ರಾಜ್ಯ

ಶಿಕ್ಷಕರು ಈ ಬಾರಿ ಬದಲಾವಣೆ ಬಯಸಿದ್ದು, ಬದಲಾವಣೆಗಾಗಿ ಮತನೀಡಿ : ಬಸವರಾಜ ಗುರಿಕಾರ

ಧಾರವಾಡ prajakiran.com : ನಿವೃತ್ತ ಶಿಕ್ಷಕ, ಸಂಘಟನಾ ಚತುರ, ಪ್ರಾಮಾಣಿಕ ಹೋರಾಟಗಾರ ಬಸವರಾಜ ಗುರಿಕಾರ ಶಿಕ್ಷಕರ ಕಣ್ಮಣಿ ಎಂದೇ ನಾಡಿಗೆ ಚಿರಪರಿಚಿತ.

ಶಿಕ್ಷಕ ವೃತ್ತಿಯಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿ ಶಿಕ್ಷಕರ ಸಮಸ್ಯೆಗಳೇನು? ಈಡೇರದಿರಲು ಕಾರಣವೇನು? ಹೀಗೆ ಅನೇಕ ವಿಷಯಗಳ ಬಗ್ಗೆ ಸಮಗ್ರವಾಗಿ ಅರಿತಿದ್ದಾರೆ.

ಹೀಗಾಗಿ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಗುರಿಕಾರ, ಗೆಲುವಿನ ವಿಶ್ವಾಸ ಹೊಂದಿದ್ದಾರೆ.

ಶಿಕ್ಷಕರಾಗಿ ಸಂಘಟನೆ ಮೂಲಕ ದಶಕಗಳ ಕಾಲ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. ಮುಂದಿನ ಯೋಜನೆಗಳು, ಶಿಕ್ಷಕರ ಮತದಾರರ ಸಮಸ್ಯೆಗಳ ಇತ್ಯರ್ಥಕ್ಕೆ ತಮ್ಮದೇಯಾದ ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ.

ಈ ವಿಷಯವಾಗಿ ‘ಪ್ರಜಾಕಿರಣ.ಕಾಮ್ ಗೆ’ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

* ಶಿಕ್ಷಕ ಸಂಘಟನೆಗಳ ಹೋರಾಟದ ಅನುಭವ ನೆರವಾಗಲಿದೆಯೇ?
– ಶಿಕ್ಷಕರ ಕ್ಷೇತ್ರವನ್ನು 42 ವರ್ಷಗಳಿಂದ ಒಬ್ಬರೇ ಪ್ರತಿನಿಧಿಸುತ್ತಿದ್ದಾರೆ. ಆದಾಗ್ಯೂ ಶಿಕ್ಷಕರ ಪ್ರಮುಖ ಬೇಡಿಕೆಗಳು ಈಡೇರಿಲ್ಲಎಂದು ಕೂಗು ಇದೆ.

ಈ ವಿಚಾರವನ್ನು ಶಿಕ್ಷಕರೂ ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಈ ಬಾರಿ ಬದಲಾವಣೆ ಬಯಸಿದ್ದಾರೆ.

ನಾನು ಸುಮಾರು 40 ವರ್ಷಗಳಿಂದ ಶಿಕ್ಷಕರ ಬೇಕು, ಬೇಡಿಕೆಗಳಿಗೆ ನಿರಂತ ಹೋರಾಡಿದ್ದೇನೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಂಘಟನೆ ಮೂಲಕ ಸಮಸ್ಯೆಗಳಿಗೆ ಸ್ಪಂದಿಸಿರುವ ಆಧಾರದ ಮೇಲೆ ವಿಧಾನ ಪರಿಷತ್ ಪ್ರವೇಶಿಸಲು ಇಚ್ಛಿಸಿದ್ದೇನೆ.

ಈಗಾಗಲೇ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಿದ ಅನುಭವ ಇದೆ. ಹೀಗಾಗಿ ಶಿಕ್ಷಕರು ನನಗೆ ಬೆಂಬಲ ನೀಡಲಿದ್ದಾರೆ ಎಂಬ ಭರವಸೆ ಇದೆ.

* ಸರ್ಕಾರಿ ನೌಕರರು ಮತ್ತು ಸರ್ಕಾರಿ, ಖಾಸಗಿ ಅನುದಾನಿತ ಅನುದಾನ ರಹಿತ ಶಾಲೆ ಶಿಕ್ಷೃಕರಿಗೆ ಯೋಜನೆಗಳೇನು?
– ನೆರೆ ಹೊರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಶಿಕ್ಷಕರಿಗಿಂತ ರಾಜ್ಯ ಶಿಕ್ಷಕರು ಕಡಿಮೆ ವೇತನ ಶ್ರೇಣಿ ಸೌಲಭ್ಯ ಪಡೆಯುತ್ತಿದ್ದಾರೆ.

ಈ ತಾರತಮ್ಯ ನಿವಾರಿಸಿ ಶಿಕ್ಷಕರಿಗೆ, ಪದವಿ ಪೂರ್ವ ಉಪನ್ಯಾಸಕರಿಗೆ ಉನ್ನತ ವೇತನ ಶ್ರೇಣಿ ಸೌಲಭ್ಯ ಕೊಡಿಸಲು ಒತ್ತಾಯಿಸುತ್ತೇನೆ.

ಖಾಸಗಿ ಶಾಲಾ ಶಿಕ್ಷೃಕರಿಗೆ ಸರ್ಕಾರಿ ಶಾಲಾ ಶಿಕ್ಷೃಕರ ಸಮಾನ ವೇತನ, ಪಿಂಚಣಿ ಹಾಗೂ ಸೇವಾ ಭದ್ರತೆ ಒದಗಿಸುವುದು,

ಹಳೇ ಪಿಂಚಣಿ ಯೋಜನೆ ತಕ್ಷೃಣ ಜಾರಿಗೊಳಿಸಿ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸುವುದು. ಸರ್ಕಾರಿ ಶಿಕ್ಷಕರಿಗೆ ಸಿಗುವ ಸೌಲಭ್ಯಗಳನ್ನು ಖಾಸಗಿ ಶಿಕ್ಷಕರಿಗೆ ತ್ವರಿತ ಗತಿಯಲ್ಲಿ ಕೊಡಿಸುವುದು,

ಉನ್ನತ ಶಿಕ್ಷಣದಲ್ಲಿನ ಸಮಸ್ಯೆಗಳಿಗೆ ಪರಿಹಾರ ಹಾಗೂ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವುದು, ಖಾಲಿ ಹುದ್ದೆಗಳ ಭರ್ತಿ.

ದಶಕಗಳಿಂದ ಹಾಗೇ ಉಳಿದ ಕಾಲ್ಪನಿಕ ವೇತನ ಸಮಸ್ಯೆ ನಿವಾರಣೆ, ಶಿಕ್ಷಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಯನ್ನು ಖಾಸಗಿ ಶಿಕ್ಷಕರಿಗೂ ವಿಸ್ತರಿಸುವುದು ನನ್ನ ಪ್ರಮುಖ ಯೋಜನೆಗಳು.

ಇದರ ಹೊರತಾಗಿ ಎಲ್ಲ ಶಿಕ್ಷಕರಿಗೆ ಅನುಕೂಲವಾಗುವ ಅನೇಕ ಯೋಜನೆ ರೂಪಿಸಲಾಗಿದೆ.
* ಕ್ಷೇತ್ರದಲ್ಲಿ ಮತದಾರರ ಸ್ಪಂದನೆ ಹೇಗಿದೆ?
– ಪಶ್ಚಿಮ ಶಿಕ್ಷಕರ ಕ್ಷೇತ್ರ 4 ಜಿಲ್ಲೆಗಳ ವಿಸ್ತಾರ ಹೊಂದಿದೆ. ನಾನು ಪ್ರಚಾರಕ್ಕೆ ತೆರಳಿದ ಕಡೆಗಳಲ್ಲಿ ಮತದಾರರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಈ ಕ್ಷೇತ್ರದಿಂದ ಆಯ್ಕೆಯಾದವರು ಚುನಾವಣೆ ಇದ್ದಾಗ ಮಾತ್ರ ಬಂದು ನಂತರ ಮರೆತಿರುವ ಕಾರಣ ಕ್ಷೇತ್ರ ನಿರ್ಲಕ್ಷೃಕ್ಕೆ ಒಳಗಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಹುತೇಕ ಶಿಕ್ಷಕರು ಸ್ವಯಂ ಪ್ರೇರಿತರಾಗಿ ಮನೆ ಮನೆಗೆ ತೆರಳಿ ನನ್ನ ಪರ ಪ್ರಚಾರ ನಡೆಸುತ್ತಿದ್ದಾರೆ. ಮತದಾರರ ಬೆಂಬಲ ಬಹುದೊಡ್ಡ ಹುಮ್ಮಸ್ಸು ನೀಡಿದೆ.

* ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?
– ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಸಮಸ್ಯೆಗಳದ್ದೇ ಒಂದು ದಾಖಲೆ ಎಂಬಂತಾಗಿದೆ.

ಕಳೆದ 2 ಚುನಾವಣೆಗಳ ಬಳಿಕ ಸಮಸ್ಯೆಗಳು ಹೆಚ್ಚುತ್ತಿದ್ದರೂ ಪರಿಹಾರ ಕೊಡಿಸುವಲ್ಲಿ ಈ ಕ್ಷೇತ್ರ ಪ್ರತಿನಿಧಿಸುವ ಜನಪ್ರತಿನಿಧಿ ವಿಫಲರಾಗಿದ್ದಾರೆ. ಸಮಸ್ಯೆಗಳು ಹಾಗೇ ಇವೆ ಎಂಬುದನ್ನು ಶಿಕ್ಷಕರೂ ಒಪ್ಪಿದ್ದಾರೆ.

ಈ ಎಲ್ಲ ಸಮಸ್ಯೆಗಳಿಗೆ ತ್ವರಿತ ಗತಿಯಲ್ಲಿ ಪರಿಹಾರ ಕೊಡಿಬಲ್ಲೆ ಎಂಬ ನಂಬಿಕೆ ನನ್ನಲ್ಲಿದೆ. ಇದೇ ಕಾರಣಕ್ಕೆ ಆಯ್ಕೆ ಮಾಡುವಂತೆ ಮನವಿ ಮಾಡಿದ್ದೇನೆ. ಶಿಕ್ಷಕ ಮತದಾರರೂ ಆಯ್ಕೆಗೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಇದೆ.

* ನೇರ ಪ್ರತಿಸ್ಪರ್ಧಿ ಯಾರು?
– ಪ್ರಸ್ತುತ ಚುನಾವಣೆಯಲ್ಲಿ ಸ್ಪರ್ಧಿಸಿರುವವರು ಎಲ್ಲರೂ ನನ್ನ ಎದುರಾಳಿಗಳೇ. 42 ವರ್ಷಗಳಿಂದ ಈ ಕ್ಷೇತ್ರವನ್ನು ಒಬ್ಬರೇ ಪ್ರತಿನಿಧಿಸುತ್ತಿದ್ದಾರೆ.

ಇದೇ ಕಾರಣಕ್ಕೆ ಶಿಕ್ಷಕರು ಈ ಬಾರಿ ಬದಲಾವಣೆ ಬಯಸಿದ್ದು, ನನ್ನನ್ನು ಆಯ್ಕೆ ಮಾಡಬೇಕು ಎಂದು ಮತದಾರ ಬಾಂಧವರು ನಿರ್ಣಯಿಸಿದ್ದಾರೆ. ಆಯ್ಕೆಯಾಗುವ ಭರವಸೆ ಸಹ ಇದೆ.

ಸೇವೆ, ಸಂಘಟನೆ ಮತ್ತು ಹೋರಾಟ
ನನಗೆ ಯಾವುದೇ ಜವಾಬ್ದಾರಿ ವಹಿಸಿದರೂ ಕಾಯಾ, ವಾಚಾ, ಮನಸಾ ನಿರ್ವಹಿಸುತ್ತೇನೆ. ಅದಕ್ಕೆ ನಾನು ನಿರ್ವಹಿಸಿ ಯಶಸ್ವಿ ಕಂಡ ಕಾರ್ಯಗಳೇ ಸಾಕ್ಷಿ. ಶಿಕ್ಷಕ ತರಬೇತಿ ಮುಗಿಸಿದ ನಂತರ 1978-79ರಲ್ಲಿ ನಿರುದ್ಯೋಗಿ ಶಿಕ್ಷಕರ ಸಂಟನೆ ಅಗತ್ಯವಿತ್ತು. ಕರ್ನಾಟಕ ರಾಜ್ಯ ಟಿಸಿಎಚ್ ಈಗಿನ ಡಿಎಡ್, ಬಿಎಡ್ ತರಬೇತಿ ಪಡೆದ ನಿರುದ್ಯೋಗಿ ಶಿಕ್ಷಕರ ಸಂ ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷನಾದೆ. ನಂತರ ನಿರಂತರ ಹೋರಾಟದ ಫಲವಾಗಿ 1980- 81ರಲ್ಲಿ ಅಖಂಡ ಧಾರವಾಡ ಜಿಲ್ಲೆ (ಗದಗ, ಹಾವೇರಿ, ಧಾರವಾಡ ಸೇರಿ) ಶಿಕ್ಷಕರ ನೇಮಕಾತಿ ನಡೆದು, ನಂತರ ಸರ್ಕಾರ ಅದನ್ನು ರದ್ದುಗೊಳಿಸಿತು. ಸರ್ಕಾರದ ಕ್ರಮದ ವಿರುದ್ಧ 45 ದಿನಗಳ ಹೋರಾಟ ನಡೆಸಿದಾಗ 483 ಶಿಕ್ಷಕರು ವೃತ್ತಿಗೆ ಸೇರುವಂತೆ ಮಾಡಿ ನೇಮಕಾತಿಯ ಕ್ರಮಬದ್ಧ ಆದೇಶ ಕೊಡಿಸುವಲ್ಲಿ ಯಶಸ್ಸು ದೊರಕಿಸಿ ಕೊಟ್ಟ ಹೆಮ್ಮೆ ಇದೆ.
ಕಿರು ಪರಿಚಯ
ಬಸವರಾಜ ಗುರಿಕಾರ ಗದಗ ಜಿಲ್ಲೆ ರೋಣ ತಾಲೂಕಿನ ಹೊಸಹಳ್ಳಿ ಮೂಲದವರು. ರೋಣ, ಗದಗ, ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡಿ 1981ರಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿ, ಪ್ರಸ್ತುತ ನಿವೃತ್ತರಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಶಿಕ್ಷಕರಾದ ನಂತರ ಕರ್ನಾಟಕ ರಾಜ್ಯ ಶಿಕ್ಷಕ ಸಂದ ಧಾರವಾಡ ತಾಲೂಕು ಟಕ ಸ್ಥಾಪನೆ, ತಾಲೂಕು ಅಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷ, ರಾಜ್ಯ ಪ್ರಧಾನ ಕಾರ್ಯದರ್ಶಿ, ನಿರಂತರ 3 ಅವಧಿಗೆ ರಾಜ್ಯ ಸರ್ಕಾರಿ ನೌಕರರ ಸಂದ ಧಾರವಾಡ ಜಿಲ್ಲಾ ಉಪಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಂತರ ಅಧ್ಯಕ್ಷರಾಗಿ ಆಯ್ಕೆ. ಜತೆಗೆ 4 ಅವಧಿಗೆ ಜಿಲ್ಲಾಧ್ಯಕ್ಷರಾಗಿ ಸಹ ನಿರಂತರ ಸೇವೆ ಸಲ್ಲಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *