ರಾಜ್ಯ

ಧಾರವಾಡದ ಹೆಬ್ಬಳ್ಳಿಯ ನಾಲ್ಕು ಸರಕಾರಿ ಶಾಲೆಗಳ 1295 ಮಕ್ಕಳಿಗೆ ನೋಟ್ ಬುಕ್ ವಿತರಣೆ

ಸರಕಾರಿ ಶಾಲೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳು ಶಿಕ್ಷಣವಂತರಾಗಬೇಕು : ಡಿಡಿಪಿಐ ಎಸ್ ಎಸ್ ಕೆಳದಿಮಠ

ಧಾರವಾಡ : ಧಾರವಾಡದ ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ
ಹೆಬ್ಬಳ್ಳಿಯ ಕಿರಿಯ ಪ್ರಾಥಮಿಕ ಉರ್ದು ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆ ಮತ್ತು
ಸರಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯ 1295 ಮಕ್ಕಳಿಗೆ ಸೋಮವಾರ
ನೋಟ್ ಬುಕ್ ವಿತರಣೆ ಮಾಡಲಾಯಿತು.

ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ
ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಎಸ್ ಎಸ್ ಕೆಳದಿಮಠ, ಧಾರವಾಡ ತಾಲೂಕಿನ 125 ಶಾಲೆಗಳ 30 ಸಾವಿರ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುತ್ತಿರುವುದು ಅಭಿಮಾನದ ಸಂಗತಿ.

ಈ‌ ಮಕ್ಕಳು ನಿಜವಾಗಿಯೂ ಅದೃಷ್ಟವಂತರು. ನಾವು ಪ್ರಾಥಮಿಕ ಶಾಲೆ ಓದುವಾಗ ನೋಟ್ ಬುಕ್ ಗಗನ ಕುಸುಮವಾಗಿತ್ತು. ಒಂದು ಪುಸ್ತಕ ಖರೀದಿಸಿ ಅದರಲ್ಲಿ ಭಾಗವಾಗಿ ವಿಂಗಡಿಸಿ ಕಲಿತ್ತಿದ್ದೇವು ಎಂದು ಸ್ಮರಿಸಿದರು.

ಹೀಗಾಗಿ ಬಸವರಾಜ ಕೊರವರ ಅವರಿಗೆ ಶಿಕ್ಷಣ ಇಲಾಖೆ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಮಕ್ಕಳು ಸರಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು
ಶಿಕ್ಷಣವಂತರಾಗಬೇಕು. ಜೊತೆಗೆ ಭರವಸೆಯನ್ನು ಇಟ್ಟುಕೊಂಡು ಶಾಲೆ ಕಲಿತು ಒಳ್ಳೆಯ ಅಧಿಕಾರಿಗಳಾಗಿ ಹಳ್ಳಿ ಹೆಸರು ಬೆಳಗಬೇಕು.

ಸರಕಾರಿ ಶಾಲೆಗಳ ಮಕ್ಕಳು ಸದೃಢರು. ಶಾಲೆಯಲ್ಲಿ ಕೂಡ ಕಲಿಕೆಯ ವಾತವರಣ ಚೆನ್ನಾಗಿ ಇರುತ್ತದೆ.
ಸರಕಾರಿ ಶಾಲೆ ಮಕ್ಕಳು ಉನ್ನತ ಮಟ್ಟದ ಕನಸು, ಗುರಿ, ಇಟ್ಟು ಕೊಂಡು ಕೆಲಸ ಮಾಡಿದರೆ ಜೀವನದಲ್ಲಿ ಬೇಕಾದಷ್ಟು ಸಾಧಿಸಲು ಸಾಧ್ಯ ಎಂದು ಹೇಳಿದರು.

ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮಾತನಾಡಿ, ಸರಕಾರಿ ಶಾಲೆಯಿಂದ ಶಿಕ್ಷಣ ಪಡೆದು ಹೊರ ಬಂದ ಅನೇಕ ಮಕ್ಕಳು ಸಮಾಜದ ಅತ್ಯುನ್ನತ ಸ್ಥಾನದಲ್ಲಿ ಇದ್ದಾರೆ.

ಹೀಗಾಗಿ ಸರಕಾರಿ ಶಾಲೆಯ ಮಕ್ಕಳು ಬಡವರಲ್ಲ. ಸರಕಾರ ನಮ್ಮದು, ಹೀಗಾಗಿ ಶಾಲೆ ಕೂಡ ನಮ್ಮದು ಎಂಬ ಭಾವನೆ ಎಲ್ಲರಲ್ಲೂ ‌ಮೂಡಬೇಕು ಎಂದರು.

ಇದಕ್ಕೂ ಮುನ್ನ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆ ವತಿಯಿಂದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹೆಬ್ಬಳ್ಳಿ ಗ್ರಾಪಂ ಅಧ್ಯಕ್ಷ ತೇಜಸ್ವಿನಿ ಟಿ. ತಲವಾಯಿ, ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದಪ್ಪ ಕುಂಬಾರ, ಇಸ್ಲಾಂ ಧರ್ಮ ಗುರುಗಳಾದ ಮೌಲಾನಾ ಶಾಕೀರಲಿ, ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ದಾವಲ ಎಲಿಗಾರ ಆಯೇಶಾ ಎಲಿಗಾರ, ಗುರಪ್ಪ ಚಿಲಕವಾಡ, ಮುಖ್ಯ ಶಿಕ್ಷಕಿ ಬಿ ಎಂ ಸುತಾರ ಸಹ ಶಿಕ್ಷಕರಾದ ಎಲ್ ಐ ಲಕ್ಕಮ್ಮನವರ, ಕುದ್ದುಶಿಯಾ ಶಿವಳ್ಳಿ,
ಎಸ್ ಡಿಎಂ ಸಿ ಅಧ್ಯಕ್ಷರಾದ ಸುರೇಶ ಅಂಬಿಗೇರ, ಹಟೇಲ ಸಾಬ ಗುಡಸಲಮನಿ, ನಾಗರಾಜ ಕಿರಣಗಿ,
ಸದಸ್ಯರಾದ ಚಂದ್ರಶೇಖರ ಮಟ್ಟಿ, ಶಿವಾನಂದ ಹೂಗಾರ, ಚಂದ್ರಶೇಖರ ಲಕ್ಕಮ್ಮನವರ, ವಾಸು ಮುಂಗೋಡಿ, ರಮೇಶ ಬಡಿಗೇರ, ಅಶೋಕ‌ ಹಡಪದ, ಬಾಳು ತುಳಜಪ್ಪನವರ, ಫಕೀರ ತಲವಾರ, ಗಂಗಯ್ಯ ಕಲ್ಮಠ, ಶಿಕ್ಷಕರ ಸಂಘಟನೆಯ ವೈ ಎಚ್ ಬಣವಿ, ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *