ರಾಜ್ಯ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ಲಕ್ಷ್ಯದಿಂದ ನರಳಾಡುತ್ತಿರುವ ಹಾವೇರಿ, ದಾವಣಗೆರೆ, ಕಾರವಾರ ಜಿಲ್ಲೆ ಪ್ರಯಾಣಿಕರು….!

ಒಂದು ಶಿಸ್ತು, ಒಂದು ವ್ಯವಸ್ಥೆ ಇಲ್ಲ: ಟಿಕೆಟ್ ವಸೂಲಿಯಷ್ಟೇ ಕಾಯಕ

ನರಳಾಡುತ್ತಿರುವ ಹಾವೇರಿ, ದಾವಣಗೆರೆ, ಕಾರವಾರ ಜಿಲ್ಲೆ ಪ್ರಯಾಣಿಕರು!*

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರನ್ನು ಕಸದಂತೆ ಕಾಣುತ್ತಿದೆ‌. ಪ್ರಯಾಣಿಕರ ದೂರು ದುಮ್ಮಾನಗಳ ಬಗ್ಗೆ ತೆಲೆ ಕೆಡಿಸಿಕೊಳ್ಳದೇ ಮನಸೋ ಇಚ್ಚೆ ಕಾರ್ಯನಿರ್ವಹಿಸುತ್ತಿದೆ. ಒಂದು ಸಾರ್ವಜನಿಕ ಸಂಸ್ಥೆಗೆ ಇರಬೇಕಾದ ಶಿಸ್ತು, ಅಚ್ಚುಕಟ್ಟಾದ ವ್ಯವಸ್ಥೆ ಇಲ್ಲವೇ ಇಲ್ಲ ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.

ಶಿಗ್ಗಾವಿ, ಹಾನಗಲ್, ಸವಣೂರು, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬ್ಯಾಡಗಿ, ಹಿರೇಕೆರೂರು, ಶಿರಸಿ, ಯಲ್ಲಾಪುರ, ಕಾರವಾರ ಈ ಭಾಗಗಳಿಂದ ಸಾವಿರಾರು ಜನಸಾಮಾನ್ಯರು ಉದ್ಯೋಗಕ್ಕಾಗಿ, ವ್ಯಾಪಾರ, ಆಸ್ಪತ್ರೆಗಾಗಿ, ದೈನಂದಿನ ಕೆಲಸಗಳಿಗೆ ಹುಬ್ಬಳ್ಳಿಗೆ ಬಂದು ಹೋಗುತ್ತಾರೆ. ಆದರೆ, ಈ ಜನ ಹುಬ್ಬಳ್ಳಿಯಲ್ಲಿ ಸಾರಿಗೆ ಬಸ್ ನಿಂದ ಎಲ್ಲಿ ಇಳಿಯಬೇಕು? ಎಲ್ಲಿ ಬಸ್ ಹತ್ತಬೇಕು? ಎಂದು ಗೊತ್ತಾಗದೇ ದಿನನಿತ್ಯ ವಿಲವಿಲ ಒದ್ದಾಡುತ್ತಿದ್ದಾರೆ.

ಒಬ್ಬ ಬಸ್ ನವರು (ಶಿಗ್ಗಾವಿ ಕಡೆಯಿಂದ ಬರುವವರು) ಹುಬ್ಬಳ್ಳಿ ಕಮರಿಪೇಟೆ ಪೊಲೀಸ್ ಠಾಣೆ ಹತ್ತಿರ ಬಂದು ಹೊಸ ಬಸ್ ನಿಲ್ದಾಣ ಕ್ಕೆ ಹೋಗ್ತಾರೆ, ಇನ್ನೊಬ್ಬರು ಗಬ್ಬೂರ ಬೈ ಪಾಸ್ ಲಿ ಹೋಗ್ತಾರೆ, ಮತ್ತೊಬ್ಬ ಚನ್ನಮ್ಮ ಸರ್ಕಲ್ ನಿಂದ ಹೋಗ್ತಾರೆ. ಶಿಗ್ಗಾವಿ ಮಾರ್ಗವಾಗಿ ಸವಣೂರು, ಹಾನಗಲ್, ಹಾವೇರಿ, ದಾವಣಗೆರೆ, ಬೆಂಗಳೂರು ಕಡೆಗೆ ಹೋಗುವ ಬಸ್ ನವರು (ಹುಬ್ಬಳ್ಳಿಯಿಂದ ಹೊರಡುವವರು) ಹೊಸ್ ಬಸ್ ನಿಲ್ದಾಣದಿಂದ ಬಿಟ್ಟು ಹೊಸೂರು ಕ್ರಾಸ್ ಬಳಿ ಹೋಗ್ತಾರೆ (ಕೆಲವರು), ಮತ್ತೊಬ್ಬರು ಚನ್ನಮ್ಮ ಸರ್ಕಲ್ ಬಳಿ ಹೋಗ್ತಾರೆ, ಇನ್ನೊಬ್ಬು ಹಾಗೇ ಹೊರಗೆ ಗಬ್ಬೂರು ಬೈಪಾಸ್ ನಿಂದ ಹೋಗುತ್ತಿದ್ದಾರೆ!

ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಎಲ್ಲಿ ಬಸ್ ಹತ್ತಬೇಕು? ಎಲ್ಲಿ ಇಳಿಯಬೇಕು? ಎಂಬ ಬಗ್ಗೆ ತಲೆ ಕೆಟ್ಟು ಹೋಗಿದೆ. ಏಕೆಂದರೆ ಇವರು ಇಳಿಸುವ ನಿಲ್ದಾಣಗಳಲ್ಲಿ ಇಳಿದು ಬೇರೆ ಊರಿನ ಬಸ್ ಹಿಡಿಯಬೇಕೆಂದರೆ, ಆಪೀಸ್ ಗಳಿಗೆ ಹೋಗಬೇಕೆಂದರೆ ಆಟೋ ಹಿಡಿದು ಹೋಗಬೇಕು, ಇಲ್ಲ ದೂರದವರೆಗೆ ನಡೆದುಕೊಂಡೇ ಹೋಗಬೇಕು. ಏಕೆಂದರೆ ಈ ಮಾರ್ಗದಲ್ಲಿ ಸಿಟಿ ಬಸ್ ಗಳ ಸಂಚಾರ ತುಂಬಾ ವಿರಳ.

ಪ್ರತಿ ದಿನ ಸಂಜೆ 9 ಅಥವಾ 9:30ರ ಒಳಗಾಗಿ ಸವಣೂರು, ಹಾನಗಲ್
ಬಸ್ ಗಳು ತಮಗೆ ತಿಳಿದ ಮಾರ್ಗಗಳಲ್ಲಿ ಹಾದು ಹೋಗುತ್ತವೆ.

9ರ ನಂತರ ಹುಬ್ಬಳ್ಳಿ ಯಿಂದ ಹಾವೇರಿ, ಶಿಗ್ಗಾವಿ, ಸವಣೂರು ಹಾನಗಲ್ ಗೆ ಹೋಗಬೇಕಾದವರು ಯಾವ ನಿಲ್ದಾಣಕ್ಕೆ ಹೋಗಬೇಕಪ್ಪಾ ಎಂದು ಗೊಂದಲಕ್ಕೆ ಈಡಾಗುತ್ತಿದ್ದಾರೆ.
ಏಕೆಂದರೆ ಆ ಟೈಮ್ ನಲ್ಲಿ ಈ ಮಾರ್ಗದ ಪ್ರಯಾಣಿಕರು ಹೊಸ ಬಸ್ ನಿಲ್ದಾಣಕ್ಕೆ ಹೋಗಬೇಕೆಂದರೆ 100, 200 ರುಪಾಯಿ ಕೊಟ್ಟು ಆಟೋ ಹಿಡಿದು ಹೋಗಬೇಕು.

ಆ‌ ಸಮಯದಲ್ಲಿ ಇವರು ಇಳಿಸುವ-ಹತ್ತಿಸಿಕೊಳ್ಳುವ ನಿಲ್ದಾಣಗಳಲ್ಲಿ(ಹೊಸೂರು ಕ್ರಾಸ್, ಚನ್ನಮ್ಮ ಸರ್ಕಲ್, ಇಂಡಿ ಪಂಪ್, ಗಬ್ಬೂರು ಬೈಪಾಸ್, etc) ಪ್ರಯಾಣಿಕರು ನಿಂತರೆ ಕೆಲ ಬಸ್ ನವರು ಬೇಕೆಂದರೆ ಹತ್ತಿಸಿಕೊಳ್ಳುತ್ತಾರೆ, ಬೇಡವಾದರೆ ಬಿಟ್ಟು ಹೋಗ್ತಾರೆ!

ಇದರಿಂದ ಒಂದು ಅಥವಾ ಎರಡು ಗಂಟೆಯಲ್ಲಿ ಹಾವೇರಿ, ಶಿಗ್ಗಾವಿ, ಸವಣೂರು, ಹಾನಗಲ್ ತಲುಪವವರು ಮೂರ್ನಾಲ್ಕು ಗಂಟೆಯಾದರೂ‌ ಮನೆ ತಲುಪುವುದಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ರಾತ್ರಿ 9 ಗಂಟೆ ನಂತರ ಹುಬ್ಬಳ್ಳಿಯಿಂದ ಶಿಗ್ಗಾವಿ, ಸವಣೂರು, ಹಾನಗಲ್, ಹಾವೇರಿ, ರಾಣೆಬೆನ್ನೂರು ದಾವಣಗೆರೆಗೆ ಹೋಗುವವರಿಗೆ ತುಂಬಾ ತೊಂದರೆಯಾಗುತ್ತಿದ್ದರೂ NWKRTC ಅಧಿಕಾರಿಗಳು ತಲೆನೇ ಕೆಡಿಸಿಕೊಳ್ಳುತ್ತಿಲ್ಲ.

ಎಲ್ಲಿ ಬಸ್ ಹತ್ತಬೇಕು? ಯಾವ ಬಸ್ ನವನು ನಿಲ್ಲಿಸ್ತಾನೋ ಇಲ್ಲವೋ ಅನ್ನೋ ಗೊಂದಲದಲ್ಲಿ ಪ್ರಯಾಣಿಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ಬಸ್‌ಗಳನ್ನು ಹತ್ತಲು ಹರಸಾಹಸವೇ ಮಾಡಬೇಕು.

ಏಕೆಂದರೆ ಯಾವ ಬಸ್ ಎಲ್ಲಿ ನಿಲ್ಲುತ್ತೊ ಗೊತ್ತಾಗುವುದಿಲ್ಲ, ಟ್ರಾಫಿಕ್ ಮಧ್ಯ ವಾಹನಗಳನ್ನು ಲೆಕ್ಕಿಸದೇ ಬಸ್ ಹತ್ತಲು ಹೋಗಬೇಕು.
ಈ ವೇಳೆ ಪ್ರಯಾಣಿಕರಿಗೆ ಏನಾದರೂ ಅಪಘಾತವಾದರೆ ಯಾರು ಹೊಣೆ? ಎಂದು ಪ್ರಯಾಣಿಕರು ಕೇಳುತ್ತಿದ್ದಾರೆ.

*ಪ್ರಯಾಣಿಕರ ಬೇಡಿಕೆಗಳು*

👉🏼ಮುಖ್ಯವಾಗಿ ಹುಬ್ಬಳ್ಳಿಯಿಂದ ಶಿಗ್ಗಾವಿ ಮಾರ್ಗವಾಗಿ ಸವಣೂರು, ಹಾನಗಲ್, ಹಾವೇರಿ, ದಾವಣಗೆರೆ, ಬೆಂಗಳೂರಿಗೆ ಹೋಗುವ ಬಸ್ ಗಳಿಗೆ ಹುಬ್ಬಳ್ಳಿಯಲ್ಲಿ ಒಂದೇ ಒಂದು ನಿರ್ದಿಷ್ಟ ಹಾಗೂ ನಿಗದಿತ (Fixed) ಮಾರ್ಗವನ್ನು ಗುರುತಿಸಬೇಕು. ಈ ಮಾರ್ಗದಲ್ಲಿ ಅಷ್ಟೇ ಆ ಬಸ್ ಗಳು ಸಂಚರಿಸಬೇಕು. ಹೀಗೆ ಕಾರವಾರ, ಶಿರಸಿ ರೂಟಿಗೂ ಮಾಡಬೇಕು.

👉🏼ಈ ಮಾರ್ಗದಲ್ಲಿ ಗಬ್ಬೂರ ಬೈಪಾಸ್ ವರೆಗೆ ನಿರ್ಧಿಷ್ಟ ಸ್ಥಳಗಳಲ್ಲಿ ಗರಿಷ್ಠ 4 ಬಸ್ ನಿಲುಗಡೆ ಸ್ಥಳಗಳನ್ನು ಬಸ್ ಶೆಲ್ಟರ್ ಗಳನ್ನು ಒಳಗೊಂಡಂತೆ ಮಾಡಬೇಕು.(1ಹೊಸೂರು ಕ್ರಾಸ್ ಬಳಿ ಸಿಂಧೂರ ಲಕ್ಷ್ಮಣ ವೃತ್ತ, 2-ಮಿಲ್ ಬಳಿ, 3-ಇಂಡಿ ಪಂಪ್ ಬಳಿ, 4-ಗಬ್ಬೂರ ಬೈಪಾಸ್).

👉🏼ಈ ರೂಟಿನಲ್ಲಿ ಸಂಚರಿಸುವ ಎಲ್ಲ ಬಸ್ ಗಳು (ಬೆಂಗಳೂರು ಮಾರ್ಗದ ಬಸ್ ಗಳಿಗೂ ಸಹ) ನಿಗದಿತ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ನಿಲುಗಡೆ ಕೊಡಬೇಕು.

ಮೇಲೆ ತಿಳಿಸಿದ ನಿಲ್ದಾಣ ಅಥವಾ ನಿಲುಗಡೆ ಸ್ಥಳಗಳಿಗೆ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ, ಹುಬ್ಬಳ್ಳಿ ಧಾರವಾಡ ರಸ್ತೆಗೆ ಹಾಗೂ ಸಿಬಿಟಿಗೆ ಸಿಟಿ ಬಸ್ ಗಳನ್ನು ಓಡಿಸಬೇಕು.

👉🏼ಈ ಮಾರ್ಗದಲ್ಲಿ ರಾತ್ರಿ 11 ಗಂಟೆವರೆಗೂ (ಮುಖ್ಯವಾಗಿ ಶಿಗ್ಗಾವಿ, ಸವಣೂರು, ಹಾನಗಲ್ ಜನಕ್ಕೆ) ಸುಲಭವಾಗಿ ಸಿಗುವಂತೆ ಉತ್ತಮ ಬಸ್ ಗಳ ವ್ಯವಸ್ಥೆ ಮಾಡಬೇಕು. ಶಿಗ್ಗಾವಿ, ಸವಣೂರು, ಹಾನಗಲ್, ಹಾವೇರಿಗೆ ಓಡಾಡುವ ಹಳೆಯದಾದ ಮುರಕಲು ಬಸ್ ಗಳನ್ನು ನಿಲ್ಲಿಸಿ ಅತ್ಯಾಧುನಿಕ ಹೊಸ ಬಸ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಡಿಸಬೇಕು.

👉🏼ಗಲೀಜು ಬಸ್ ಗಳನ್ನು ಓಡಿಸಬಾರದು.‌ಬಸ್ ಗಳನ್ನು ನೀಟಾಗಿ ನೋಡಿಕೊಂಡು ಬಿಡಬೇಕು. ಚಾಲಕ, ನಿರ್ವಾಹಕರು ಪ್ರಯಾಣಿಕ ಸ್ನೇಹಿಯಾಗಿ ವರ್ತಿಸಬೇಕು.

👉🏼NWKRTC ಯಲ್ಲಿ ಟಿಕೆಟ್ ಗಳಿಗೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನೂ ಸಹ ಅಳವಡಿಸಬೇಕು.

👉🏼ರಾತ್ರಿ 11ರವರೆಗೆ ಎಲ್ಲೂ ಊಟಕ್ಕೆ ನಿಲ್ಲಿಸದ ಬಸ್‌ಗಳನ್ನು ಹುಬ್ಬಳ್ಳಿಯಿಂದ ಹಾವೇರಿ, ಶಿಗ್ಗಾವಿ, ಸವಣೂರು ಹಾನಗಲ್ ಗೆ ಓಡಿಸಬೇಕು. NWKRTC ಬಸ್ ಗಳು ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಬಾರದು.

*ಹಳೇ ಬಸ್ ನಿಲ್ದಾಣ ಪರಿಹಾರ ಅಲ್ಲ*

ಹಳೇ ಬಸ್ ನಿಲ್ದಾಣ ನಿರ್ಮಾಣ ಆದ ಮೇಲೆ ಈಗಿನ ಸಮಸ್ಯೆಗಳು ಸರಿ ಹೋಗುತ್ತದೆ ಅಂತಾ ಅಧಿಕಾರಿಗಳು ಹೇಳುತ್ತಾರೆ. ಆದರೆ, ಇದರಿಂದ ಏನೂ ಪ್ರಯೋಜನ ಇಲ್ಲ. ಏಕೆಂದರೆ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣವಾದ ಮೇಲೂ ಸಮಸ್ಯೆ ಹಾಗೇ ಇವೆ. ಹಳೇ ಬಸ್ ನಿಲ್ದಾಣ ಆದರೂ ಹಾವೇರಿ, ದಾವಣಗೆರೆ, ‌ಕಾರವಾರ ಜಿಲ್ಲೆಯ ಬಸ್ ಗಳನ್ನು ಹೊಸ ಬಸ್ ನಿಲ್ದಾಣದಿಂದ ಓಡಿಸಬೇಕು. ಒಂದು ವೇಳೆ ಹಳೇ ಬಸ್ ನಿಲ್ದಾಣದಿಂದ ಓಡಿಸಿದರೇ ಆ ಭಾಗದಲ್ಲಿ ಮತ್ತೆ ತುಂಬಾ ಟ್ರಾಫಿಕ್ ಸಮಸ್ಯೆಗಳು ಈಗಿನಂತೆ ಕಾಣುತ್ತವೆ. ಏಕೆಂದರೆ ತುಂಬಾ ಕಿರಿದಾದ ರಸ್ತೆಗಳು ಅಲ್ಲಿವೆ. ಹೆಚ್ಚಿನ ಸಿಟಿ ಬಸ್ ಗಳನ್ನು ಹುಬ್ಬಳ್ಳಿಯ ವಿವಿಧ ಭಾಗಗಳಿಂದ ಹೊಸ ಬಸ್ ನಿಲ್ದಾಣಕ್ಕೆ ಓಡಿಸಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

*ಮಹಿಳೆಯರಿಗೆ ಅವಮಾನ*

ಇವಾಗ ಹೊಸ ಬಸ್‌ಸ್ಟ್ಯಾಂಡ್ ಬಿಟ್ಟು ಸದ್ಯ ಬಸ್ ನಿಲ್ಲುವ ಸ್ಥಳಗಳಲ್ಲಿ NWKRTC ಬಸ್ ಗಳಿಗೆ ಬಸ್ ಶೆಲ್ಟರ್‌ಗಳಿಲ್ಲ. ಶೌಚಾಲಯಗಳಿಲ್ಲ. ಮಳೆ, ಬಿಸಿಲು, ಗಾಳಿಯಲ್ಲಿ ಬಸ್ ಹಿಡಿಯಬೇಕು. ಶೌಚಾಲಯಗಳು ಇಲ್ಲದಿರುವುದಂತೂ NWKRTC ಮಹಿಳೆಯರಿಗೆ ಮಾಡುತ್ತಿರುವ ಅವಮಾನವೇ ಆಗಿದೆ.
– ಸಂತೋಷ ಕುಲಕರ್ಣಿ, ಶಿಗ್ಗಾವಿ

*ಸೇವಾ ಮನೋಭಾವ ಇಲ್ಲ*

ಒಬ್ಬನೇ ಒಬ್ಬ ಪ್ರಯಾಣಿಕ ಇದ್ದರೂ ಅಥವಾ ಕಟ್ಟಕಡೆಯ ವ್ಯಕ್ತಿಗೂ ಸರಿಯಾದ ಸೇವೆ ನೀಡಬೇಕು ಎನ್ನುವುದು ಸಂಸ್ಥೆಯ ಪ್ರಥಮ‌ ಆದ್ಯತೆ ಆಗಿರಬೇಕು? ಆದರೆ, NWKRTCಅಲ್ಲಿ ಅಂತಹ ಯಾವುದೇ ಮನೋಭಾವ ಇಲ.
-ಪ್ರಕಾಶ್ ಬಿ, ಹಾವೇರಿ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *