ರಾಜ್ಯ

ರಾಜ್ಯದಲ್ಲಿ ಶುಕ್ರವಾರ ಸೋಂಕಿಗೆ ಬರೋಬ್ಬರಿ 101 ಸಾವು, 6670 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಶುಕ್ರವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ101 ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 6670 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1,64, 924 ಕ್ಕೆ ಏರಿಕೆಯಾಗಿದೆ.

 ಇಂದು ರಾಜ್ಯದಲ್ಲಿ 3951 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  84232 ಜನ ಗುಣಮುಖರಾಗಿದ್ದು,  77686 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 678 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ  ಶುಕ್ರವಾರವೂ 101 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 2998 ಕ್ಕೆ ಏರಿಕೆಯಾದಂತಾಗಿದೆ.

ಶುಕ್ರವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.

ಬೆಂಗಳೂರಿನಲ್ಲಿ 2147 ಬರೋಬ್ಬರಿ ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.

ಇನ್ನೂಳಿದಂತೆ  ಬಳ್ಳಾರಿ 684, ಬೆಳಗಾವಿ 390, ಕಲಬುರಗಿ 271, ಧಾರವಾಡ 266, ಉಡುಪಿ 246, ಮೈಸೂರು 242, ಕೊಪ್ಪಳ 173, ರಾಯಚೂರು 171, ದಕ್ಷಿಣ ಕನ್ನಡ 166, ಶಿವಮೊಗ್ಗ 151, ಬಾಗಲಕೋಟೆ 148, ವಿಜಯಪುರ  143, ಹಾಸನ 138, ಉತ್ತರಕನ್ನಡ 120, ಬೆಂಗಳೂರು ಗ್ರಾಮಾಂತರ 119, ದಾವಣಗೆರೆ 111, ಗದಗ 105, ಮಂಡ್ಯ 102, ರಾಮನಗರ 93, ಹಾವೇರಿ 90, ಕೋಲಾರ 88, ಬೀದರ 84, ತುಮಕೂರು 76, ಯಾದಗಿರಿ 70, ಚಿಕ್ಕಮಗಳೂರು 65, ಚಿಕ್ಕಬಳ್ಳಾಪುರ 64, ಚಾಮರಾಜನಗರ 63, ಚಿತ್ರದುರ್ಗ 57, ಕೊಡಗು 27 ಹೀಗೆ ಒಟ್ಟು 30 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಶುಕ್ರವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 22 ಜನ ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ 11, ಧಾರವಾಡ ಹಾಗೂ ದಾವಣಗೆರೆ ತಲಾ 8, ಉಡುಪಿ 6, ಕಲಬುರಗಿ ಹಾಗೂ  ಮೈಸೂರು 15, ಧಾರವಾಡ ಹಾಗೂ ಹಾಸನ ತಲಾ 9, ಕಲಬುರಗಿ ಹಾಗೂ ದಕ್ಷಿಣ ಕನ್ನಡ 7, ಬಳ್ಳಾರಿ ಹಾಗೂ ಉಡುಪಿ ತಲಾ 5,  ಕೊಪ್ಪಳ ಹಾಗೂ ಕೋಲಾರ ತಲಾ 3, ಚಿಕ್ಕಮಗಳೂರು, ಗದಗ, ದಾವಣಗೆರೆ, ರಾಯಚೂರು ಹಾಗೂ ಬೆಳಗಾವಿ ತಲಾ 2, ಶಿವಮೊಗ್ಗ, ಹಾವೇರಿ, ಬೀದರ, ಯಾದಗಿರಿ, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *