ಅಪರಾಧ

ಧಾರವಾಡಕ್ಕೆ ಬಂದಿದ್ದಾನೆ ಖತರ್ನಾಕ್ ಕಳ್ಳ : ಹೋಟೆಲ್ ಉದ್ಯಮಿಗಳೇ ಎಚ್ಚರ…..!




ಧಾರವಾಡ prajakiran.com: ಆತ ನೋಡಲು ಸೂಟು, ಬೂಟು ಹಾಕಿಕೊಂಡು ಖಡಕ್ ಆಗಿ ಇರ್ತಾನೆ. ನೋಡಿದವರು ಆತ ಕೋಟ್ಯಾಧೀಶ ಇರಬಹುದು ಎಂದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಉಳಿದುಕೊಂಡು ಐಷಾರಾಮಿ ಸೇವೆ ಪಡೆದುಕೊಂಡು ಕೊನೆಗೆ ಹೋಟೆಲ್ ನಲ್ಲೇ ಇರುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು, ಹೋಟೆಲ್ ಬಿಲ್ ಕೂಡ ಕೊಡದೇ ಪರಾರಿಯಾಗ್ತಾನೆ.



ಈಗಾಗಲೇ ಈ ವ್ಯಕ್ತಿ ಭಾರತದ ದೊಡ್ಡ ದೊಡ್ಡ 181 ಹೋಟೆಲ್ ಗಳಲ್ಲಿ ಈ ರೀತಿ ಮಾಡಿ ಪೊಲೀಸರ ಅತಿಥಿ ಕೂಡ ಆಗಿದ್ದ.

ಈಗ ಅದೇ ವ್ಯಕ್ತಿ ಧಾರವಾಡಕ್ಕೂ ಬಂದಿದ್ದು, ಹೋಟೆಲ್ ಒಂದರ ಮ್ಯಾನೇಜರ್ ಗೆ ಚಳ್ಳೆಹಣ್ಣು ತಿನ್ನಿಸಿ ಹೋಗಿದ್ದಾನೆ. ಹೌದು ಇದು ಅಚ್ಚರಿಯಾದ್ರೂ ನಂಬಲೇ ಬೇಕಾದ ಕಟು ಸತ್ಯ.




ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಎದುರಿಗೆ ಇರುವ ದ್ವಾರವಾಟಾ ಎಂಬ ಹೋಟೆಲ್ ಗೆ ಕಳೆದ ಕೆಲ ದಿನಗಳ ಹಿಂದೆ ಭೀಮ್ಸೆಂಟ್ ಜಾನ್ ಎಂಬ ಈ ವ್ಯಕ್ತಿ ಬಂದು ಮೂರು ದಿನಗಳ ಕಾಲ ವಸತಿ ಉಳಿದಿದ್ದ.

ಹೋಟೆಲ್ ನಲ್ಲಿ ಹೆಚ್ಚಿನ ವೆಚ್ಚದಲ್ಲಿರುವ ಐಷಾರಾಮಿ ರೂಮ್ ನಲ್ಲಿ ಉಳಿದುಕೊಂಡಿದ್ದ. ಮೊದಲೇ ಈ ಹೋಟೆಲ್ ಗೆ ಕರೆ ಮಾಡಿ ಕಂಪೆನಿಯೊಂದರಲ್ಲಿ ನಾನು ಕೆಲಸ ಮಾಡ್ತಾ ಇದ್ದು, ನನಗೆ ರೂಮ್ ಬೇಕು ಎಂದು ಬುಕ್ ಮಾಡಿಸಿಕೊಂಡಿದ್ದ.



ಮೂರು ದಿನಗಳ ಕಾಲ ರೂಮ್ ನಲ್ಲಿ ಉಳಿದು ತನಗೆ ಏನು ಬೇಕೋ ಎಲ್ಲವನ್ನೂ ತರಿಸಿಕೊಂಡು ಮಜಾ ಮಾಡಿದ್ದಾನೆ. ಆ ಹೋಟೆಲ್ ಮ್ಯಾನೇಜರ್ ನೊಂದಿಗೆ ಸ್ನೇಹ ಮಾಡಿಕೊಂಡಿದ್ದ ಈತ ಮ್ಯಾನೇಜರ್ ಬಳಿಯೇ ಲ್ಯಾಪ್ ಟಾಪ್ ತರಿಸಿಕೊಂಡಿದ್ದ.

ಮೂರು ದಿನಗಳ ಬಳಿಕ ಆ ವ್ಯಕ್ತಿ ಬೆಳ್ಳಂಬೆಳಿಗ್ಗೆ ಹೋಟೆಲ್ ನಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಆತ ಹೊರಹೋಗುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.




ಮೂರು ದಿನ ಆತ ಉಳಿದಿದ್ದ 12 ಸಾವಿರ ಬಿಲ್ ನೀಡದೇ, ಹೋಟೆಲ್ ಸಿಬ್ಬಂದಿಯ ಲ್ಯಾಪಟಾಪ್ ನ್ನೂ ಎಗರಿಸಿಕೊಂಡು ಪರಾರಿಯಾಗಿದ್ದಾನೆ.

ಈ ಸಂಬಂಧ ಧಾರವಾಡದ ಉಪನಗರ ಠಾಣೆಯಲ್ಲಿ ದೂರು ಸಹ ದಾಖಲು ಮಾಡಲಾಗಿದೆ ಎಂದು ಹೋಟೆಲ್ ಮಾಲೀಕ ರಾಜೇಶ ತಿಳಿಸಿದ್ದಾರೆ.



 ಆತ ನೋಡಲು ಒಳ್ಳೆಯ ವ್ಯಕ್ತಿಯ ತರಹ ಕಾಣುತ್ತಿದ್ದ. ಮೂರು ದಿನ ನಮ್ಮ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದ.

ಆತ ಬಿಲ್ ಕೊಟ್ಟು ಹೋಗುತ್ತಾನೆ ಎಂದೇ ನಾವು ನಂಬಿದ್ದೆವು. ಆದರೆ, ಆತ ಹೋಟೆಲ್ ನಿಂದ ಕಾಲ್ಕಿತ್ತ ಮೇಲೇ ಅವನು ಫ್ರಾಡ್ ಎಂಬುದು ತಿಳಿಯಿತು ಅಂತಾ ಹೋಟೆಲ್ ಮ್ಯಾನೇಜರ್ ತಿಳಿಸಿದ್ದಾರೆ.

ಈ ವ್ಯಕ್ತಿ ಮುಂಬೈ, ಹೈದರಾಬಾದ್ ಮತ್ತು ದೆಹಲಿಯ 181 ಹೋಟೆಲ್ ಗಳಲ್ಲಿ ಉಳಿದುಕೊಂಡು ಇದೇ ರೀತಿ ಮಾಡಿ ಬಂದಿದ್ದಾನೆ.



ಈತನಿಗೆ 61 ವರ್ಷದ ವಯಸ್ಸು ಇದ್ದು, ಇವನು ತಮಿಳುನಾಡು ಮೂಲದವನು. ಹೋಟೆಲ್ ಗೆ ಹೋಗುವಾಗ ತನ್ನ ನಿಜವಾದ ಗುರುತಿನ ಚೀಟಿಯನ್ನೇ ನೀಡುತ್ತಾನೆ.

ಆದ್ರೆ, ವಾಸ್ತವವಾಗಿ ಆತ ಅಲ್ಲಿ ಇರುವುದೇ ಇಲ್ಲ. ಇಂತ ವ್ಯಕ್ತಿ ಇದೀಗ ಧಾರವಾಡಕ್ಕೆ ಬಂದಿದ್ದು, ಹೋಟೆಲ್ ಉದ್ಯಮಿಗಳು ಎಚ್ಚರವಹಿಸಬೇಕು ಎಂಬುದು ನಮ್ಮ ಕಳಕಳಿ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *