naragund police
ರಾಜ್ಯ

ನರಗುಂದ ಠಾಣೆ ಸೀಲ್ ಡೌನ್

ಪೊಲೀಸ್ ಕಾನ್ಸಟೇಬಲ್ ಗೆ ಕೊರೊನಾ…!

ಗದಗ prajakiran.com : ಜಿಲ್ಲೆಯ ನರಗುಂದ ತಾಲೂಕಿನ ಪೊಲೀಸ್ ಕಾನ್ಸಟೇಬಲ್ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. 

ಕಾನ್ಸಟೇಬಲ್ ಸ್ವ್ಯಾಬ್ ಟೆಸ್ಟ ರೀಪೋರ್ಟ ಬರುವ ಮುಂಚೆಯಿಂದಲೂ ಕರ್ತವ್ಯ ನಿರ್ವಹಣೆ ಮಾಡಿದ್ದರಿಂದ ಅವರು ಪಟ್ಟಣದ ಎಲ್ಲ ಕಡೆ ತಿರುಗಾಡಿದ್ದು,  ಕೋವಿಡ್ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ತಾಲೂಕಿನ ಜನತೆ ಭಯಬೀತರಾಗುವಂತೆ ಮಾಡಿದೆ.

ಅಲ್ಲದೆ,  ಒಂದೇ ಆವರಣದಲ್ಲಿ ಪಿಎಸ್ಐ, ಸಿಪಿಐ, ಡಿವೈಎಸ್ಪಿ ಯ ಮೂರು ಪೊಲೀಸ್ ಠಾಣೆಗಳಿದ್ದು, ಸುಮಾರು ೪೦ ಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಇತರೆ ಪೊಲೀಸ್ ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿದೆ.

ಪೊಲೀಸ್ ಠಾಣೆಯನ್ನು ಸಿಲ್ ಡೌನ್ ಗೊಳಿಸಿ,  ಠಾಣೆಗೆ ಪುರಸಭೆ ಸಿಬ್ಬಂದಿಗಳು ಸ್ಯಾನಿಟೈಸರ್ ಸಿಂಪರಣೆ ಮಾಡಲಾಗುತ್ತಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಾಥಮಿಕ ಸಂಪರ್ಕಿತರನ್ನು  ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *