ಹುಬ್ಬಳ್ಳಿ prajakiran.com : ಕೊರೋನಾ ವೈರಸ್ ಸಂಪೂರ್ಣವಾಗಿ ಹೋಗುವವರೆಗೆ ಪ್ರಾಥಮಿಕ ಹಂತದಲ್ಲಿ ಶಾಲೆ ಆರಂಭ ಬೇಡ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಾಥಮಿಕ ಶಾಲೆ ಹೊರತುಪಡಿಸಿ ಉಳಿದೆಲ್ಲಾ ಆರಂಭ ಮಾಡಲಿ ಎಂದು ತಮ್ಮ ಸಹಮತ ವ್ಯಕ್ತಪಡಿಸಿದರು.
ಇದೀಗ ನವೆಂಬರ್ 17 ರಿಂದ ಕಾಲೇಜ್ ಆರಂಭ ಮಾಡುವುದು ತಪ್ಪೆನಿಲ್ಲ. ಇದಕ್ಕೆ ತಮ್ಮ ಒಪ್ಪಿಗೆ ಇದೆ ಎಂದರು.
ಈ ವೇಳೆ ಹತ್ತು ಮಕ್ಕಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕುಡಿಸಬಾರದು.
ಶೇಕಡಾ 50 ರಷ್ಟು ಸಿಲೆಬಸ್ ಕಡಿಮೆ ಮಾಡಬೇಕು ಎಂದು ಹೊರಟ್ಟಿ ಆಗ್ರಹಿಸಿದರು.