ಆಧ್ಯಾತ್ಮ

ಸ್ತ್ರೀಯರ ಶುಭಾಶುಭ ಲಕ್ಷಣಗಳು

  • ಕತ್ತಿನಲ್ಲಿ ರೇಖೆಯಿದ್ದು, ಕಣ್ಣುಗಳ ಕೊನೆ ಕೆಂಪಾಗಿದ್ದರೆ ಅವರು ಹೋದ ಮನೆ ಅಭಿವೃದ್ದಿಯಾಗುತ್ತದೆ.
  • ಹಣೆಯಲ್ಲಿ ತ್ರಿಶೂಲದ ಗುರುತು ಇದ್ದ ಕನ್ಯೆ ಹಲವು ಸಾವಿರ ದಾಸಿಯರಿಗೆ ಯಜಮಾನಿಯಾಗುತ್ತಾರೆ.
  • ರಾಜಹಂಸದಂತಹ ನಡಿಗೆ, ಜಿಂಕೆಯಂತಹ ಕಣ್ಣುಗಳು, ಹಲ್ಲುಗಳು ಸಮಾನ ಮತ್ತು ಬಿಳಿ ಆಗಿದ್ದರೆ ಅವರು ಉತ್ತಮ ಸ್ತ್ರೀ
  • ಕಪ್ಪೆಯಂತಹ ಹೊಟ್ಟೆಯಿದ್ದರೆ ಅವರಿಗೆ ಒಬ್ಬನೇ ಪುತ್ರನೇ. ಮತ್ತು ಅವನು ರಾಜನಾಗುತ್ತಾನೆ.
  • ಹಂಸದಂತೆ ಮೃಧುವಾದ ಮಾತು, ಜೇನಿನಂತೆ ಪಿಂಗಲವರ್ಣ ಉಳ್ಳವಳು ಧನ, ಧಾನ್ಯ ಸಂಪನ್ನಳೂ, ಎಂಟು ಮಕ್ಕಳು ಉಳ್ಳವಳು ಆಗುತ್ತಾಳೆ.
  • ಉದ್ದವಾದ ಕಿವಿ, ಸುಂದರವಾದ ಮೂಗು, ಧನಸ್ಸಿನಂತಹ ಹುಬ್ಬ ಇದ್ದರೆ ತುಂಬಾ ಸುಖಭೋಗವುಳ್ಳವಾಗುತ್ತಾಳೆ.
  • ಕೃಶಾಂಗಿ, ಶ್ಯಾಮಲ, ಕೋಮಲೆಯಾಗಿದ್ದರೆ ಮಧುರ ಭಾಷಿಣಿ, ಶಂಖದಂತಹ ಸ್ವಚ್ಛ ಹಲ್ಲುಳ್ಳವಳಿ, ನುಣುಪಾದ ಮೈ ಉಳ್ಳವಳು ತುಂಬಾ ಐಶ್ವರ್ಯವಂತಳಾಗುತ್ತಾಳೆ.
  • ವೀಸ್ತ್ರೀಣವಾದ ಮಧ್ಯಭಾಗ ಉಳ್ಳವಳು ವಿಶಾಲವಾದ ಕಣ್ಣುಳ್ಳವಳು ರಾಣಿಯಾಗುತ್ತಾಳೆ.
  • ಸ್ತ್ರೀ ಎಡಸ್ತನದಲ್ಲಿ, ಕೈ ಯಲ್ಲಿ, ಕಿವಿಯ ಮೇಲೆ ಕತ್ತಿನಲ್ಲಿ ಎ‍ಳ್ಳಿನ ಗುರುತು (ಮಚ್ಚೆ) ಇರುತ್ತದೆಯೋ ಅವಳಿಗೆ ಮೊದಲು ಗಂಡು ಶಿಶು ಹುಟ್ಟುತ್ತದೆ.
  • ಕಾಲು, ಕೆಂಪು ಚಿಕ್ಕದಾದ ಕಾಲುಗಂಟು ಹತ್ತಿರ ಹತ್ತಿರವಾದ ಬೆರಳುಗಳು ಕೆಂಪಾದ ಅಂಚಿನ ಕಣ್ಣು ಇದ್ದರೆ ಅವಳು ಸುಖವಂತಳಾಗುತ್ತಾಳೆ.
  • ಎಲ್ಲ ಅಂಗಗಳೂ ದೊಡ್ಡದಾಗಿದ್ದು, ಮೈ ಯೆಲ್ಲಾ ರೋಮವಿದ್ದರೆ ಚಿಕ್ಕ ಕೈ ಗಳಿದ್ದರೆ ಅವಳು ದಾಸಿಯಾಗುತ್ತಾಳೆ.
  • ಕಾಲುಗಳು ದೊಡ್ಡದಾಗಿದ್ದು, ಮುಖ ವಿಕಾರವಾಗಿದ್ದು, ಮೇಲಿನ ತುಟಿಯಲ್ಲಿ ರೋಮವಿದ್ದರೆ ಅವಳು ತನ್ನ ಗಂಡನನ್ನು ಸಾಯಿಸುತ್ತಾಳೆ.
  • ಪವಿತ್ರಳಾಗಿದ್ದು, ದೇವಾತ ಗುರು ಬ್ರಾಹ್ಮಣರಲ್ಲಿ ಭಕ್ತಿ ಉಳ್ಳವರಾಗಿದ್ದರೆ ಅವಳು ಮಾನುಷ ಸ್ತ್ರೀ ಸ್ನಾನ ಮಾಡಿ ಸುಗಂಧ ದ್ರವ್ಯವನ್ನು ಲೇಪಿಸಿ ಮಧುರ ಸಂಭಾಷಣೆಯಾಗಿದ್ದು, ಸ್ವಲ್ಪವೇ ಆಹಾರ, ಅಲ್ಪ ನಿದ್ರೆ ಯಾವಾಗಲೂ ಶುದ್ದವಾಗಿರುವ ಸ್ತ್ರೀ ಮಾರ್ಚಾರೀ (ಬೆಕ್ಕು) ಸ್ತ್ರೀ ಎನ್ನಿಸಿಕೊಳ್ಳುತ್ತಾಳೆ.
  • ಕೆಲವು ಸಲ ನಗುವುದು, ಆಗಾಗ ಆಟವಾಡುವುದು, ಪ್ರಸನ್ನತೆ ಮತ್ತು ಸಿಟ್ಟು ಮಾಡುವುದು, ಗಂಡಸರ ಮಧ್ಯದಲ್ಲಿಯೇ ಓಡಾಡುವ ಸ್ತ್ರೀಯೂ ಗರ್ದಭೂ (ಕತ್ತೆ) ಎಂದು ಹೇಳಿಸಿಕೊಳ್ಳುತ್ತಾಳೆ.
  • ಗಂಡ ಮತ್ತು ಬಂಧುಗಳು ಹೇಳಿದ ಹಿತವಚನವನ್ನು ಪಾಲಿಸದೆ ಇರುವ ಸ್ತ್ರೀಯು ಅಸುರೀ. ಅತಿಯಾದ ಊಟ, ಬಹಳವಾದ ಮಾತು ಪೊಳ‍್ಳಾದ ಮಾತುಗಳು ಗಂಡನನ್ನು ಕೊಲ್ಲಲು ಹವಣಿಸುವಳು.
  • ಪಿಶಾಚಿ ತುಂಬಾ ಚಂಚಲ ಸ್ವಭಾವ ಚಂಚಲ ಕಣ್ಣು ಅತ್ತ ನೋಡುತ್ತಿರುವುದು. ಲೋಭ ಸ್ವಭಾವದ ಹೆಂಗಸು ವಾನರಿ ಎನಿಸುತ್ತಾಳೆ.
  • ಚಂದ್ರಮುಖಿ ಮಧು ಗಜಗಮನೆ, ಕೆಂಪಾದ ಉಗುರುಗಳು, ಕೈ, ಕಾಲುಗಳಲ್ಲಿ ಶುಭ ಲಕ್ಷ್ಮಣವಿದ್ದರೆ ಅವಳು ವಿದ್ಯಾಧರಿ, ವೀಣೆ ಮೃಧುಂಗ, ಕೊಳಲು ಮುಂತಾದವುಗಳ ಧ್ವನಿಯನ್ನು ಕೇಳುತ್ತಾ ಹೂವು ಸುಗಂಧ ದ್ರವ್ಯಗಳನ್ನು ಅಭಿರುಚಿಯುಳ್ಳ ಸ್ತ್ರೀಯೂ ಗಾಂಧರ್ವೀ ಎಂದು ಹೇಳಲ್ಪಡುತ್ತಾಳೆ.
  • ಸುವಂತು ಮುನಿಯು ಶಾತನೀಕ ರಾಜನಿಗೆ ಈ ರೀತಿ ಸ್ತ್ರೀ ಪುರುಷ ಲಕ್ಷಣಗಳನ್ನು ಹೇಳಿದ್ದಾರೆ. ಇದನ್ನೆಲ್ಲಾ ಮೂಲತಃ ಬ್ರಹ್ಮದೇವರು ಹೇಳಿದ್ದಾರೆ.

ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *