ರಾಜ್ಯ

ನಿವೇಶನದ ಹೆಸರಿನಲ್ಲಿ ನೂರಾರು ಜನರಿಗೆ ವಂಚನೆ ದೂರು : ಜಮೀನು ಭೂ ವ್ಯಾಜ್ಯ ಪರಿಗಣಿಸಲು ಒತ್ತಾಯ

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬಸವರಾಜ ಕೊರವರ ನೇತೃತ್ವದಲ್ಲಿ ಪ್ರತಿಭಟನೆ

ಧಾರವಾಡ prajakiran.com : ಇಲ್ಲಿಯ ಮುರುಘಾ ಮಠ ಬಳಿ ನೂರೈವತ್ತಕ್ಕೂ ಹೆಚ್ಚು ಜನರಿಗೆ ನಿವೇಶನ ನೀಡುವುದಾಗಿ ಕೋಟ್ಯಾಂತರ ರೂಪಾಯಿ ಪಡೆದು ನಿವೇಶನವೂ ನೀಡದೆ, ಹಣವೂ ಹಿಂತಿರುಗಿಸದೆ ವಂಚಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡ ನಗರದ ಕೆ.ಬಿ.ಎನ್. ಬಡಾವಣೆಯಲ್ಲಿ ಬಡ ಜನರು, ಖಾಸಗಿ ಉದ್ಯೋಗ ಮಾಡುವ ಹಲವರು ಕಡಿಮೆ ಬೆಲೆಗೆ ಕೃಷಿಯೇತರ ನಿವೇಶನಗಳನ್ನು ಬಾಬಾಜಾನ್ ಅತ್ತಾರ ಬಳಿ ಖರೀದಿಸಿದ್ದರು.

ಆದರೆ ಇವರ ಬಳಿ ಹಣ ಪಡೆದ ಡೆವಲಪರ್ ಬಾಬಾ ಜಾನ್ ಅತ್ತಾರ್ ಭೂ ಮಾಲೀಕರ ಬಳಿ ಜಿಪಿಎ ಬರೆಸಿಕೊಂಡ ದಾದಾಪೀರ ತಂದೆ ಮೊಹ್ಮದ್ ಹುಸೇನ ಮಲ್ಲೂರು, ಫೈರೋಜ ಖಾನ್ ತಂದೆ ರೋಜಖಾನ್ ಪಠಾಣ, ಅಬ್ದುಲ್ ರಹೀಮ್ ತಂದೆ ನಿಸಾರ್ ಅಹ್ಮದ್ ಮುನಸಿ ಅವರಿಗೆ ಹಣ ತಲುಪಿಸಿದ್ದಾರೆ.

ಇವರು ಭೂ ಮಾಲೀಕರಾದ ಇಮಾಮಸಾಬ ತಂದೆ ಗೌಸ ಶೇತ ಸನದಿ, ಸೈಯದ್ ಇಸ್ಮಾಯಿಲ್ ತಂದೆ ಶೇತ ಸನದಿ ಹಾಗೂ ಇತರರಿಗೆ ಹಣ ಕೊಡದೆ ಕೈ ಎತ್ತಿದ್ದಾರೆ ಎಂದು ದೂರಲಾಗಿದೆ. ಹೀಗಾಗಿ ಜಮೀನು ಮಾಲೀಕ ಅದರಲ್ಲಿ ಬಿತ್ತನೆ ಮಾಡಿದ್ದಾರೆ.

ಈಗ ಬಡಜನತೆ ನಿವೇಶನದ ಹಣವೂ ಇಲ್ಲ. ನಿವೇಶನ ವೂ ಇಲ್ಲ ಎಂಬAತಾಗಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ್ ಕೊರವರ ಮೊರೆ ಹೋಗಿದ್ದರು.

ಅವರು ಬುಧವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಹಣ ಕಳೆದುಕೊಂಡು ಕಂಗಲಾದ ನೂರಾರು ಜನರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ, ಈ ಜಮೀನು ಭೂ ವ್ಯಾಜ್ಯ
ಎಂದು ಪರಿಗಣಿಸಲು ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.

ಪ್ರಕರಣದ ವಿವರ : ಧಾರವಾಡದ ಮುರುಘಾ ಮಠದ ಬಳಿಯ ೪ ಎಕರೆ ೨೯ ಗುಂಟೆ ಕೃಷಿ ಭೂಮಿಯ ಮಾಲಿಕರಾಗಿದ್ದ ಇಮಾಮಸಾಬ್ ಶೇತ ಸನದಿ, ಸೈಯದ್ ಇಸ್ಮಾಯಿಲ್ ಶೇತ ಸನದಿ ಸೇರಿದಂತೆ ಹಲವರು ಇಲ್ಲಿ ಕೆಲ ವರ್ಷಗಳ ಹಿಂದೆ ಲೇಔಟ್ ನಿರ್ಮಾಣ ಮಾಡಿದ್ದಾರೆ.

ಅವರು ಡೆವಲಪರ್ ಬಾಬಾ ಜಾನ್ ಅತ್ತಾರ್ ಅನ್ನೋರಿಗೆ ಈ ನಿವೇಶನಗಳನ್ನು ಮಾರಾಟ ಮಾಡಲು ಜನರಲ್ ಪಾವರ್ ಆಫ್ ಅಟಾರ್ನಿ ನೀಡಿದ್ದಾರೆ. ಇವರು ತಮ್ಮ ಬಳಿ ಬಂದವರಿಗೆ ಈ ನಿವೇಶನಗಳನ್ನು ಮಾರಾಟ ಮಾಡಿ, ಸುಮಾರು ೧೫೦ ಜನರ ಬಳಿ ಲಕ್ಷಾಂತರ ರೂಪಾಯಿ ಪಡೆದು ಜಿಪಿಎ ಬರೆದುಕೊಟ್ಟ ವರಿಗೆ ಕೊಟ್ಟಿದ್ದಾರೆ.

ಕೆಲವರು ಮಾಸಿಕ ಕಂತುಗಳ ರೂಪದಲ್ಲಿ ಲಕ್ಷಾಂತರ ರೂಪಾಯಿ ನೀಡಿದ್ಧಾರೆ. ಆದರೆ ಭೂ ಮಾಲೀಕರು ತಮಗೆ ಹಣವೇ ಬಂದಿಲ್ಲ ಅಂತಾ ನಿವೇಶನಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು, ಕೃಷಿ ಆರಂಭಿಸಿದ್ದಾರೆ.

ಇದರಿಂದ ಆತಂಕಗೊAಡ ನಿವೇಶನ ಖರೀದಿ ಮಾಡಿದ ಜನರು ಬಸವರಾಜ ಕೊರವರ ನೇತೃತ್ವದಲ್ಲಿ
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಪಿಎ ಬರೆದುಕೊಟ್ಟ ಹಾಗೂ ಭೂ ಮಾಲೀಕರ ಹಾಗೂ ಜಿಪಿಎ ಬರೆಸಿಕೊಂಡವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಬರುವ ದಿನಗಳಲ್ಲಿ ನಿವೇಶನ ನೀಡದಿದ್ದರೆ, ಬೆಳೆ ಕಟಾವು ನಂತರ ಹಣ ಕೊಟ್ಟವರೊಂದಿಗೆ ನಿವೇಶನ ಕಬ್ಜಾ ಪಡೆಯುವುದಾಗಿ ಜನಜಾಗೃಗತಿ ಸಂಘದಅಧ್ಯಕ್ಷ ಬಸವರಾಜ ಕೊರವರ ಎಚ್ಚರಿಕೆ ನೀಡಿದರು. ನಿವೇಶನಗಳಲ್ಲಿ ಈ ಹಿಂದೆ ಕೆಲವರು ಶೆಡ್ ಗಳನ್ನು ನಿರ್ಮಾಣ ಮಾಡಿಕೊಂಡಿದ್ದ ಹಾಗೆ ಮತ್ತೆ ಮರು ನಿರ್ಮಾಣ ಮಾಡಲಾಗುವುದು ಎಂದು ಗಡುವು ನೀಡಿದರು.

ಈ ಲೇಔಟ್ ನಲ್ಲಿ ಅದಾಗಲೇ ಚರಂಡಿ, ಪೈಪ್ ಲೈನ್ ಕೂಡ ಅಳವಡಿಸಲಾಗಿದೆ. ಇನ್ನೇನು ಇಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಜನರು ಸಿದ್ಧರಾಗಿದ್ದಾಗ ಭೂ ಮಾಲೀಕರು ಇಲ್ಲಿ ಯಾರಿಗೂ ಅವಕಾಶವೇ ಇಲ್ಲ ಅಂತಾ ಹೇಳುತ್ತಿರುವುದು ಸರಿಯಲ್ಲ ಎಂದು ದೂರಿದರು.

ಇವರನ್ನ ನಂಬಿ ಲಕ್ಷಾಂತರ ರೂಪಾಯಿ ಹಣ ನೀಡಿದ ಜನರು ಬೀದಿಗೆ ಬಿದ್ದಿದ್ದಾರೆ. ಎಷ್ಟೋ ಜನರು ಖಾಸಗಿ ಬ್ಯಾಂಕುಗಳಲ್ಲಿ ಹಾಗೂ ಬೇರೆ ಬೇರೆ ಕಡೆಗಳಲ್ಲಿ ಸಾಲ ಪಡೆದುಕೊಂಡಿದ್ಧಾರೆ. ಇದೀಗ ಅತ್ತ ಸಾಲದ ಬಡ್ಡಿ ಬೆಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಜನರಿಗೆ ಪಾವರ್ ಆಫ್ ಅಟಾರ್ನಿ ಮೂಲಕ ಈ ನಿವೇಶನ ಮಾರಾಟ ಮಾಡಿದ ಬಾಬಾ ಜಾನ್ ಅತ್ತಾರ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಮಾಲಿಕರಿಗೆ ಕೋಟ್ಯಾಂತರ ರೂಪಾಯಿ ಹಣ ನೀಡಿರೋದಾಗಿ ಇವರು ಹೇಳುತ್ತಿದ್ದಾರೆ. ಆದರೆ ಅದನ್ನು ಭೂ ಮಾಲೀಕರು ಒಪ್ಪಿಕೊಳ್ಳುತ್ತಿಲ್ಲ ಎಂದು ಜನರಿಗೆ ಮನವರಿಕೆ ಮಾಡಿದರು.

ಪ್ರತಿಭಟನೆಯಲ್ಲಿ ವೆಂಕಟೇಶ್ ಲಾಳಗೆ, ರಾಜು ನವಲಗುಂದ, ಸರೋಜಾ ದೇಸಾಯಿ, ಸಾವಿತ್ರಿ ಅಮಲಾಪುರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *