ರಾಜ್ಯ

ಮುಖ್ಯಮಂತ್ರಿ ಯಡಿಯೂರಪ್ಪ ಪರ ಹೊರಟ್ಟಿ ಬ್ಯಾಟಿಂಗ್

ಹುಬ್ಬಳ್ಳಿ prajakiran.com : ಇವತ್ತಿನ ಪರಿಸ್ಥಿತಿಯಲ್ಲಿ ಬಿಜೆಪಿಯವರು ಅನಿವಾರ್ಯವಾಗಿ ಜೆಡಿಎಸ್ ಜೊತೆ ಸೇರಬಹುದು. ಬಿಜೆಪಿಯಲ್ಲಿ ಕೆಲವು ಘಟನೆಗಳು ನಡೆದಿದೆ.

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರೆಯಲಿ ಅನ್ನೋರಿದ್ದಾರೆ ಎಂದು ಸಿಎಂ ಪರ ಮಾಜಿ ಸಚಿವ ಬಸವರಾಜ ಹೊರಟ್ಟಿ ಬ್ಯಾಟಿಂಗ್ ಬೀಸಿದರು.

ಮುಖ್ಯಮಂತ್ರಿ ಬದಲಾವಣೆ ಆಗಲಿ ಅಂತಾ ಕೆಲವರು ಆಗಲೇ ಲಾಬಿ ಕೂಡ ಮಾಡುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಸ್ಥಾನ ಬದಲಾವಣೆಗಾಗಿ ಬಹಳ ದೊಡ್ಡದಾದ ಲಾಬಿ ನಡೆದಿದೆ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೊಸ ಬಾಂಬ್ ಸಿಡಿಸಿದರು.

ದೊಡ್ಡ ರಾಜಕಾರಣಿಯೇ ಬಗ್ಗೆ ನನ್ನ ಎದುರಿಗೆ ಹೇಳಿದ್ದಾರೆ, ಅವರ ಹೆಸರು ನಿಮಗೆ ಹೇಳೋದಿಲ್ಲ. ಮುಂದಿನ ಮುಖ್ಯಮಂತ್ರಿ ಬೇರೆ ಆಗಬೇಕೆಂಬ ಭಾವನೆಗಳು ನಮ್ಮಲ್ಲಿ ಬಂದಿವೆ.

ಆದರೆ ಪರಿಸ್ಥಿತಿಗಳು, ರಾಜ್ಯದ ಹಿತದೃಷ್ಟಿಯಿಂದ ಆಕಸ್ಮಿಕವಾಗಿ ಮತ್ತೆ ಒಂದಾದರೂ ಆಗಬಹುದು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದು ಸರಿಯಲ್ಲ ಎಂದು ಹೇಳಿದರು.

ಯಡಿಯೂರಪ್ಪ ಇಷ್ಟೇಲ್ಲ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇನ್ಮೇಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗೋದಿಲ್ಲ, ಇದು ಅವರ ಕೊನೆಯ ಅವಧಿ.

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಬಿಜೆಪಿಯಲ್ಲಿ ಅಸಮಾಧಾನ ಇದೆ, ತೆರೆಯ ಮರೆಯಿಂದ ಎಲ್ಲವೂ ನಡೆದಿದೆ ಎಂದು ಆರೋಪಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭೇಟಿ ವಿಚಾರ ಕುರಿತು ಮಾಜಿ ಸಚಿವ ಬಸವರಾಜ ಹೊರಟ್ಟಿ

ಕುಮಾರಸ್ವಾಮಿ ಯಾವಾಗ ಯಾವಗ ಲವ್ ಮಾಡುತ್ತಾರೆ. ಯಾವಾಗ ಭೇಟಿ ಮಾಡುತ್ತಾರೆ ಗೊತ್ತಾಗುವುದಿಲ್ಲ ಎಂದು ಹೇಳಿದ್ದಾರೆ.

ನನಗನ್ನಿಸಿದ ಮಟ್ಟಿಗೆ ಶಾಸಕರ ಅನುದಾನ ವಿಚಾರಕ್ಕೆ ಭೇಟಿ ಮಾಡಿರಬಹುದು. ಅಲ್ಲದೆ. ಮುಂದಿನ ರಾಜಕೀಯ ಬದಲಾವಣೆ ಕೂಡ ಇದ್ದರೂ ಇರಬಹುದು ಎಂದು ಅಚ್ಚರಿ ಹೇಳಿಕೆ ನೀಡಿದರು.

ಇದೇ ವೇಳೆ ಜೆಡಿಎಸ್ ಶಾಸಕರು.‌ ಮಾಜಿ ಶಾಸಕರು ಕೊಲೋಂಬೋದ ಕ್ಯಾಸಿನೊಗೆ ಹೋಗಿದ್ದರ ಬಗ್ಗೆ ಯಾರು ಹೋಗಿದ್ದಾರೆ ಅವರಿಗೆ ಗೊತ್ತು. ನಾನು ಹೋಗಿಲ್ಲ.

ಹೋಗಿದ್ದು ಗೊತ್ತು. ಆದ್ರೆ ನಾನು ಹೋಗಿರಲಿಲ್ಲ. ಸಂದರ್ಭದಲ್ಲಿ ನನ್ನ ಚುನಾವಣೆ ಇತ್ತು. ಹೀಗಾಗಿ ನಾನು ಹೋಗಿರಲಿಲ್ಲ. ಈಗ ಪ್ರವಾಸದ ವಿಚಾರ ಹೊರಗೆ ಬಂದಿದೆ. ಬಹಳ ಜನರು ಹೋಗಿ ಬಂದಿದ್ದಾರೆ ಎಂದರು.

ಕುಮಾರಸ್ವಾಮಿ ತಪ್ಪು ಸರಿನೋ ನೇರವಾಗಿ ಹೇಳಿಬಿಡ್ತಾರೆ. ಅವರು ಹೇಳುವ ಧೈರ್ಯ ಮಾಡಿದ್ದಾರೆ. ಅದನ್ನ ಮೆಚ್ಚಲೇಬೇಕು ಎಂದ ಹೊರಟ್ಟಿ ಗಾಂಜಾ ಡ್ರಗ್ಸ್ ವಿಚಾರದಲ್ಲಿ ಒಮ್ಮೆ ಎಲ್ಲರ ಹೆಸರು ಬಯಲಿಗೆ ಬಂದು ಬಿಡಲಿಆಗ ಎಲ್ಲವೂ ಸರಿ ಆಗುತ್ತೆ ಎಂದರು.

ನಮ್ಮನ್ನ ಸಹ ಕ್ಯಾಸಿನೋ ಪ್ರವಾಸಕ್ಕೆ ಕರೆದಿದ್ದರು. ಆದ್ರೆ ನಾನು ಹೋಗಿರಲಿಲ್ಲ. ಹೋಗಿದ್ದು ರಾಜಕೀಯ ಚರ್ಚೆ ಮಾಡಲು.

ಕ್ಯಾಸಿನೊದಲ್ಲಿ ರಾಜಕೀಯ ಚರ್ಚೆ ಮಾಡಬಾರದು ಅಂತಾ ರೂಲ್ಸ್ ಇದೇಯ್ಯಾ. ರಾಜಕೀಯ ಉದ್ದೇಶವಾಗಿ ಹೋಗಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *