ರಾಜ್ಯ

ಬಸವರಾಜ ಹೊರಟ್ಟಿ ಹಲವು ಚುನಾವಣೆ ಗೆದ್ದರೂ ಶಿಕ್ಷಕರ ಬೇಡಿಕೆ ಈಡೇರಿಲ್ಲ : ಅದೇ ಹಳೆ ಪ್ರಣಾಳಿಕೆ, ಮುಖ ಬೇಡ ಎಂದ ನಿವೃತ್ತ ಶಿಕ್ಷಕ ಆನಂದ ಕುಲಕರ್ಣಿ

ಶಿಕ್ಷಕರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ  ಎಂದು ಬೇಸರ

ಧಾರವಾಡ prajakiran.com : ಕಳೆದ ನಲವತ್ತು ವರ್ಷಗಳ ಕಾಲ ಶಿಕ್ಷಕನಾಗಿ ಶಿಕ್ಷಕರ ಸಂಘಟನೆಗಳ ಸಾಮಿಪ್ಯ ಹೊಂದಿರುವ ನಾನು
ಅನೇಕ ಹೋರಾಟಗಳಲ್ಲಿ ಭಾಗಿಯಾಗಿರುವೆ.

ನನಗೆ ಅರ್ಥವಾಗದ ಸಂಗತಿ ಎಂದರೆ ಬಸವರಾಜ ಹೊರಟ್ಟಿ ಹಲವು ಚುನಾವಣೆ ಗೆದ್ದರೂ ಶಿಕ್ಷಕರ ಬೇಡಿಕೆ ಈಡೇರಿಲ್ಲ. ಹೀಗಾಗಿ ಅದೇ ಹಳೆ ಪ್ರಣಾಳಿಕೆ, ಹಳೆ ಮುಖ ಬೇಡ ಎಂದು ನಿವೃತ್ತ ಶಿಕ್ಷಕ ಆನಂದ ಕುಲಕರ್ಣಿ ತಿಳಿಸಿದರು.

ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯಲು ಕಾರಣ ಹೊರಟ್ಟಿ ಅವರು ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಲೆಕ್ಕಪತ್ರ ಕೊಟ್ಟಿಲ್ಲ,ಹಳೆ ಸಂಘದ ಹೆಸರಿನಲ್ಲಿ ಮತ್ತೊಂದು ಸಂಘ ಕಟ್ಟಿದ್ದಾರೆ. ಅದರ ನಿವೇಶನ ಹುಬ್ಬಳ್ಳಿಯ ಉಣಕಲ್ ನಲ್ಲಿ ಇದೆ 21 ಗುಂಟೆ ನಿವೇಶನ ಸಂಘದ ಹೆಸರಿಗೆ ಬಂದಿದೆ. ಅದರ ಸದ್ಭಳಕೆ ಯಾಗಿಲ್ಲ ಎಂದು ಆನಂದ ಕುಲಕರ್ಣಿ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನರಹಿತ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕನಿಷ್ಟ ವೇತನ,ಸೇವಾಭದ್ರತೆ, ಪಿಂಚಣಿ ಸಿಗದೇ ಇರುವದು.

ಆ ಅನುದಾನ ರಹಿತರ ಸಂಘಟನೆ ಹೋರಾಟ ಮಾಡಿ ಸೊರಗಿ ಹೋಯಿತೇ ವಿನ: ಯಾವೊಬ್ಬ ವಿಧಾನ ಪರಿಷತ್ ಸದಸ್ಯರು ಈ ಬಗ್ಗೆ ಪಶ್ಚಾತ್ತಾಪ ಪಡುತ್ತಿಲ್ಲ.

ಆಗಿರುವ ಆದೇಶ ಜಾರಿ ಆಗದಿರುವದಕ್ಜೆ ಇವರೆಲ್ಲ ಆಡಳಿತ ಮಂಡಳಿಯ ಲಾಬಿಗೆ ಮಣೆದಿರುವರೇ ಎಂದರು.

ಕಳೆದ ಎರಡು ದಶಕಗಳಿಂದ ಕಾಲ್ಪನಿಕ ಬಡ್ತಿ ಸಮಸ್ಯ ಇನ್ನೂ ಜೀವಂತವಾಗೇ ಇದೆ.ಬಹುತೇಕ ಸಿಲ್ವರ ಜುಬಿಲಿಗಾಗಿ ಕಾದಂತಿದೆ.

ಹೊಸ ಪಿಂಚಣಿಗಾಗಿ ಕರಡು ಜಾರಿಯಾದಾಗ ಯಾವ ಸಂಘಟನೆಯ ನಾಯಕರೂ ಆಕ್ಷೇಪಣೆ ಸಲ್ಲಿಸದೇ ಈಗ ಹಳೆ ಪಿಂಚಣಿ ಭರವಸೆ ನೀಡುತ್ತಿರುವದು ಆಶ್ಚರ್ಯ ಎಂದು ಕುಟುಕಿದರು.

ಅನುದಾನಿತ ಶಿಕ್ಷಣ ಸಂಸ್ಥೆಗಳ ಹದಿನಾರು ವರ್ಷಗಳ ವಂತಿಗೆ ತುಂಬುವವರಾರು?….ಅಂದು ಖಾಸಗೀ
ಆಡಳಿತ ಮಂಡಳಿಗಳು ವಂತಿಗೆ ತುಂಬುವದು ಕಷ್ಟ ಎಂದು ಅಳಲು ತೋಡಿಕೊಂಡಾಗ ಆಡಳಿತ ಮಂಡಳಿಯವರ ಪರ ನಿಂತು ಸರಕಾರವೇ ಭರಿಸಲಿ ಎಂದು ಸರಕಾರದ ಮೇಲೆ ಒತ್ತಡ ತಂದ ಶಿಕ್ಷಕ ಪ್ರತಿನಿಧಿಗಳು ಯಾರಾದರೂ ಇದ್ದಾರೆಯೇ ಎಂದು ಪ್ರಶ್ನಿಸಿದರು

ಈ ಬಗ್ಗೆ ಭರವಸೆ ನೀಡುತ್ತಲೇ ಎರಡೆರಡು ಬಾರಿ ವಿಧಾನ ಪರಿಷತ್ ಸದಸ್ಯರಾದವರು ಈಗ ಮತ್ತೆ ಚುನಾವಣೆಗೆ ಬಂದಿದ್ದಾರೆ. ಇದರಲ್ಲಿ ಹಲವರು ಸರಕಾರದ ಭಾಗವಾಗೇ ಇದ್ದರು ಎಂದರು.

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಆಗಿರುವ ಹುದ್ದೆ ತುಂಬಲು( ನಿವೃತ್ತಿ, ನಿಧನ, ಸ್ವಯಂನಿವೃತ್ತಿಯಿಂದ ಆ ಖಾಲಿ ಆಗಿರುವ) ಹೋರಾಟ ಮಾಡು ಸ್ಥಿತಿಗೆ ಸಂಘಟನೆಗಳು ಬಂದಿರುವದು ದುರ್ದೈವ‌.

ಹುದ್ದೆ ಖಾಲಿ ಆಗುತ್ತಲೇ ಹುದ್ದೆ ತುಂಬುವ ಕಾಲ ಒಂದಿತ್ತು.
ಸರಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ಏಕಕಾಲದಲ್ಲಿ ವಿಸ್ತರಣೆ ಆಗಲು ಆದೇಶದಲ್ಲಿ ಒಂದು ವಾಕ್ಯ ಇರುತ್ತಿತ್ತು.

ಆದರೆ ಅದು ಇಂದು ಇಲ್ಲವಾಗಿ ವಿಸ್ತರಣೆಗಾಗಿ ಹೋರಾಟ ಮಾಡಿ ಅದುವೇ ಒಂದು ಸಾಧನೆ ಎಂದು ಹೇಳುವಂತಾಗಿದೆ.

ಸರಕಾರಿ ನೌಕರರಿಗೆ ದೊರೆತ ಸ್ಥಗಿತ ಬಡ್ತಿಗಳಿಗಾಗಿ ನಾಲ್ಕು ವರ್ಷ ನಾನು ಹೋರಾಡಿದೆ.ಆದರೆ ೨೦೧೬ ರಲ್ಲಿ ವಿಸ್ತರಣೆಯಾದಾಗ ಭವಿಷ್ಯಾನ್ವಯವಾಗಿ ಎಂದು ನಮೂದಾಗಿದ್ದರಿಂದ ೨೦೧೨ ರಿಂದ ೨೦೧೬ ರ ವರೆಗೆ ನಿವೃತ್ತಿ ಆದವರಿಗೆ ಸಿಗಲೇ ಇಲ್ಲ.

ಕೋರ್ಟ್ ಗೆ ಹೋಗಿ ಗೆದ್ದರೂ ಕಂಟೆಪ್ಟ ಮಾಡಿ ಎಂಬ ಸಲಹೆ ಶಾಸಕರದ್ದಾಗಿದೆ.
ಮಲೀನವಾಗುತ್ತಿರುವ ಶಿಕ್ಷಣ ರಂಗದ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ.

ಒತ್ತಡದಲ್ಲಿರುವ ಶಿಕ್ಷಕರ ಕಾಳಜೀ ಇಲ್ಲ. ಅಂಕ ಆಧಾರಿತ ಶಿಕ್ಷಣ ಆಗುತ್ತಿರುವ ಬಗ್ಗೆ ಆತಂಕ ವ್ಯಕ್ತ ಮಾಡಿ ಗುಣಮಟ್ಟದ ಶಿಕ್ಷಣದ ಬಗ್ಗೆ ನಮ್ಮ ಶಾಸಕರ ಕಾಳಜಿ ಇಲ್ಲ.

ಸರಕಾರವೇ ಇಂದು ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವಾಗ ದಶಕಗಳಿಂದ ನಡೆದು ಬಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುದಾನ ಏಕೆ ನೀಡಬಾರದು ಎಂದರು.

‌ ಕೋವಿಡ್ ಸಂದರ್ಭದಲ್ಲಿ ಅನುದಾನರಹಿತರ ಗೋಳಿಗೆ ಸಂಘಟನೆಗಳೆಲ್ಲ ಹೋರಾಟ ಮಾಡಿದಾಗ 5000 ರೂಪಾಯಿ ಧನಸಹಾಯ ಬಂತು ( ಹತ್ತಿಪ್ಪತ್ತು ತಿಂಗಳು ವೇತನ ಇರಲಿಲ್ಲ) ಅದನ್ನು ನಾನೇ ಕೊಡಿಸಿದೆ ಎಂದು ಬಿಂಬಿಸುವ ಶಾಸಕರು ಕನಿಷ್ಠ ವೇತನ ಕೊಡಿಸಬಹುದಾಗಿತ್ತು.

ಅತಿಥಿ ಶಿಕ್ಷಕರು,ಅತಿಥಿ ಉಪನ್ಯಾಸಕರ ಆಧಾರಿತವಾದ ಶಿಕ್ಷಣ ಅದೆಷ್ಟು ಫಲ ನೀಡಬಹುದು ಎಂಬ ಬಗ್ಗೆ ನಮ್ನ ಪ್ರತಿನಿಧಿಸುವವರು ಆಲೋಚಿಸಿ ಖಾಯಂ ಮಾಡುವ ಬಗ್ಗೆ ಆಲೋಚನೆ ಮಾಡಲೇ ಇಲ್ಲ ಎಂದು ಹೇಳಿದರು.

ಓಪಿಎಸ್ ( OPS )ಜಾರಿಯಾದರೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಅದು ನಿಲುಕುವದು ಕಷ್ಟ….ಆದರೂ ಆ ಭರವಸೆ ನೀಡುತ್ತಾ ನಡೆದಿರುವದು ಯಾಕೆ?

ಯಾವ ಇಲಾಖೆಗೂ ಇರದ ಕೌನ್ಸಿಲಿಂಗ ಪದ್ದತಿಯ ವರ್ಗಾವಣೆ ಶಿಕ್ಷಕರಿಗೆ ಮಾತ್ರ ಜಾರಿಯಾಗಿ ವರ್ಗಾವಣೆ ಕಬ್ಬಿಣದ ಕಡಲೆ ಆಗಿರುವದು ಎಲ್ಲರೂ ಬಲ್ಲ ಸಂಗತಿ ಎಂದರು.

ಹಾಗಾಗಿ ಶಿಕ್ಷಕರು ಹೆಚ್ಚುವರಿ ಎಂದು ತೋರಿಸಿವದು ಆಗ ಇವರು ಮೂಗು ತೂರಿಸಿ ಬೇಕಾದವರನ್ನು ಬಚಾವು ಮಾಡುವದು ನಡದೇ ಇದೆ.

ಈಗ ಮತ್ತೆ ಪ್ರಣಾಳಿಕೆಯಲ್ಲಿ 
ವೈದ್ಯಕೀಯ ಭತ್ಯೆ ರೂ.25 ಇದ್ದಾಗಲೇ ಅದನ್ನು ಕೊಡಿಸಲಾಗದವರು (ಕಳೆದ 40 ವರ್ಷಗಳಲ್ಲಿ)
ಈಗ ವೈದ್ಯಕೀಯ ಸೌಲಭ್ಯ ಕೊಡಿಸುವ ಭರವಸೆ ನೀಡುತ್ತಿರುವದು ಆಶ್ಚರ್ಯಕರ ಎಂದರು.

ಹೀಗಾಗಿ ಗುರಿಯಿರುವ ಬಸವರಾಜ ಗುರಿಕಾರ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ ಎಂದು ಆನಂದ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕರ ಸಂಘದ ಮುಖಂಡರಾದ ಜಿ.ಎನ್.ಸೊಪ್ಪಿನ ಇತರರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *