮಾನಖಾನ ಘೋರಿ ವಿರುದ್ಧ ದೂರು ಸಲ್ಲಿಸುತ್ತಿದ್ದಂತೆ ಪರಾರಿಯಾಗಿ ಹುಕ್ಕೇರಿ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ಅಡಗಿ ಕುಳಿತಿದ್ದ, ವಂಚಕ ಪೊಲೀಸನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಇತನ ವಿರುದ್ಧ 2 ಬಾರಿ ಯುವತಿ ಸಂಬಂಧಿಕರು ದೂರು ಸಲ್ಲಿಸಿದ್ದರು. ಸ್ಥಳೀಯ ಪೊಲೀಸ ಮತ್ತು ರಾಜಕೀಯ ನಾಯಕರ ವಸೂಲಿ ಬಾಜಿ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗುವ ಮುನ್ನವೇ ಮುಚ್ಚಿ ಹೋಗಿತ್ತು.  




ಜಿಲ್ಲೆಯ ಪೊಲೀಸ ಅಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿವಾಹಿತ ಪೇದೆ ಇಮ್ರಾನ್ ಖಾನ್ ಘೋರಿ ಬದುಕಿ ಬಾಳಬೇಕಾಗಿದ್ದ ಯುವತಿಯನ್ನು ನಂಬಿಸಿ ವಂಚಿಸಿದ್ದ. ಇದರಿಂದಾಗಿ ನೋಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. 

ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿಯುತ್ತಿದ್ದಂತೆ ವಂಚಕ ಪೇದೆ  ಯುವತಿಯ ಕುಟುಂಬದವರ ಜೊತೆ ಹೊಂದಾಣಿಕೆ ಮಾಡಲು ಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.  



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *