ರಾಜ್ಯ

ಧಾರವಾಡದ ಮಾಳಾಪುರದಲ್ಲಿ ನಿವೇಶನ ತೆರವು ವೇಳೆ ಹುಡಾ ಅಧ್ಯಕ್ಷರ ಜೊತೆಗೆ ತೀವ್ರ ವಾಗ್ವಾದ …..!

ಧಾರವಾಡ prajakiran.com : ನಗರದ ಹೊರವಲಯದಲ್ಲಿನ ಮಾಳಾಪೂರ ಮತ್ತು ಗುಲಗಂಜಿಕೊಪ್ಪ ಗ್ರಾಮಗಳ ಹದ್ದಿನಲ್ಲಿನ ಅಕ್ರಮ ಬಡಾವಣೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರವತಿಯಿಂದ ಇಂದು ಬೆಳಗ್ಗೆ ಕೈಕೊಳ್ಳಲಾಯಿತು.

ಮಾಳಾಪೂರ ಮತ್ತು ಗುಲಗಂಜಿಕೊಪ್ಪ ಹದ್ದಿನಲ್ಲಿನ ರಿ.ಸ.ನಂ. ೧೧೮ ರಲ್ಲಿನ ಸೈಯ್ಯದ ಇಸ್ಮಾಯಿಲ್ ಶೇತಸನದಿ ಎಂಬುವರ ೪ ಎಕರೆ ೨೯ ಗುಂಟೆ, ರಿ.ಸ.ನಂ. ೪೩/೧ ರಲ್ಲಿನ ನಾಗಪ್ಪ ಬಸಪ್ಪ ಸವದತ್ತಿಯವರ ೩೯ ಗುಂಟೆ ೧೫ ಆಣೆ, ರಿ.ಸ.ನಂ. ೪೩/೨ ರಲ್ಲಿನ ನೀಲವ್ವ ಬಸಪ್ಪ ಸವದತ್ತಿಯವರ ೩೯ ಗುಂಟೆ ೧೫ ಆಣೆ, ರಿ.ಸ.ನಂ. ೪೩/೩ ರಲ್ಲಿನ ಬಸಪ್ಪ ನಾಗಪ್ಪ ಸವದತ್ತಿಯವರ ೧ ಎಕರೆ ೩೫ ಗುಂಟೆ, ರಿ.ಸ.ನಂ. ೩೪/೧ ರಲ್ಲಿನ ದಾದಾಕಲಂದರ ಮೌಲಾಸಾಬ ಹಂಚಿನಮನಿಯವರ ೩೧ ಗುಂಟೆ ೯.೫ ಆಣೆ ಮತ್ತು ರಿ.ಸ.ನಂ. ೩೭/೧ ರಲ್ಲಿನ ಅನ್ವರಸಾಬ ಮಲ್ಲೂರಿಯವರ ೧ ಎಕರೆ ೩೮ ಗುಂಟೆ ಜಮೀನನಲ್ಲಿನ ಅಕ್ರಮ ನಿವೇಶನಗಳನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು.

ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ನೊಂದಿಗೆ ತೆರವುಗೊಳಿಸಿದರು.

ರಿ.ಸ.ನಂ. ೧೧೮ ರಲ್ಲಿನ ಸೈಯ್ಯದ ಇಸ್ಮಾಯಿಲ್ ಶೇತಸನದಿ ಎಂಬುವರ ೪ ಎಕರೆ ೨೯ ಗುಂಟೆ ಜಮೀನಿನಲ್ಲಿ ರಚಿಸಿದ್ದ ಅಕ್ರಮ ಸ್ವದೇಶ ಲೇಔಟ್ ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಜಮೀನು ಮಾಲಕರು ಮತ್ತು ನಿವೇಶನ ಖರೀಸಿದವರಿಂದ ತೀವೃ ವಿರೋಧ ಉಂಟಾಯಿತು.

ಒಂದು ಹಂತದಲ್ಲಿ ನಿವೇಶನಗಳಿಗೆ ಹಾಕಲಾಗಿದ್ದ ಕಲ್ಲುಗಳನ್ನು ತೆಗೆಯುತ್ತಿದ್ದ ಜೆಸಿಬಿ ಮುಂದೆ ಮೆಹಬೂಬ ಪಠಾಣ ಎಂಬುವರು ಮಲಗಿ ಆಕ್ರೋಷವ್ಯಕ್ತಪಡಿಸಿದರು.

ನಮಗೆ ಸೂಕ್ತ ಸಮಯಾವಕಾಶ ಕೊಡಿ. ಲೇಔಟ್‌ಗಳನ್ನು ಅಧಿಕೃತಗೊಳಿಸಿಕೊಳ್ಳುತ್ತೇವೆ. 

ಈ ರೀತಿ ಹೇಳದೇ ಕೇಳದೇ ತೆರವು ಮಾಡಲು ಬಂದರೆ ಹೇಗೆ? ನಾವು ಕೂಲಿ, ನಾಲಿ ಮಾಡಿ ಪ್ಲಾಟ್ ಖರೀದಿಸಿದ್ದೇವೆ ಎಂದು ಲೇಔಟ್ ಮಾಲೀಕರು ಮತ್ತು ಪ್ಲಾಟ್ ಕೊಂಡುಕೊಂಡವರು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರೊಂದಿಗೆ ತೀವ್ರ ವಾಗ್ವಾದ ಕುಡ ನಡೆಸಿದರು.

ಬಳಿಕ ಅಧ್ಯಕ್ಷ ಕಲಬುರ್ಗಿ ಮತ್ತು ಆಯುಕ್ತ ಕುಮ್ಮಣ್ಣರ ಅವರು ಸಾರ್ವಜನಿಕರನ್ನು ಸಮಾಧಾನಪಡಿಸಲು ಯತ್ನಿಸಿದರು. ಅಲ್ಲದೇ ಅಧೀಕೃತಗೊಳಿಸಲು ಅರ್ಜಿ ಸಲ್ಲಿಸಿದರೆ ಅಗತ್ಯ ಸಹಕಾರ ನೀಡುವುದಾಗಿ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು, ಅಕ್ರಮ ನಿವೇಶನಗಳನ್ನು ಪ್ರಾಧಿಕಾರದಿಂದ ಸಕ್ರಮಗೊಳಿಸಿಕೊಳ್ಳುತ್ತೇವೆ.

ಈಗ ಹಾಕಲಾಗಿರುವ ಕಲ್ಲು ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹುಡಾದಲ್ಲಿ ಅರ್ಜಿ ಹಾಕಿ ಅಧಿಕೃತವಾಗಿ ಲೇಔಟ್ ಮಾಡುತ್ತೇವೆ ಎಂದು ಲಿಖಿತ ರೂಪದಲ್ಲಿ ಕೊಟ್ಟರೆ ತೆರವು ಕಾರ್ಯಾಚರಣೆ ನಿಲ್ಲಿಸುತ್ತೇವೆ ಎಂದರು.

ಇದಕ್ಕೆ ಒಪ್ಪಿಗೆ ಸೂಚಿಸಿದ ಲೇಔಟ್ ಮಾಲೀಕರು ಆ ರೀತಿ ಲಿಖಿತ ರೂಪದಲ್ಲಿ ಭರವಸೆ ಕೊಟ್ಟಿದ್ದರಿಂದ ತೆರವು ಕಾರ್ಯಾಚರಣೆ ನಿಲ್ಲಿಸಲಾಯಿತು.

ಹುಡಾ ಸದಸ್ಯರಾದ ಸುನೀಲ ಮೋರೆ, ಮೀನಾಕ್ಷಿ ವಟಂಮುರಿ,ಆಯುಕ್ತ ನಿಂಗಪ್ಪ ಕುಮ್ಮಣ್ಣವರ, ನಗರ ಯೋಜಕ ವಿವೇಕ ಕಾರೇಕಾರ, ಮುಕುಂದ ಜೋಶಿ ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *