ರಾಜ್ಯ

ಧಾರವಾಡದ ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗೆ 3 ವರ್ಷ ಶಿಕ್ಷೆ

ಧಾರವಾಡ ಪ್ರಜಾಕಿರಣ.ಕಾಮ್ ಡಿ.03: ಧಾರವಾಡದ ವಿವಿಧೆಡೆ 4 ಪ್ರಕರಣಗಳಲ್ಲಿ ಬಂಗಾರ ಹಾಗೂ ನಗದು ಕಳ್ಳತನಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ ಚಂದ್ರಕಾಂತ ಅವರು ಶನಿವಾರ ಶಿಕ್ಷೆ ಪ್ರಕಟಿಸಿದ್ದಾರೆ.

ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನವಲೂರಿನ ಎಲ್.ಎಮ್.ಸಿ ಚಾಳನಲ್ಲಿ ವಾಸವಾಗಿರುವ ಮಹೇಶ ರಘು ನಾಯ್ಕ ಮನೆಯ ಕೀಲಿ ಮುರಿದು ಒಟ್ಟು 89 ಗ್ರಾಂ ತೂಕದ ಬಂಗಾರ ಹಾಗೂ 100 ಗ್ರಾಂ ಬೆಳ್ಳಿ ಅಂದಾಜು ರೂ.2,24,000/- ರಷ್ಟು ಕಳ್ಳತನ ಮಾಡಿದ್ದರು.

ಅದೇ ರೀತಿ ಕೆ.ಎಮ್.ಎಫ್. ಹತ್ತಿರ ನಂದಿನಿ ಲೇಔಟನಲ್ಲಿ ವಾಸವಾಗಿರುವ ಸತೀಶ ಸಿದ್ದಪ್ಪ ಹೆಗ್ಗಣವರ ಇವರ ಮನೆಯ ಕೀಲಿ ಮುರಿದು ಒಟ್ಟು 20 ಗ್ರಾಂ ತೂಕದ ಬಂಗಾರ ಹಾಗೂ 130 ಗ್ರಾಂ ಬೆಳ್ಳಿ ಹಾಗೂ 20,000/- ರೂ ನಗದು ಕಳ್ಳತನ ಮತ್ತು ಬಾಲತ್ರಿಪುರಸುಂದರಿ ದೇವಸ್ಥಾನದ ಹತ್ತಿರ ವಾಸವಾಗಿರುವ ಮಲ್ಲಿಕಾರ್ಜುನಯ್ಯ ಎನ್ ಅಳಗುಂಡಿಮಠ ಇವರ ಮನೆಯಲ್ಲಿ ಒಟ್ಟು 12 ಗ್ರಾಂ ತೂಕದ ಬಂಗಾರ ಹಾಗೂ 2,500 ಗ್ರಾಂ ಬೆಳ್ಳಿ ರೂ 1,24,000/- ಅಂದಾಜು ಹಾಗೂ 3,000/- ರೂ ನಗದು ಕಳ್ಳತನ ಮಾಡಿದ್ದರು.

ಧಾರವಾಡದ ಶಿವಾಜಿನಗರದಲ್ಲಿ ವಾಸವಾಗಿರುವ ಸುಭಾಸ ಕೃಷ್ಣಾ ಶಿಂಧೆ ಇವರ ಮನೆಯಲ್ಲಿ  ಒಟ್ಟು 142 ಗ್ರಾಂ ತೂಕದ ಬಂಗಾರದ ರೂ 3,52,000/- ಅಂದಾಜು  ಹಾಗೂ 7,000/- ರೂ ನಗದು ಕಳ್ಳತನ ಮಾಡಲಾಗಿತ್ತು.

ಧಾರವಾಡದ ನವಲೂರಿನ ವಿನಾಯಕನಗರದಲ್ಲಿ ವಾಸವಾಗಿರುವ ಭೀಮಸಿ ಎಮ್ ಬೆಂಗೇರಿ ಇವರ ಮನೆಯಲ್ಲಿ ಒಟ್ಟು 50 ಗ್ರಾಂ ತೂಕದ ಬಂಗಾರ ಹಾಗೂ 65,000/- ರೂ ನಗದು ಕಳ್ಳತನ ಮಾಡಿದ್ದರ ಕುರಿತು ಧಾರವಾಡ ವಿದ್ಯಾಗಿರಿ ಪೊಲೀಸರು ಒಬ್ಬ ವೆಂಕಟೇಶರೆಡ್ಡಿ ಅಲಿಯಾಸ ಇಮ್ತಿಯಾಜ ಶೇಖ ತಂದೆ ನಾಗರಾಜನ್, ವನ್ನಾರ, ಅಲಿಯಾಸ ಅಜಮೀರ ಶೇಖ ವಾಸ: ಹೊಸೂರ, ಶಾಂತಿನಗರ, ತಮಿಳುನಾಡು ರಾಜ್ಯ ಹಾಲಿವಾಸ: ಜನ್ನತನಗರ ಧಾರವಾಡ ಎಂಬ ವ್ಯಕ್ತಿಯನ್ನು ಬಂಧಿಸಿ ಸಮಗ್ರ ತನಿಖೆ ಮಾಡಿದಾಗ ಈ ಮೇಲ್ಕಾಣಿಸಿದ ಪ್ರದೇಶಗಳ ಮನೆಗಳ ಕೀಲಿಯನ್ನು ಮುರಿದು ಬಂಗಾರ, ಬೆಳ್ಳಿಯ ಒಡವೆಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿರುತ್ತದೆ.

ಅಲ್ಲದೇ ಸದರಿ ಆರೋಪಿ ತಾನು ಕಳ್ಳತನ ಮಾಡಿದ ಮಾಲನ್ನು ಶಬ್ಬೀರ ರೆಹಮಾನಸಾಬ ಶೇಖ, ಜನ್ನತನಗರ ಧಾರವಾಡ ಇತನಿಗೆ ಮಾರಾಟ ಮಾಡಲು ಕೊಡುತ್ತಿರುವ ಸಂಗತಿ ತಿಳಿದು ಬಂದಿರುತ್ತದೆ.

ಪೊಲೀಸರು ಸದರಿ ಇಬ್ಬರು ಆರೋಪಿತರ ವಶದಿಂದ ಕಳ್ಳತನವಾದ ಒಡವೆಗಳನ್ನು ಜಪ್ತಿ ಮಾಡಿದ್ದು, ಮೇಲ್ಕಾಣಿಸಿದ ಪ್ರಕರಣಗಳ ಪಿರ್ಯಾದಿದಾರರು ಅವುಗಳನ್ನು ಗುರುತಿಸಿರುತ್ತಾರೆ.

ಧಾರವಾಡ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ ಚಂದ್ರಕಾಂತ ಇವರು 1) ಸಿ.ಸಿ ನಂ.1088/2019 2) ಸಿ.ಸಿ ನಂ.2537/2018 3) ಸಿ.ಸಿ ನಂ.3376/2018 4) ಸಿಸಿ ನಂ.1125/2019.
ಈ ಪ್ರಕರಣಗಳಲ್ಲಿ 1ನೇ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 454 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ

ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ.

ಅದೇರೀತಿ, ಭಾರತೀಯ ದಂಡ ಸಂಹಿತೆ ಕಲಂ 380 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ

ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಹಾಗೂ 02 ನೇ ಆರೋಪಿಗೆ ಭಾರತೀಯ.ದಂಡ.ಸಂಹಿತೆ ಕಲಂ 411 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ

ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 2 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಉಳಿದ ಇನ್ನೊಂದು ಪ್ರಕರಣ ಸಂಖ್ಯೆ 5) ಸಿಸಿ 3142/2018 ರಲ್ಲಿ 1ನೇ ಆರೋಪಿಗೆ ಭಾರತೀಯ.ದಂಡ.ಸಂಹಿತೆ ಕಲಂ 454 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ

ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ.

ಅದೇರೀತಿ ಭಾರತೀಯ.ದಂಡ.ಸಂಹಿತೆ ಕಲಂ 380 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಿದೆ

ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಸದರಿ ಪ್ರಕರಣಗಳಲ್ಲಿ  ಎ.ಎಸ್.ಐ  ಗಳಾದ ಬಿ.ಎಮ್.ಅಂಗಡಿ. ಎಸ್.ಕೆ.ಯಾವಗಲ್ಲಮಠ,

ಎನ್.ಕೆ.ಗುರ್ಲಹೋಸೂರ ಪಿ.ಎಸ್.ಐ, ರವರು ಆರೋಪಿತರ ವಿರುದ್ದ ದೂರಗಳನ್ನು ಸ್ವೀಕರಿಸಿ ಪ್ರಕರಣಗಳನ್ನು ದಾಖಲಿಸಿಕೊಂಡು ಭಾಗಶ: ತನಿಖೆ ಮಾಡಿರುತ್ತಾರೆ.

ಹಾಗೂ ಎಮ್.ವಿ.ಹೊಸಪೇಟಿ, ಪೊಲೀಸ ಇನ್ಸಪೆಕ್ಟರ್, ವಿದ್ಯಾಗಿರಿ ಪೊಲೀಸ ಠಾಣೆ ಧಾರವಾಡ ರವರು ಆರೋಪಿತರ ವಿರುದ್ದ ಮುಂದಿನ ತನಿಖೆಯನ್ನು ಕೈಗೊಂಡು ದೋಷಾರೋಪಣ ಪಟ್ಟಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ಸರ್ಕಾರದ ಪರವಾಗಿ ಹಿರಿಯ ಸಹಾಯ ಸರ್ಕಾರಿ ವಕೀಲ (ಅಭಿಯೋಜಕರು) ರಾದ ಅನಿಲಕುಮಾರ ಆರ್ ತೊರವಿ ಇವರು ವಕಾಲತ್ತು ಮಂಡಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *