ರಾಜ್ಯ

ಧಾರವಾಡ : ಜನಾಂದೋಲನವಾಗಿ ಮಾರ್ಪಟ್ಟ ಆಮರಣ ಉಪವಾಸ

ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಸೇರಿದಂತೆ ಹತ್ತು ಹಲವು ಸಂಘಟನೆಯ ಬೆಂಬಲ

ಹಲವಾರು ಗ್ರಾಮಸ್ಥರ ಒತ್ತಡಕ್ಕೆ ಮಣಿದ ಮರೆವಾಡ, ಅಮ್ಮಿನಬಾವಿ ಗ್ರಾಪಂ ಜಾಕ್ ವೆಲ್ ಬಂದ್ ಗೆ ಠರಾವು

ಧಾರವಾಡ ಪ್ರಜಾಕಿರಣ. ಕಾಮ್ : 358 ನೀರು ಸರಬರಾಜು ನೌಕರರ ಮರುನೇಮಕ ಹಾಗೂ 7 ತಿಂಗಳ ಸಂಬಳ ಬಿಡುಗಡೆಗೆ ಒತ್ತಾಯಿಸಿ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹಾಗೂ ಹಿರಿಯ ಪತ್ರಕರ್ತ ನಾಗರಾಜ ಕಿರಣಗಿ ನಡೆಸುತ್ತಿದ್ದ ಆಮರಣ ಉಪವಾಸ ಸತ್ಯಾಗ್ರಹ ಹಾಗೂ ನೂರಾರು ನೀರು ಸರಬರಾಜು ನೌಕರರ ಸರದಿ ಉಪವಾಸ ಸೋಮವಾರಕ್ಕೆ ಒಂದು ವಾರ ಪೂರೈಸಿದೆ.

ಒಂದು ವಾರ ಕಳೆದರೂ ಮಹಾನಗರ ಪಾಲಿಕೆ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಎಲ್ ಆಂಡ್ ಹಠಾವೋ ಹುಬ್ಬಳ್ಳಿ ಧಾರವಾಡ ಬಚಾವೋ ಜನಾಂದೋಲನಕ್ಕೆ ಹಿರಿಯ ಪತ್ರಕರ್ತ ನಾಗರಾಜ ಕಿರಣಗಿ ಕರೆ ನೀಡಿದ್ದರು.

ಅವರ ಕರೆಗೆ ಕೆಪಿಸಿಸಿ ಮಾಧ್ಯಮ ವಕ್ತಾರ ಹಾಗೂ ಕರ್ನಾಟಕ ಥಿಂಕರ್ಸ್ ಫೋರಂ ಅಧ್ಯಕ್ಷ ಪಿ.ಎಚ್. ನೀರಲಕೇರಿ, ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಮಹಾದಾಯಿ ಹೋರಾಟಗಾರ ಸಲೀಂ ಸಂಗನಮುಲ್ಲಾ, ವಳಿ ನಗರದ ಮಹಾನಗರ ಪಾಲಿಕೆ ಸದಸ್ಯರು, ರಾಜಕೀಯ ಪಕ್ಷಗಳು, ವಿವಿಧ ಸಂಘ, ಸಂಸ್ಥೆಗಳು, ಪಕ್ಷಭೇದ ಮರೆತು ತಮ್ಮ ಬೆಂಬಲ ಸೂಚಿಸಿವೆ.

ಜಲಮಂಡಳಿಯ ಗುತ್ತಿಗೆ ಆಧಾರದ ಕಾರ್ಮಿಕರ ವೇತನ ಬಿಡುಗಡೆ ಹಾಗೂ ಪುನರ್ ನೇಮಕಾತಿಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ, ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ,ಮುಖಂಡರು ಕಾರ್ಯಕರ್ತರು ಫೆ. 6ರಂದು ಸೋಮವಾರ ಧಾರವಾಡದ ಮಹಾನಗರಪಾಲಿಕೆಯ ಆವರಣಕ್ಕೆ ಆಗಮಿಸಲಿದ್ದಾರೆ ಎಂದು ಧಾರವಾಡ ನಗರ ಬ್ಲಾಕ್-71ರ ಅಧ್ಯಕ್ಷ
ಅರವಿಂದ ಏಗನಗೌಡರ ತಿಳಿಸಿದ್ದಾರೆ‌.

ಅದೇ ರೀತಿ ಜಿಲ್ಲಾ ಜನತಾದಳ ಜಾತ್ಯತೀತ ಪಕ್ಷದ ಅಧ್ಯಕ್ಷರಾದ ಗುರುರಾಜ ಹುಣಸಿಮರದ ಅವರು ಕೂಡ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಜಲಮಂಡಳಿ ನೌಕರರು ವಿವಿಧ ಬೇಡಿಕೆಗೆ ಆಗ್ರಹಿಸಿ ಧಾರವಾಡದ ಮಹಾನಗರ ಪಾಲಿಕೆಯಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಪಕ್ಷದ ವತಿಯಿಂದ ಬೆಂಬಲ ಸೂಚಿಸಿ ಫೆ. 6 ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡ ನಗರದ ಹೆಡ್ ಪೊಸ್ಟ್ ಕಚೇರಿ ಹತ್ತಿರದ ಜನತಾದಳ ಜಾತ್ಯತೀತ ಪಕ್ಷದ ಕಚೇರಿಯಲ್ಲಿ ಜಮಾವಣೆಗೊಂಡು ಪ್ರತಿಭಟನಾ ಸ್ಥಳಕ್ಕೆ ಆಗಮಿಸಲಿದ್ದಾರೆ.

ಜನತಾದಳ ಜಾತ್ಯತೀತ ಪಕ್ಷದಿಂದ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನಾಕಾರರಿಗೆ ದೈರ್ಯ ತುಂಬಲಿದ್ದಾರೆ‌.

ಹೀಗಾಗಿ ಪಕ್ಷದ ಜಿಲ್ಲಾ ಹಾಗೂ ರಾಜ್ಯ ಪದಾಧಿಕಾರಿಗಳು, ಮುಖಂಡರು, ವಿವಿಧ ಘಟಕದ ಅಧ್ಯಕ್ಷರು ,ತಾಲೂಕು ಹಾಗೂ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರು, ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತಿರಬೇಕು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಜನತಾದಳ ಜಾತ್ಯತೀತ ಕಾರ್ಯದರ್ಶಿ
ನವೀನಕುಮಾರ ಕೋರಿದ್ದಾರೆ.

ಅದೇರೀತಿ ವಾರ್ಡ್ ನಂಬರ್ 7ರ ಮಹಾನಗರ ಪಾಲಿಕೆ ಸದಸ್ಯರಾದ ದೀಪಾ ಸಂತೋಷ ನೀರಲಕಟ್ಟಿ,
ಆಮ್ ಆದ್ಮಿ ಪಕ್ಷದ ಮುಖಂಡ ವಿಕಾಸ ಸೋಪ್ಪಿನ, ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಮುತ್ತು ಬೆಳ್ಳಕ್ಕಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.

ಜೊತೆಗೆ ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಜನ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ‌.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *