ಧಾರವಾಡ prajakiran.com : ಮನೆಯ ಹಿತ್ತಲದಲ್ಲಿ ಬೆಳೆದಿದ್ದ ಗಾಂಜಾ ಪತ್ತೆ ಮಾಡಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಧಾರವಾಡದ ಮಹಿಳಾ ಪಿಎಸ್ಐ ಯಶಸ್ವಿಯಾಗಿದ್ದಾರೆ.
ಧಾರವಾಡ ತಾಲೂಕಿನ ಹಿರೇಮಲ್ಲಿಗವಾಡ ಗ್ರಾಮದ ರಾಮನಗೌಡ ಕಲ್ಲನಗೌಡ ಪಾಟೀಲ ತನ್ನ ಹಿತ್ತಲಿನಲ್ಲೇ ಗಾಂಜಾವನ್ನ ಬೆಳೆದಿದ್ದ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಧಾರವಾಡ ಗ್ರಾಮೀಣ ಠಾಣೆ ಪಿಎಸೈ ಸುಮಾ ಗೋರಬಾಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಕಲ್ಲನಗೌಡ ಕಡೆಯಿಂದ 2ಕೆಜಿ 650 ಗ್ರಾಂ ಹಸಿ ಗಾಂಜಾವನ್ನ ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.