ಅಂತಾರಾಷ್ಟ್ರೀಯ

ರಾಜ್ಯದ 8.71 ಲಕ್ಷ ಕ್ಕೂ ಅಧಿಕ ಎಸ್ ಎಸ್ ಎಲ್ ಸಿ ಮಕ್ಕಳ, ಪೋಷಕರ ಜೊತೆಗೆ ಚೆಲ್ಲಾಟ ಬೇಡ

ಕೂಡಲೇ ಪರೀಕ್ಷೆ ರದ್ದು ಪಡಿಸಿ,ಆತಂಕ ದೂರ ಮಾಡಿ 

ಸಿಬಿಎಸ್ಸಿ ಹಾಗೂ ಇತರೆ ರಾಜ್ಯದ ಮಾದರಿ ಅನುಸರಿಸಲು ಸಲಹೆ

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಒತ್ತಾಯ

ಧಾರವಾಡ prajakiran.com : ರಾಜ್ಯದ ಪ್ರಸಕ್ತ ಸಾಲಿನ 8.71 ಲಕ್ಷ ಕ್ಕೂ ಅಧಿಕ
ಎಸ್ ಎಸ್ ಎಲ್ ಸಿ ಮಕ್ಕಳ ಹಾಗೂ ಪೋಷಕರ ಜೊತೆಗೆ ರಾಜ್ಯದ ಶಿಕ್ಷಣ ಸಚಿವ ಸುರೇಶಕುಮಾರ ಅವರು
ಚೆಲ್ಲಾಟವಾಡುವುದು ಬೇಡ.

ಕೂಡಲೇ ಪರೀಕ್ಷೆ ರದ್ದು ಪಡಿಸಿ,ಆತಂಕ ದೂರ ಮಾಡಿ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಒತ್ತಾಯ ಮಾಡಿದರು.

ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಸಿಬಿಎಸ್ಸಿ ಹಾಗೂ ಇತರೆ ಎಂಟು ರಾಜ್ಯದ ಮಾದರಿ ಅನುಸರಿಸಲು ಸಲಹೆ ನೀಡಿದರು.

ಸಚಿವರು ಅನಗತ್ಯವಾಗಿ ಕಾಲ ಹರಣ ಮಾಡದೆ, ಎರಡು ದಿನಗಳಲ್ಲಿ ಈ ಕುರಿತು ತಮ್ಮ ನಿಲುವು ಪ್ರಕಟಿಸಬೇಕು.
ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಸಕೂಡದು‌‌. ಪಾಲಕರ ಹೊಣೆ ಮೇಲೆ ಪರೀಕ್ಷೆ ಬರೆಸಲು ಮುಂದಾಗಬಾರದು.

ಕಳೆದ ಬಾರಿಯ ಪರಿಸ್ಥಿತಿಗೂ ಈ ಬಾರಿಯ ಪರಿಸ್ಥಿತಿ ಬಹಳಷ್ಟು ವ್ಯತ್ಯಾಸ ಇದೆ ಎಂದು ಹೇಳಿದರು.

ಹಾವೇರಿಯಿಂದ ಬೀದರ, ಚಿಕ್ಕೋಡಿಯವರೆಗೆ 4.70 ಲಕ್ಷ ಮಕ್ಕಳಿದ್ದಾರೆ. ಧಾರವಾಡ ಜಿಲ್ಲೆಯಲ್ಲಿಯೇ 30 ಸಾವಿರ ಮಕ್ಕಳಿದ್ದಾರೆ. ನಮ್ಮ ಭಾಗದ ಮಕ್ಕಳ ಸಂಖ್ಯೆ ಹೆಚ್ಚಿರುವುದು ಇಲ್ಲಿ ಗಮನಿಸಬೇಕು.

ಈಗಾಗಲೇ ಪಂಜಾಬ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ ಸರ್ಕಾರ ಸೇರಿದಂತೆ ದೇಶದ ಬಹುತೇಕ ರಾಜ್ಯದ ಸರ್ಕಾರ ಕೈ ಗೊಂಡ ಮಾದರಿಯಲ್ಲಿ ಈಗಾಗಲೇ ನಡೆಸಿರುವ ಆನ್ ಲೈನ್, ಆಫಲೈನ್ ಪರೀಕ್ಷೆ ಮಾದರಿಯ ಮೇಲೆ ವಿದ್ಯಾರ್ಥಿಗಳನ್ನು ಪಾಸು ಮಾಡಿ.

ಒಂದು ವೇಳೆ ಪರೀಕ್ಷೆ ಬರೆಯುದಾದರೆ ಸಿಬಿಎಸ್ಸಿ ಅನುಸರಿಸಿರುವ
ಸಪ್ಲಿಮೆಂಟರಿ ಪರೀಕ್ಷೆಯನ್ನು ಸಾಮಾನ್ಯ ಪರೀಕ್ಷೆ ಮಾದರಿಯಲ್ಲಿ ಬರೆಯಲು ಅವಕಾಶ ನೀಡಿ ಎಂದು ನೀರಲಕೇರಿ ಆಗ್ರಹಿಸಿದ್ದಾರೆ.

ಊಹಾಪೋಹಗಳಿಗೆ ಕಿವಿಗೊಡಬೇಡಿಚೆನ್ನುವ ಶಿಕ್ಷಣ ಸಚಿವರು ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡುವ ಪರಿಸ್ಥಿತಿ ನಿರ್ಮಾಣ ವಾಗಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು ‌

ಎ.14 ರಂದೇ ಕೇಂದ್ರೀಯ ವಿದ್ಯಾಲಯ ತೀರ್ಮಾನ ಕೈಗೊಂಡರೂ ,ಈವರೆಗೆ ಕೇವಲ ಪರೀಕ್ಷೆ ಮುಂದೂಡಲು ಸಮಯ ತೆಗೆದುಕೊಳ್ಳುತ್ತಿರುವ ನೀವು ಇಂತಹ ದಿನಾಂಕ ಕೋವಿಡ್ ನಿಲ್ಲುತ್ತೆ.

ನಾವು ಇಂತಹ ದಿನ ಪರೀಕ್ಷೆ ನಡೆಸುತ್ತೇವೆ ಎಂದು ಹೇಳಿ ನೋಡೋಣ ಎಂದು ಸವಾಲು ಎಸೆದರು.

 ಈ ಪತ್ರಿಕಾಗೋಷ್ಠಿಯಲ್ಲಿ ಪೋಷಕರಾದ
ಸಿದ್ದಣ್ಣ ಕಂಬಾರ, ಡಾ. ಸಂಜನಾ ನಾಯಕ್, ಜ್ಯೋತಿ ದಿಕ್ಷಿತ್, ಬಸವರಾಜ ಕೋತ್ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *