ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೋನಾ ಎರಡನೇ ತಗ್ಗಿಸಲು ಮೇ 24ರ ವರೆಗೆ ಲಾಕ್ಡೌನ್ ಜಾರಿಮಾಡಲಾಗಿತ್ತು. ಅದರಂತೆ ಹೊಸ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ.
ಈ ಹಿನ್ನೆಲೆ ಈಗ ಜಾರಿಗೊಳಿಸಿದ ಲಾಕ್ಡೌನ್ ಮೇ.24ಕ್ಕೆ ಮುಕ್ತಾಯವಾಗಲಿದೆ. ಕೊರೋನಾ ಸೋಂಕು ಹರಡುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಮೇ.24 ರಿಂದ ಜೂನ್. 7ರ ವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿ ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಇನ್ನೂ ಲಾಕ್ಡೌನ್ ನಿರ್ಭಂದನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಿನ ನಿಯಮಗಲೇ ಇನ್ನೂ ಕಠಿಣವಾಗಲಿದ್ದು, ಅನಗತ್ಯವಾಗಿ ಯಾರು ಓಡಾಟ ನಡೆಸಕೂಡದು ಎಂದು ಹೇಳಿದ್ದಾರೆ.