ರಾಜ್ಯ

ನೂತನ ಸಚಿವರಿಗೆ ಖಾತೆ ಹಂಚಿಕೆ : ರಾಜ್ಯಪಾಲರ ಅಂಕಿತ

ಶಶಿಕಲಾ ಜೊಲ್ಲೆಗೆ ಕೈ ತಪ್ಪಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ….!

ಬೆಂಗಳೂರು prajakiran.com :
ಬಸವರಾಜ ಬೊಮ‌್ಮಾಯಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರ ಅಂಕಿತ ಹಾಕಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಪ್ತಚರ, ಬೆಂಗಳೂರು ಅಭಿವೃದ್ಧಿ, ಡಿಪಿಎಆರ್ ಹಾಗೂ ಹಂಚಿಕೆಯಾಗದ ಖಾತೆಗಳನ್ನು ಹೊಂದಿದ್ದಾರೆ.

ಗೋವಿಂದ ಕಾರಜೋಳ ಬೃಹತ್ ಮತ್ತು ಮಧ್ಯಮ ನೀರಾವರಿ, ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ, ಆರ್. ಅಶೋಕ ಮುಜರಾಯಿ ಹೊರತು ಪಡಿಸಿ ಕಂದಾಯ ಇಲಾಖೆ, ಬಿ. ಶ್ರೀರಾಮುಲು ಸಾರಿಗೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ, ವಿ. ಸೋಮಣ್ಣ ವಸತಿ ಸಚಿವರಾಗಿ ಮುಂದುವರೆದಿದ್ದಾರೆ‌.

ಉಮೇಶ ಕತ್ತಿ ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಖಾತೆ, ಎಸ್ ಅಂಗಾರ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ, ಜೆ.ಸಿ. ಮಾಧುಸ್ವಾಮಿ ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರಾಗಿ ಮುಂದುವರೆಸಲಾಗಿದೆ.

ಈ ಬಾರಿ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಗೆ ಗೃಹ ಖಾತೆ ಜವಾಬ್ದಾರಿ ನೀಡಲಾಗಿದ್ದು, ಉಳಿದಂತೆ ಡಾ. ಅಶ್ವಥ್ ನಾರಾಯಣ ಉನ್ನತ ಶಿಕ್ಷಣ , ಡಾ. ಕೆ. ಸುಧಾಕರ್ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ, ಸಿ.ಸಿ. ಪಾಟೀಲ ಲೋಕೋಪಯೋಗಿ ಇಲಾಖೆ, ಆನಂದ್ ಸಿಂಗ ಪರಿಸರ ಮತ್ತು ಪ್ರವಾಸೋದ್ಯಮ, ಕೋಟಾ ಶ್ರೀನಿವಾಸ ಪೂಜಾರಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ನೀಡಲಾಗಿದೆ.

ಅದೇ ರೀತಿ ಪ್ರಭು ಚವ್ಹಾಣ ಅವರಿಗೆ ಪಶು ಸಂಗೋಪನೆ, ಮುರುಗೇಶ ನಿರಾಣಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ, ಶಿಮರಾಮ್ ಹೆಬ್ಬಾರ್ ಗೆ ಕಾರ್ಮಿಕ ಖಾತೆ ಹಂಚಿಕೆ ಮಾಡಲಾಗಿದೆ.

ಎಸ್.ಟಿ ಸೋಮಶೇಖರ್ ಗೆ ಸಹಕಾರ, ಬಿ.ಸಿ. ಪಾಟೀಲ ಕೃಷಿ ,ಬೈರತಿ ಬಸವರಾಜ ಗೆ ನಗರಾಭಿವೃದ್ಧಿ, ಕೆ. ಗೋಪಾಲಯ್ಯಗೆ ಅಬಕಾರಿ, ಶಶಿಕಲಾ ಜೊಲ್ಲೆಗೆ ಮೊಟ್ಟೆ ಹಗರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅವರಿಗೆ ಆಖಾತೆಯಿಂದ ಕೈ ಬಿಟ್ಟು ಮುಜರಾಯಿ, ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ.

ಎಂಟಿಬಿ ನಾಗರಾಜುಗೆ ಪೌರಾಡಳಿತ, ನಾರಾಯಣ ಗೌಡಗೆ ರೇಷ್ಮೆ, ಮತ್ತು ಯುವಜನ ಸಬಲೀಕರಣ, ತಿಪಟೂರು ಶಾಸಜ ಬಿ.ಸಿ.ನಾಗೇಶ್ ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ನೀಡಲಾಗಿದೆ.

ಕಾರ್ಕಳ ಶಾಸಕ ಸುನೀಲಕುಮಾರ್ ಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ, ಹಾಲಪ್ಪ ಆಚಾರ್ಯಗೆ ಗಣಿ ಮತ್ತು ಭೂ ವಿಜ್ಞಾನ, ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪಗೆ ಕೈ ಮಗ್ಗ, ಜವಳಿ, ಸಕ್ಕರೆ, ಮುನಿರತ್ನಗೆ ತೋಟಗಾರಿಕೆ ಖಾತೆ ನೀಡಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *