ರಾಜ್ಯ

ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ‌‌ ರಚನೆಗೆ ಮರಾಠ ವಿದ್ಯಾ ಪ್ರಸಾರಕ ಮಂಡಳಿ ಮಾಜಿ ಅಧ್ಯಕ್ಷ ಮಂಜುನಾಥ ಕದಂ ಸ್ವಾಗತ 

ಧಾರವಾಡ  prajakiran.com : ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ  ಮರಾಠ ವಿದ್ಯಾ ಪ್ರಸಾರಕ ಮಂಡಳಿ ಮಾಜಿ ಅಧ್ಯಕ್ಷ ಮಂಜುನಾಥ ಕದಂ ಸ್ವಾಗತಿಸಿದ್ದಾರೆ.

ಮರಾಠ ಸಮಾಜಕ್ಕೆ 2 ಎ  ಮೀಸಲಾತಿ ನೀಡುವಂತೆ ಆಗ್ರಹಿಸಿ ಈ ಹಿಂದೆ ರಾಜ್ಯಾದ್ಯಂತ ಎಕ್ ಮರಾಠ ಲಾಕ್ ಮರಾಠ ಹೋರಾಟ ನಡೆಸಲಾಗಿತ್ತು.

ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳಿ ನನ್ನ ಅಧ್ಯಕ್ಷತೆಯಲ್ಲಿ ಐತಿಹಾಸಿಕ ಹೋರಾಟದ ಮೂಲಕ ರಾಜ್ಯದ ಗಮನ ಸೆಳೆದಿತ್ತು.

ಆಗ ಮರಾಠ ಸಮಾಜದ ಬಾಂಧವರು ಪಕ್ಷ ಭೇಧ ಮರೆತು ಹೋರಾಟ ನಡೆಸಿ ಮೀಸಲಾತಿಗೆ ಆಗ್ರಹಿಸಿ ಲಕ್ಷಾಂತರ ಜನ ಬೀದಿಗಿಳಿದಿದ್ದರು.

ರಾಜ್ಯದಲ್ಲಿ ಕಳೆದ ಹಲವು ದಶಕಗಳಿಂದ ಮರಾಠ ಸಮಾಜ ಬಾಂಧವರು ಮೀಸಲಾತಿ ವಂಚಿತರಾಗಿದ್ದರು.ಅದಕ್ಕಾಗಿ ಸಾಕಷ್ಟು ಹೋರಾಟ ನಡೆಸಲಾಗಿದ್ದು,

ಧಾರವಾಡದ ಮರಾಠ ವಿದ್ಯಾ ಪ್ರಸಾರಕ ಮಂಡಳಿ ಶತಮಾನಗಳಿಂದ ಧಾರವಾಡದಲ್ಲಿ ಲಕ್ಷಾಂತರ ಬಡ ಮಕ್ಕಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಾ ಬಂದಿದೆ.

ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿಯೇ  ಶಿಕ್ಷಣ ನೀಡುತ್ತಿದ್ದು,ಅದನ್ನು  ಸೇವೆ ಯಾಗಿ ಸ್ವೀಕರಿಸಿ, ಸಾವಿರಾರು ಮಕ್ಕಳಿಗೆ ಪ್ರವೇಶಶುಲ್ಕವಿಲ್ಲದೆ ವಿದ್ಯೆ ದಾನ ಮಾಡಿದೆ.

ಅದರಿಂದಾಗಿಯೇ ಪ್ರತಿವರ್ಷ ಅಂದಾಜು 2300ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸುತ್ತಿದ್ದಾರೆ ಎಂದು ಮರಾಠ ವಿದ್ಯಾಪ್ರಸಾರಕ ಮಂಡಳಿ ಮಾಜಿಅಧ್ಯಕ್ಷ ಮಂಜುನಾಥ ಕದಂ ತಿಳಿಸಿದ್ದಾರೆ.

ಸಿಎಮ್ ಬಿಎಸ್‌ವೈ ಅವರು ರಾಜ್ಯದ ಮರಾಠ ಸಮಾಜದ ಬಾಂಧವರ ಒತ್ತಾಸೆಗೆ ಮಣಿದು ಇಂತಹ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುವ ಮೂಲಕ ಜನಾನುರಾಗಿಯಾಗಿದ್ದಾರೆ.

ಅವರಿಗೆ ಸಮಾಜದ ಪರವಾಗಿ ತುಂಬು ಹೃದಯದಿಂದ ಅಭಿನಂದಿಸುತ್ತೇವೆ. ಅಲ್ಲದೆ, ನಾವು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದು ಕನ್ನಡ ನಾಡಿನವರೇ ಇದ್ದೇವೆ.

ನಾಡು ನುಡಿಯ ವಿಷಯ ಬಂದಾಗ ರಾಜ್ಯವನ್ನು,ಕನ್ನಡತನವನ್ನು ಬಿಟ್ಟುಕೊಡುವ ಕೆಲಸ ಮಾಡಿಲ್ಲ. ಆ ಪ್ರಶ್ನೆಯೇ ಇಲ್ಲ.

ಅಂತಹದರಲ್ಲಿ ಕರವೇ ವಿರೋಧಿಸಿರುವುದು ನೋವಿನ ಸಂಗತಿ. ಈ ಹಿಂದೆ ಮುಂಬೈ ಕರ್ನಾಟಕದ ಕಾಲದಲ್ಲಿಯೂ ಈಗಿನ ಕಿತ್ತೂರು ಕರ್ನಾಟಕದಲ್ಲೂ ಮರಾಠ ಸಮುದಾಯ ಸಾಕಷ್ಟು ಪ್ರಾಬಲ್ಯವನ್ನು ಹೊಂದಿದೆ.

ಬೆಳಗಾವಿಯಿಂದ ಬೀದರವರೆಗೆ, ಚಾಮರಾಜನಗರದಿಂದ ಕೋಲಾರದವರೆಗೆ ನಾಡಿನ ಉದ್ದಗಲಕ್ಕೂ ಮರಾಠ ಸಮಾಜ ಬಾಂಧವರಿದ್ದಾರೆ.

ಮೈಸೂರಿನಿಂದ ದಾವಣಗೆರೆವರೆಗೆ ನಾಡಿನ ಮೂಲೆ ಮೂಲೆಗಳಲ್ಲಿ ಸಮಾಜದ ಬಂಧುಗಳಿದ್ದಾರೆ.

ಅವರ ನೋವಿಗೆ ಯಡಿಯೂರಪ್ಪ ಧ್ವನಿಯಾಗಿ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆಗೆ ಮುಂದಾಗಿರುವುದನ್ನು ಸಮಾಜ ಶ್ಲಾಘಿಸುತ್ತದೆ ಎಂದು ಎಂದು ಮರಾಠ ವಿದ್ಯಾಪ್ರಸಾರಕ ಮಂಡಳಿ ಮಾಜಿಅಧ್ಯಕ್ಷ ಮಂಜುನಾಥ ಕದಂ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *