ರಾಜ್ಯ

ಧಾರವಾಡ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಟಿಕೇಟ್ ರೇಸ್ ನಲ್ಲಿ ಹಾಲಿ ಶಾಸಕರನ್ನು ಹಿಂದಿಕ್ಕಿದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ

ಸತತ ಎರಡನೇ ಬಾರಿಗೆ ನಂಬರ್ ಒನ್ ಸ್ಥಾನ ನೀಡಿದ ಮತದಾರ ಪ್ರಭುಗಳು

ಧಾರವಾಡ prajakiran. com : ಧಾರವಾಡ ಗ್ರಾಮೀಣ ವಿಧಾನ ಸಭಾ ಮತಕ್ಷೇತ್ರ 71ರ ಮುಂದಿನ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.

ಬಿಜೆಪಿ ಟಿಕೇಟ್ ಆಕಾಂಕ್ಷಿ ರೇಸ್ ನಲ್ಲಿ ಹಾಲಿ ಶಾಸಕರನ್ನ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೆ ಬಂದು ನಿಂತಿದ್ದಾರೆ.

ಈ ಹಿಂದೆ ದಿಗ್ವಿಜಯ ಟಿವಿ ನಡೆಸಿದ್ದ ಸಮೀಕ್ಷೆಯಲ್ಲಿ ಕೂಡ ಹೆಸರು ಮುಂಚೂಣಿಗೆ ಬಂದಿತ್ತು.

ಇದೀಗ ಅಂತರ್ ರಾಷ್ಟ್ರೀಯ ಸಮೀಕ್ಷೆ ನಡೆಸುವ ಹಾಗೂ ಜನಾಭಿಪ್ರಾಯ ಸಂಗ್ರಹಿಸುವ ಸಂಸ್ಥೆಯಾಗಿರುವ ಸ್ಟ್ರಾ ಪೋಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಆಗಿರುವ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಅವರಿಗೆ ಮತ್ತೋಮ್ಮೆ ಅಗ್ರಸ್ಥಾನ ನೀಡಲಾಗಿದೆ.

ಧಾರವಾಡ ಗ್ರಾಮೀಣ ಕ್ಷೇತ್ರ 71 ರ ಮುಂದಿನ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಕೇಳಲಾಗಿದೆ‌.
ಈ ಪ್ರಶ್ನೆಗೆ ಸಾವಿರಾರು ಜನ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಅದರಲ್ಲಿ ನಂಬರ್ ಒನ್ ಸ್ಥಾನವನ್ನು ಬಸವರಾಜ ಕೊರವರ ಅವರಿಗೆ ನೀಡಿದ್ದಾರೆ.
ಎರಡನೇ ಸ್ಥಾನವನ್ನು ಸವಿತಾ ಅಮರಶೆಟ್ಟಿ ಅವರಿಗೆ ನೀಡಲಾಗಿದೆ.

ಹಾಲಿ ಶಾಸಕರು ಇದರಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಲ್ಲದೆ, ಬಯಲು ಸೀಮೆ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ತವನಪ್ಪ ಅಷ್ಟಗಿ ಅವರಿಗೆ ನಾಲ್ಕನೇ ಮತ ನೀಡಿದ್ದಾರೆ.

ಪ್ರಜಾಕಿರಣ.ಕಾಮ್ ಕೂಡ ಕಳೆದ ಕೆಲ ವರ್ಷಗಳಿಂದ ಬಸವರಾಜ ಕೊರವರ ಅವರ ಸಾಮಾಜಿಕ ಬದ್ದತೆ, ಹೋರಾಟದ ದಾರಿ, ನೂರಾರು ಸರಕಾರಿ ಶಾಲೆಯ ಸಾವಿರಾರು ಮಕ್ಕಳಿಗೆ ನೋಟ್ ಬುಕ್ ವಿತರಣೆ ಮೂಲಕ
ಶೈಕ್ಷಣಿಕ ಕ್ರಾಂತಿ ಹಾಗೂ ಸಾವಿರಾರು ಸಸಿಗಳ ಪಾಲನೆ ಪೋಷಣೆ ಜೊತೆಗೆ
ಬಿದ್ದಲ್ಲೆ ಬೆಳೆಯಬೇಕು ಎಂಬುದಕ್ಕೆ ಇವರು ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು.

ನಿಮ್ಮ ಸವಾಲು ಸ್ವೀಕರಿಸುವ ಮನೋಭಾವನೆ, ಚಿಂತನೆ, ಪ್ರತಿಯೊಂದು ಸಮಸ್ಯೆಯೂ ತನ್ನದೆ ಎನ್ನುವಂತೆ ಪರಾಮರ್ಶಿಸಿ ನಾಯಕತ್ವ ವಹಿಸಿಕೊಳ್ಳುವ ಪರಿ, ಅಧ್ಯಯನಶೀಲತೆ ಹೀಗೆಯೇ ಮುಂದುವರೆಯಲಿ ಎಂಬುದು ನಮ್ಮ ಸದಾಶಯ ಕೂಡ‌.

ಇಂದಿನ ದಿನಮಾನದಲ್ಲಿ ತಳಸಮುದಾಯಗಳ ರಾಜಕೀಯ ಪ್ರಾತಿನಿಧ್ಯ ಅತ್ಯಂತ ಅವಶ್ಯಕ.
ಈ ನಿಟ್ಟಿನಲ್ಲಿ ನಿಮ್ಮ ಕಾಳಜಿ, ಪರಿಶ್ರಮ ವ್ಯರ್ಥವಾಗಬಾರದು ಅಂದ್ರೆ ರಾಜಕೀಯ ಪ್ರಾತಿನಿಧ್ಯವೇ ಅಂತಿಮ ಗೆಲುವು ಆಗಬೇಕು ಅಂದ್ರೆ ಅದಕ್ಕೆ ಕ್ಷೇತ್ರದ ಜನತೆ ಪ್ರೀತಿ, ವಿಶ್ವಾಸ ಹಾಗೂ ಪ್ರಮುಖವಾಗಿ ಆರ್ಶೀವದಿಸಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *