ಮುಂಬೈ prajakiran.com : ಮಹಿಳೆಯೊಬ್ಬರಿಗೆ ಒಂದೇ ನಿಮಿಷದಲ್ಲಿ ಮೂರು ಡೋಸ್ ಕೋವಿಡ್ ವಾಕ್ಸಿನ್ ನೀಡಿರುವ ಘಟನೆ ಮುಂಬೈನ ಆನಂದ್ ನಗರ್ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ನಡೆದಿದೆ.
ಥಾಣೆ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಉದ್ಯೋಗ ಮಾಡುತ್ತಿರುವ ಪತಿಯ ಬಳಿ ಪತ್ನಿಯು ಮೂರು ಡೋಸ್ ಲಸಿಕೆ ನೀಡಿರುವ ಬಗ್ಗೆ ತಿಳಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದೀಗ ಆ ಮಹಿಳೆಯ ಆರೋಗ್ಯದ ಬಗ್ಗೆ ಮಹಾನಗರ ಪಾಲಿಕೆ ನಿಗಾ ವಹಿಸಿದೆ. ಸಂತ್ರಸ್ತ ಮಹಿಳೆಯು ಈ ವಿಚಾರವಾಗಿ ದೂರು ಕೊಡಲು ಆಸಕ್ತಿ ಹೊಂದಿಲ್ಲ ಎಂದು ವರದಿಯಾಗಿದೆ.
ಮೂರು ಡೋಸ್ ಪಡೆದ ದಿನ ಪತ್ನಿಗೆ ಜ್ವರ ಬಂದಿತ್ತು. ಈಗ ಆರೋಗ್ಯವಾಗಿದ್ದಾಳೆ ಎಂದು ಸಂತ್ರಸ್ತೆ ಪತಿ ತಿಳಿಸಿದ್ದಾರೆ.