ರಾಜ್ಯ

ಧಾರವಾಡದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಸಲೀಂ ಅಹ್ಮದ್, ಬಿಜೆಪಿಯ ಪ್ರದೀಪ ಶೆಟ್ಟರ್ ಜಯಭೇರಿ

ಧಾರವಾಡ prajakiran.com ಡಿ.14 : ಧಾರವಾಡ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನಪರಿಷತ್‍ನ ಎರಡು ಸ್ಥಾನಗಳಿಗೆ ಜರುಗಿದ ದ್ವೈವಾರ್ಷಿಕ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದ್ ಅವರು 3334 ಮತಗಳನ್ನು ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ ಅವರು 2497 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ವಿಜೇತ ಅಭ್ಯರ್ಥಿಗಳಿಗೆ ಆಯ್ಕೆಯಾದ ಕುರಿತು ಪ್ರಮಾಣಪತ್ರವನ್ನು ವಿತರಿಸಿ ಅಧಿಕೃತವಾಗಿ ಘೋಷಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

 ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಮತದಾರರನ್ನು ಒಳಗೊಂಡ ಎರಡು ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಡಿಸೆಂಬರ್ 10, 2021 ರಂದು ಜರುಗಿದ ಚುನಾವಣೆಯಲ್ಲಿ ಒಟ್ಟು 10 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

 (ಡಿ.14) ಬೆಳಿಗ್ಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಮತ ಏಣಿಕಾ ಕೇಂದ್ರದಲ್ಲಿ ಬೆಳಿಗ್ಗೆ 7-30 ಕ್ಕೆ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತಪೆಟ್ಟಿಗೆಗಳನ್ನು ಇಟ್ಟಿರುವ ಭದ್ರತಾ ಕೊಠಡಿಯನ್ನು ತೆರೆಯಲಾಯಿತು.

ನಂತರ ಮಧ್ಯಾಹ್ನ 1-10 ಗಂಟೆಯವರೆಗೆ ಶಾಂತಿಯುತವಾಗಿ ಮತ ಏಣಿಕಾ ಕಾರ್ಯವನ್ನು ಜರುಗಿಸಲಾಯಿತು.

*ಅಭ್ಯರ್ಥಿಗಳು ಪಡೆದ ಮತಗಳ ವಿವರ* :
*ಮೊದಲ ಸುತ್ತು ಏಣಿಕೆ ನಂತರ*: ಪ್ರದೀಪ ಶೆಟ್ಟರ-469, ಸಲೀಂ ಅಹ್ಮದ್-640, ಟಿ.ಶಿವಕುಮಾರ-01, ಫಕೀರಡ್ಡಿ ಅತ್ತಿಗೇರಿ-0, ಈರಪ್ಪ ಗುಬ್ಬೆರ-02, ಬಸವರಾಜ ಕೊಟಗಿ-0, ಮಲ್ಲಿಕಾರ್ಜುನ ಹಾವೇರಿ-209, ಮಹೇಶ ಜೋಷಿ-01, ಮಂಜುನಾಥ ಅದಮನಿ-01, ವಿರೂಪಾಕ್ಷಗೌಡ ಪಾಟೀಲ-0 ಒಟ್ಟು ಸಿಂಧು ಮತ-1323 ಒಟ್ಟು ಅಸಿಂಧು ಮತ-77 ಒಟ್ಟು ಏಣಿಕೆಯಾದ ಮತ-1400

*ಎರಡನೇಯ ಸುತ್ತು ಮತ ಏಣಿಕೆ ನಂತರ*: ಪ್ರದೀಪ ಶೆಟ್ಟರ-973, ಸಲೀಂ ಅಹ್ಮದ್-1274, ಟಿ.ಶಿವಕುಮಾರ-02, ಫಕೀರಡ್ಡಿ ಅತ್ತಿಗೇರಿ-0, ಈರಪ್ಪ ಗುಬ್ಬೆರ-02, ಬಸವರಾಜ ಕೊಟಗಿ-0, ಮಲ್ಲಿಕಾರ್ಜುನ ಹಾವೇರಿ-390, ಮಹೇಶ ಜೋಷಿ-03, ಮಂಜುನಾಥ ಅಡಮನಿ-03, ವಿರೂಪಾಕ್ಷಗೌಡ ಪಾಟೀಲ- 0, ಒಟ್ಟು ಸಿಂಧು ಮತ: 2647 ಒಟ್ಟು ಅಸಿಂಧು ಮತ- 153 ಒಟ್ಟು ಏಣಿಕೆಯಾದ ಮತ – 2800

*ಮೂರನೇಯ ಸುತ್ತು ಮತ ಏಣಿಕೆ ನಂತರ*: ಪ್ರದೀಪ ಶೆಟ್ಟರ-1428, ಸಲೀಂ ಅಹ್ಮದ್-1864, ಟಿ.ಶಿವಕುಮಾರ-02, ಫಕೀರಡ್ಡಿ ಅತ್ತಿಗೇರಿ-0, ಈರಪ್ಪ ಗುಬ್ಬೆರ-02, ಬಸವರಾಜ ಕೊಟಗಿ-01, ಮಲ್ಲಿಕಾರ್ಜುನ ಹಾವೇರಿ-675, ಮಹೇಶ ಜೋಷಿ-03, ಮಂಜುನಾಥ ಅಡಮನಿ-03, ವಿರೂಪಾಕ್ಷಗೌಡ ಪಾಟೀಲ-01 ಒಟ್ಟು ಸಿಂಧು ಮತ- 3979 ಒಟ್ಟು ಅಸಿಂಧು ಮತ- 221 ಒಟ್ಟು ಏಣಿಕೆಯಾದ ಮತ-4200

*ನಾಲ್ಕನೇಯ ಸುತ್ತುಮತ ಏಣಿಕೆ ನಂತರ*: ಪ್ರದೀಪ ಶೆಟ್ಟರ-1885, ಸಲೀಂ ಅಹ್ಮದ್-2512, ಟಿ.ಶಿವಕುಮಾರ-02, ಫಕೀರಡ್ಡಿ ಅತ್ತಿಗೇರಿ-01, ಈರಪ್ಪ ಗುಬ್ಬೆರ-03, ಬಸವರಾಜ ಕೊಟಗಿ-01, ಮಲ್ಲಿಕಾರ್ಜುನ ಹಾವೇರಿ-897, ಮಹೇಶ ಜೋಷಿ-04, ಮಂಜುನಾಥ ಅಡಮನಿ-04, ವಿರೂಪಾಕ್ಷಗೌಡ ಪಾಟೀಲ-02, ಒಟ್ಟು ಸಿಂಧು ಮತ-5311, ಒಟ್ಟು ಅಸಿಂಧು ಮತ-289 ಒಟ್ಟು ಏಣಿಕೆಯಾದ ಮತ-5600

*ಐದನೇಯ ಸುತ್ತುಮತ ಏಣಿಕೆ ನಂತರ*: ಪ್ರದೀಪ ಶೆಟ್ಟರ-2277, ಸಲೀಂ ಅಹ್ಮದ್-3048, ಟಿ.ಶಿವಕುಮಾರ-02, ಫಕೀರಡ್ಡಿ ಅತ್ತಿಗೇರಿ-01, ಈರಪ್ಪ ಗುಬ್ಬೆರ-04, ಬಸವರಾಜ ಕೊಟಗಿ-04, ಮಲ್ಲಿಕಾರ್ಜುನ ಹಾವೇರಿ-1107, ಮಹೇಶ ಜೋಷಿ-08, ಮಂಜುನಾಥ ಅಡಮನಿ-05, ವಿರೂಪಾಕ್ಷಗೌಡ ಪಾಟೀಲ-04 ಒಟ್ಟು ಸಿಂಧು ಮತ-6460 ಒಟ್ಟು ಅಸಿಂಧು ಮತ-340 ಒಟ್ಟು ಏಣಿಕೆಯಾದ ಮತ-6800

*ಅಂತಿಮ ಸುತ್ತು ಮತ ಏಣಿಕೆ ನಂತರ*: ಅಂತಿಮವಾಗಿ ಪ್ರದೀಪ ಶೆಟ್ಟರ-2497, ಸಲೀಂ ಅಹ್ಮದ್-3334, ಟಿ.ಶಿವಕುಮಾರ-03, ಫಕೀರಡ್ಡಿ ಅತ್ತಿಗೇರಿ-01, ಈರಪ್ಪ ಗುಬ್ಬೆರ-04, ಬಸವರಾಜ ಕೊಟಗಿ-05, ಮಲ್ಲಿಕಾರ್ಜುನ ಹಾವೇರಿ-1217, ಮಹೇಶ ಜೋಷಿ-09, ಮಂಜುನಾಥ ಅಡಮನಿ-05, ವಿರೂಪಾಕ್ಷಗೌಡ ಪಾಟೀಲ-05 ಒಟ್ಟು ಸಿಂಧು ಮತ- 7080 ಒಟ್ಟು ಅಸಿಂಧು ಮತ-370 ಒಟ್ಟು ಏಣಿಕೆಯಾದ ಮತ-7450.

ಮತ ಏಣಿಕಾ ಕೇಂದ್ರದಲ್ಲಿ ಚುನಾವಣಾ ವೀಕ್ಷಕರಾದ ಎಸ್.ಆರ್. ಉಮಾಶಂಕರ  ಉಪಸ್ಥಿತರಿದ್ದರು.

ಧಾರವಾಡ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹಾವೇರಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಗದಗ ಅಪರ ಜಿಲ್ಲಾಧಿಕಾರಿ ಎಮ್. ಸತೀಶಕುಮಾರ ಅವರು ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *