ರಾಜ್ಯ

ಹುಬ್ಬಳ್ಳಿ-ಧಾರವಾಡ ಅಕ್ರಮ ಲೇ ಔಟ್ ತೆರವು ಬದಲಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಲಿ : ಇಮ್ರಾನ್ ಕಳ್ಳಿಮನಿ





ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ 250 ಕ್ಕಿಂತಲೂ ಅಧಿಕ ಅಕ್ರಮ ಲೇಔಟ್ ಗಳಿವೆ.

ಇದಕ್ಕೆ ಹುಡಾ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಂಡು ಹಿಡಿಯಬೇಕಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಇಮ್ರಾನ್ ಕಳ್ಳಿಮನಿ ಆಗ್ರಹಿಸಿದ್ದಾರೆ.

ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಹುಡಾಕ್ಕೆ ನೂತನವಾಗಿ ಅಧ್ಯಕ್ಷರಾಗಿ ಬಂದ ತಕ್ಷಣ ತೆರವು ಕಾರ್ಯಾಚರಣೆ ನಡೆಸುವುದು ಆನಂತರ ಮತ್ತೇ ಬಿಟ್ಟು ಬಿಡುವುದು ಸಂಪ್ರದಾಯಕ್ಕೆ ಇತಿಶ್ರೀ ಹಾಡಬೇಕಿದೆ ಎಂದು ಹೇಳಿದರು.

ಕಳೆದ ಹಲವು ವರ್ಷಗಳಿಂದ ಇದು ನಡೆದುಕೊಂಡು ಬಂದಿರುವುದು ನೋವಿನಸಂಗತಿಯಾಗಿದೆ. ಕೋವಿಡ್ 19 ಸಂದರ್ಭದಲ್ಲಿ ಬಡ ಜನರಅನುಕೂಲಕ್ಕಾಗಿ ಜಮೀನು ಮಾಲೀಕರು ಕಡಿಮೆ ದರದಲ್ಲಿ ನಿವೇಶನ ನೀಡಿರುವುದು ಲಾಭಕ್ಕಾಗಿ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.



ಈ ಬಗ್ಗೆ ಬೇಕಿದ್ದರೆ ಲೇ ಔಟ್ ಮಾಲೀಕರ ಸಭೆ ಕರೆದು ಮುಕ್ತವಾಗಿ ಚರ್ಚಿಸಿ, ಕನಿಷ್ಟ ಕಾನೂನು, ನಿಯಮಾವಳಿ ರೂಪಿಸಬೇಕು. ಇಂತಿಷ್ಟು ಮೊತ್ತ ನಿಗದಿಗೊಳಿಸಲು ಮುಂದಾಗಲಿ.

ಇಲ್ಲದಿದ್ದರೆ ನಮ್ಮ ಜಮೀನು ಅಭಿವೃದ್ದಿ ಪಡಿಸಲಿ, ಇಲ್ಲವೇ ಅವರೇ ಜಮೀನು ಖರೀದಿ ಬಡವರಿಗೆ ಆರ್ಥಿಕವಾಗಿ ಹಿಂದುಳಿದ ಬಡ ಜನರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಲಿ. ಅದು ಬಿಟ್ಟು ಕಲ್ಲು ಕಿತ್ತು ಸಂಕಷ್ಟದ ಸಂದರ್ಭದಲ್ಲಿ ಮತ್ತಷ್ಟು ಹೊರೆಯಾಗಬಾರದು ಎಂದು ಆಗ್ರಹಿಸಿದರು.



ಹುಡಾ ಅಧ್ಯಕ್ಷ ನಾಗೇಶ ಕಲಬರುಗಿ ಅವರು ತೆರವು ಕಾರ್ಯಾಚರಣೆಯನ್ನು ನಾವು ವಿರೋಧಿಸುತ್ತಿಲ್ಲ.ಅದನ್ನು ಸ್ವಾಗತಿಸುತ್ತೇವೆ. ಆದರೆ ಅದಕ್ಕೆ ಕನಿಷ್ಟ ಮಾನದಂಡಗಳಿರಲಿ. ಮೊದಲು ಸಭೆ ನಡೆಸಿ, ಮಾಹಿತಿ ಪಡೆದು ಸಾಧ್ಯವಾದಷ್ಟು ನೆರವು ನೀಡಲಿ. ಅದು ಬಿಟ್ಟು ಏಕಾಎಕಿ ಕಾರ್ಯಾಚರಣೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಈಗಾಗಲೇ ಹುಬ್ಬಳ್ಳಿ-ಧಾರವಾಡದಅನೇಕಅಕ್ರಮ ಸಕ್ರಮ ಬಡಾವಣೆಗಳಲ್ಲಿ ನೀರು, ರಸ್ತೆ, ಅಭಿವೃದ್ದಿ ಕಾಮಗಾರಿಗಳನ್ನು ನಮ್ಮ ಜನಪ್ರತಿನಿಧಿಗಳು ಕೈಗೊಂಡಿದ್ದಾರೆ. ಸರಕಾರವೇ ಅಕ್ರಮ ಸಕ್ರಮ ಮಾಡುತ್ತಿದೆ. ಇದು ಕಾನೂನು ಬಾಹಿರವಲ್ಲ.



ಇದು ಕಂದಾಯ ನಿವೇಶನಗಳಲ್ಲಿ ಬರುತ್ತದೆ. ಸಾಲ ಕೂಡ ಇವುಗಳ ಮೇಲೆ ಬಡವರಿಗೆ ಸಿಗಲ್ಲ. ಕನಿಷ್ಟ ದುಡಿದ ಹಣದಲ್ಲಿ ನಿವೇಶನ ಖರೀದಿಸಿ ಕಂತಿನಲ್ಲಿ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಈ ಬಗ್ಗೆ ಬರುವ ದಿನಗಳಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲೆಯ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕರನ್ನು ಭೇಟಿ ಮಾಡಿ ವಸ್ತು ಸ್ಥಿತಿ ಮನವರಿಕೆ ಮಾಡಿಕೊಟ್ಟು ಬಡವರ ನೆರವಿಗೆ ಧಾವಿಸುವಂತೆ ಮನವಿ ಮಾಡಲಾಗುವುದು ಎಂದು ರಿಯಲ್ ಎಸ್ಟೇಟ್ ಉದ್ಯಮಿಇಮ್ರಾನ್ ಕಳ್ಳಿಮನಿ ತಿಳಿಸಿದರು.  



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *