ರಾಜ್ಯ

ಫ್ರೂಟ್ ಇರ್ಪಾನ್ ಗ್ಯಾಂಗ್ ನಿಂದ ಹಣ ಕಳೆದುಕೊಂಡ 82 ಜನರಿಗೆ ಹಕ್ಕು ಪತ್ರ ಕೊಡಿಸಿದ ಬಸವರಾಜ ಕೊರವರ

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೋರಾಟಕ್ಕೆ ಸಂದ ಮತ್ತೊಂದು ಜಯ

ನೆಮ್ಮದಿಯ ನಿಟ್ಟುಸಿರು ಬಿಟ್ಟ ಬಡ ಕುಟುಂಬಗಳು

ಧಾರವಾಡ prajakiran. com : ಧಾರವಾಡದ ಮುರಘಾಮಠ ಬಳಿಯ ಕೆಬಿ ಎನ್ ಬಡಾವಣೆಯಲ್ಲಿ
ನಿವೇಶನ ನೀಡುವುದಾಗಿ ಬಡವರ ಬಳಿ ಲಕ್ಷಾಂತರ ರೂಪಾಯಿ ಪಡೆದು ನಿವೇಶನವು ನೀಡದೆ, ಹಣವು ಹಿಂತಿರುಗಿಸದೆ ಫ್ರೂಟ್ ಇರ್ಫಾನ್ ಗ್ಯಾಂಗ್ ನೂರಾರು ಜನರಿಗೆ ವಂಚಿಸಿತ್ತು.

ಈ ಘಟನೆ ಬೆಳಕಿಗೆ ತಂದು ಅದರ ವಿರುದ್ಧ ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೋಂದವರ ಪರ ಗಟ್ಟಿಯಾದ ಧ್ವನಿ ಮೊಳಗಿಸಿದ್ದರು‌.

ಕಳೆದ ಹಲವು ತಿಂಗಳ‌ ಕಾಲ ನಿರಂತರವಾದ ಹೋರಾಟ ನಡೆಸಿದ ಪರಿಣಾಮ ಭಾನುವಾರ 82 ಜನರಿಗೆ ನಿವೇಶನದ ಹಕ್ಕು ಪತ್ರ ವಿತರಿಸಲಾಯಿತು.

82 ಬಡ ಕುಟುಂಬಗಳಿಗೆ ನ್ಯಾಯ ಕೊಡಿಸಿದ ಹಿನ್ನೆಲೆಯಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಅವರಿಗೆ ಸ್ವದೇಶ್ ಬಡಾವಣೆ ನಿವಾಸಿಗಳು ಹೃದಯಸ್ಪರ್ಶಿ ಯಾಗಿ
ಸನ್ಮಾನ ಮಾಡಿ ಗೌರವಿಸಿದರು.

ಬಳಿಕ ಮಾತನಾಡಿದ ಬಸವರಾಜ ಕೊರವರ, ನೂರಾರು ಜನರೊಂದಿಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಎದುರು ಜನೆವರಿ 27ರಂದು ಹೋರಾಟ ನಡೆಸಿ, ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು.

ಆದರೂ ಅವರಿಗೆ ನ್ಯಾಯ ಮರಿಚಿಕೆಯಾಗಿ ಉಳಿದಿತ್ತು. ಹೀಗಾಗಿ ಕೊನೆಗೆ ಜಮೀನಿನ ಮೂಲ ಮಾಲೀಕರಾದ ಶೇಖಸನದಿ ಕುಟುಂಬದ ಹಿರಿಯರಾದ ಇಮಮಾಸಾಬ ಶೇಖಸನದಿ, ಇಸ್ಮಾಯಿಲ್ ಸಾಬ ಶೇಖಸನದಿ, ಫಕ್ರುಸಾಬ ದೊಡ್ಡಮನಿ, ಅಲ್ಲಾ ಭಕ್ಷಸಾಬ ಶೇಖಸನದಿ ಅವರ ಮನವೊಲಿಸಿದ ಪರಿಣಾಮ ಇಂದು 82 ಬಡಜನರಿಗೆ ನಿವೇಶನ ಮರಳಿ ಸಿಕ್ಕಂತಾಗಿದೆ‌ ಎಂದರು.

ಸಾವಿತ್ರಿ ದೇಸಾಯಿ, ರಾಜು ನವಲಗುಂದ, ವೆಂಕಟೇಶ ಲಾಳಗೇ, ಬಸವರಾಜ ಕೊಳ್ಳಾನಟ್ಟಿ ಜೊತೆ ಸೇರಿ ಜನಜಾಗೃತಿ ಸಂಘದಿಂದ ನಿರಂತರ ಪ್ರಯತ್ನದ ಫಲವಾಗಿ ಇಂದು ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ.

ಇದಲ್ಲದೆ, ಜಮೀನು ಮಾಲೀಕರಾದ
ಅಮಿರ ಘೋರೆ ನಾಯಕ, ಶೇಖಸನದಿ ಕುಟುಂಬಸ್ಥರಿಗೆ ಬಡವರಿಗೆ ಅವರ ಹಣಕ್ಕೆ ಮರಳಿ ನಿವೇಶನ ಕೊಡಬೇಕು ಎಂಬ ದೊಡ್ಡ ಮನಸ್ಸು ಮಾಡಿದ್ದಕ್ಕೆ ಇದು ಸಾಧ್ಯವಾಗಿದೆ.

ಹೀಗಾಗಿ ಎಲ್ಲಾ ಬಡಕುಟುಂಬದ ಸದಸ್ಯರ ಪರವಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು. 

ಇನ್ನು ನಾಲ್ಕು ಐದು ಜನ ನಿವೇಶನ ವಂಚಿತರು ಈಗ ಬಂದಿದ್ದು, ಅವರಿಗೊ ನಿವೇಶನ ನೀಡುವಂತೆ ಜಮಿನ ಮಾಲೀಕರನ್ನು ವೇದಿಕೆಯಲ್ಲಿಯೇ ವಿನಂತಿಸಿದರು.

ಈ ಹಿಂದೆ ಇದ್ದ
ಕೆ ಬಿ ಎನ್ ಬಡಾವಣೆಯನ್ನು ಈಗ ಸ್ವದೇಶ್ ಬಡವಾಣೆಯೆಂದು ಮರುನಾಮಕರಣ ಮಾಡಿ
82 ಸಂತ್ರಸ್ತರಿಗೆ ಪ್ಲಾಟಗಳ ಹಕ್ಕುಸ್ವಾಮ್ಯ ವನ್ನು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೋರವರ ಅವರೇ ತಮ್ಮ ಅಮೃತ ಹಸ್ತದಿಂದ ವಿತರಿಸಿದ್ದು ಕಂಡು ಅನೇಕರು ಭಾವುಕರಾಗಿ ಆನಂದ ಬಾಷ್ಪ ಹರಿಸಿ ಶುಭ ಹಾರೈಸಿದರು.

ಈ ಅರ್ಥಪೂರ್ಣ ಕಾರ್ಯಕ್ರಮ
82 ಬಡ ಕುಟುಂಬದ ಸದಸ್ಯರ ಮುಖದಲ್ಲಿ ಮರಳಿ ಮಂದಹಾಸ ಅರಳುವಂತೆ ಮಾಡಿತು.

ಈಗಾಗಲೇ ಸ್ವದೇಶ್ ಬಡಾವಣೆಯ ಎನ್ ಎ ಗೆ ಅರ್ಜಿ ಸಲ್ಲಿಸಲು ಮಾಲೀಕರು ಸಜ್ಜಾಗಿರುವುದು ಸಂತಸ ತಂದಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಇದರ ಅಧ್ಯಕ್ಷತೆಯನ್ನು ಉದ್ಯಮಿ ಮೈನೋದ್ದಿನ್ ನದಾಫ್ ವಹಿಸಿದ್ದರು ‌

ಈ ಸಂದರ್ಭದಲ್ಲಿ ಜಮೀನು ಮಾಲೀಕರಾದ ಅಮೀರ್ ಘೋರೆ ನಾಯ್ಕ, ಉದ್ಯಮಿ ಗಿರೀಶ್ ಶೆಟ್ಟಿ ಹಾಗೂ ಮೂಲ ಜಮೀನು ಮಾಲೀಕರಾದ ಶೇಖಸನದಿ ಕುಟುಂಬದ ಹಿರಿಯರಾದ ಇಮಮಾಸಾಬ ಶೇಖಸನದಿ, ಇಸ್ಮಾಯಿಲ್ ಸಾಬ ಶೇಖಸನದಿ, ಫಕ್ರುಸಾಬ ದೋಡ್ಡಮನಿ, ಅಲ್ಲಿಬಕ್ಷಸಾಬ ಶೇಖಸನದಿ ಸೇರಿದಂತೆ ಅನೇಕ ಹಿರಿಯರು ಉಪಸ್ಥಿತರಿದ್ದರು ‌.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *